ಜೆಡಿಎಸ್ ಪಕ್ಷ ಸಂಘಟಿಸುವ ಸಲುವಾಗಿ ನಗರದ ಜೆಡಿಎಸ್ ಭವನದಲ್ಲಿ ಯುವನಾಯಕರ ಸಭೆ ನಡೆಸಲಾಯಿತು. ವಿದ್ಯಾರ್ಥಿ ಜನತಾದಳ ಮತ್ತು ಯುವಜನತಾದಳಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ, ಪಕ್ಷದ ಯುವಮೋರ್ಚದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಮುಖಂಡರು, ಹಲವು ಜೆಡಿಎಸ್ ಶಾಸಕರು, ಸಚಿವರುಗಳು ಹಾಜರಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಮುಂಬರುವ ಚುನಾವಣೆಯಲ್ಲಿ ಪಕ್ಷವು ಶೇಕಡಾ 40 ರಷ್ಟು ಯುವಕರಿಗೆ ಆದ್ಯತೆನೀಡುತ್ತದೆ. ಜೆಡಿಎಸ್ ಕಾರ್ಯಕರ್ತರು ಜನರ ಕಷ್ಟಕ್ಕೆ ಭಾಗಿಯಾಗಬೇಕು. ಒಂದೊಂದು ಜಿಲ್ಲೆಯಿಂದ ಪಕ್ಷ ಸಂಘಟಿಸಲು ಆಸಕ್ತಿಯಿರುವ ಯುವಕರನ್ನು ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ.
ಕರೋನಾದಿಂದ ಪಕ್ಷ ಸಂಘಟನೆಗೆ ಆದ್ಯತೆ ಕೊಡಲು ಆಗಿರಲಿಲ್ಲ. ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಯಾಗ ಬೇಕು. ಮುಂದಿನ ಚುನಾವಣೆಗಾಗಿ ಎರಡು ವರ್ಷ ತಾಲೂಕು ಪಂಚಾಯಿ ಮಟ್ಟದಲ್ಲಿ 2023 ರವ ವಿಶ್ರಾಂತಿಯಿಲ್ಲದೆ ಕೆಲಸ ಮಾಡೋಣ ಎಂದು ತಮ್ಮ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಮುಂದಿನ 15-20 ದಿನಗಳಲ್ಲಿ ಎರಡು ದಿನದ ಕಾರ್ಯಾಗಾರ ನಡೆಸಲಾಗುವುದು. ಜಿಲ್ಲಾ ಮತ್ತು ತಾಲೂಕು ಚುನಾವಣೆ ಘೋಷಣೆ ಆಗುವುದಕ್ಕೂ ಮುಂಚೆ ತಯಾರಿಯಾಗಿರಬೇಕು. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಾರ್ಯಕರ್ತರು ಶ್ರಮವಹಿಸಿ ಯಶಸ್ಸು ಸಾಧಿಸಿದ್ದಾರೆ. ಬೀದರ್ ತಮಕೂರು ಉತ್ತರಕನ್ನಡ ಜಿಲ್ಲೆ ರಾಯಚೂರು ಸೇರಿದಂತೆ ಇತರೆಡೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.