ಆಟವಾಡಲು ಹೊರಗೆ ಹೋದ ಪುಟಾಣಿ ಮಗುವೊಂದು ಮುದ್ದಾದ ಕಾಡುಪ್ರಾಣಿಯ ಜೊತೆಗೆ ಮನೆಗೆ ಮರಳಿ ತನ್ನ ತಾಯಿಯನ್ನು ಆಶ್ಚರ್ಯಚಕಿತಳನ್ನಾಗಿಸಿದೆ. ಈ ಅಪರೂಪದ ಘಟನೆ ನಡೆದಿರುವುದು ವರ್ಜೀನಿಯಾದಲ್ಲಿ.
ವರ್ಜೀನಿಯಾದಲ್ಲಿರುವ ಮ್ಯಾಷನುಟ್ಟೆನ್ ರೆಸಾರ್ಟಿಗೆ ಸ್ಟೆಫಾನಿ ಬ್ರೌನ್ ಕುಟುಂಬ ವಿಹಾರಕ್ಕೆಂದು ಹೋಗಿತ್ತು. ಸ್ಟೆಫಿನಿಯ 4 ವರ್ಷ ಪ್ರಾಯದ ಮಗ ಡೊಮಿನಿಕ್ ಆಟವಾಡಲು ಹೊರಗಡೆ ಹೋದವನು, ಬರುವಾಗ ಸಣ್ಣ ಜಿಂಕೆ ಮರಿಯೊಂದಿಗೆ ವಾಪಾಸ್ಸಾಗಿದ್ದಾನೆ.
ಜಿಂಕೆಮರಿಯೊಂದಿಗೆ ಡೊಮಿನಿಕ್ ಆನಂದದಿಂದ ನಿಂತಿರುವಂತೆ ತೋರುತ್ತಿದ್ದ. ಆತ ಹೊಸ ಗೆಳೆಯನೊಂದಿಗೆ ತುಂಬಾ ಕುಶಿಯಿಂದಿದ್ದ ಎಂದು ಸ್ಟೆಫಾನಿ WBTV ಗೆ ಹೇಳಿದ್ದಾರೆ.
ನಾನು ನೋಡುವಾಗ ಡೊಮಿನಿಕ್ ಹಾಗೂ ಜಿಂಕೆ ಪುಟ್ಟ ಮರಿ ಮನೆ ಪ್ರವೇಶ ದ್ವಾರದ ಬಳಿ ನಿಂತಿದ್ದರು, ನೋಡಿದಾಕ್ಷಣ ರೋಮಾಂಚನದಿಂದ ಏನು ಮಾಡಬೇಕೆಂದು ತೋಚದೆ ಸ್ತಂಬೀಭೂತಳಾಗಿ ನಿಂತಿದ್ದೆ, ತಕ್ಷಣ ಎಚ್ಚೆತ್ತು ಇವರ ಫೋಟೊ ಸೆರೆಹಿಡಿದೆ ಎಂದು WBTV ಗೆ ತಿಳಿಸಿದ್ದಾರೆ.
ತನ್ನ ಹೊಸ ಗೆಳೆಯನಿಗೆ ʼಫ್ಲಾಶ್ʼ ಎಂದು ಡೊಮಿನಿಕ್ ಹೆಸರಿಟ್ಟಿದ್ದಾನೆ. ಫ್ಲಾಶ್‌ನ ತಾಯಿಯೂ ಆತನನ್ನು ಹುಡುಕುತ್ತಿರಬಹುದು, ಅವನ ತಾಯಿಯ ಬಳಿ ಬಿಟ್ಟು ಬಾ ಎಂದು ಮಗನ ಮನವೊಲಿಸಿ ಕಳಿಸಿದ್ದಾಗಿ ಸ್ಟೆಫಾನಿ ತಿಳಿಸಿದ್ದಾರೆ.
ಬಳಿಕ ಈ ʼಅಪರೂಪದ ಗೆಳೆಯರʼ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಸ್ಟೆಫಾನಿ ಹಂಚಿಕೊಂಡಿದ್ದು ಇದುವರೆಗೂ 30 ಸಾವಿರಕ್ಕೂ ಹೆಚ್ಚು ಮಂದಿ ಈ ಫೋಟೋವನ್ನು ಹಂಚಿಕೊಂಡಿದ್ದು ಸಾವಿರಾರು ಮಂದಿ ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.