ಐಪಿಎಲ್ ಪಂದ್ಯಾಟದಲ್ಲಿ ಹೆಚ್ಚಿನ ತಂಡಗಳನ್ನು ಸೇರಿಸಿಕೊಳ್ಳುವ ಸಾಧ್ಯತೆಯನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA)ಯ ನಿರ್ದೇಶಕ ರಾಹುಲ್ ದ್ರಾವಿಡ್ ಬಹಿರಂಗಪಡಿಸಿದ್ದಾರೆ. ಐಪಿಎಲ್ ನ ತಂಡಗಳ ಸಂಖ್ಯೆಯನ್ನು ಹೆಚ್ಚಿಸುವುದು ಬಿಸಿಸಿಐನ ದೀರ್ಘಕಾಲಿಕ ಯೋಜನೆಯಾಗಿದ್ದು, ಯಾವುದೇ ಗುಣಮಟ್ಟದಲ್ಲಿ ರಾಜಿ ಆಗದಂತೆ ಎಂಟಕ್ಕಿಂತ ಹೆಚ್ಚು ತಂಡಗಳನ್ನು ಆಡಿಸಬಹುದೆಂದು ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2021 ರ ಐಪಿಎಲ್ ಪಂದ್ಯಾಟದಲ್ಲಿ 9 ತಂಡಗಳನ್ನು ಹಾಗೂ 2023 ರ ಐಪಿಎಲ್ ಪಂದ್ಯಾಕೂಟದಲ್ಲಿ 10 ತಂಡಗಳನ್ನು ಆಡಿಸುವುದಾಗಿ ಬಿಸಿಸಿಐ ದೀರ್ಘಕಾಲಿಕ ಯೋಜನೆ ಹಾಕಿಕೊಂಡಿದೆ ಎಂಬ ಮಾತುಗಳು ಈಗಾಗಲೇ ಕೇಳಿ ಬರುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2021 ರ ಪಂದ್ಯಾಕೂಟದಲ್ಲಿ 9 ತಂಡಗಳನ್ನು ಆಡಿಸುವುದು ಖಂಡಿತವಾಗಿಯೂ ಸಾಧ್ಯ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಸಹ-ಮಾಲಿಕ ಮನೋಜ್ ಬದಲೆ ಈ ಹಿಂದೆ ಹೇಳಿದ್ದರು. ಆ ಹಿನ್ನೆಲೆಯಲ್ಲಿ ರಾಹುಲ್ ದ್ರಾವಿಡ್ ವಿಶ್ವಾಸವೂ ಕುತೂಹಲ ಮೂಡಿಸಿದೆ.
ಆಡಲು ಅವಕಾಶ ಸಿಗದ ಸಾಕಷ್ಟು ಪ್ರತಿಭಾವಂತರು ಇದ್ದಾರೆ. ಆ ಪ್ರತಿಭಾವಂತರ ದೃಷ್ಟಿಕೋನದಲ್ಲಿ ನೋಡುವುದಾದರೆ ಐಪಿಎಲ್ ವಿಸ್ತರಣೆಗೆ ಸಿದ್ಧವಾಗಿದೆ ಎಂದು ನಾನು ಭಾವಿಸುತ್ತೇನೆ, ಪ್ರತಿಭೆಯ ದೃಷ್ಟಿಕೋನಕ್ಕೆ ಅನುಗುಣವಾಗಿ ಸಾಕಷ್ಟು ಹೊಸ ಹೆಸರುಗಳು ಮತ್ತು ಮುಖಗಳು ಇರುವುದರಿಂದ ನಾವು ಸಿದ್ಧರಿದ್ದೇವೆ ಎಂದು ನಾನು ನಂಬುವುದಾಗಿ ದ್ರಾವಿಡ್ ತಿಳಿಸಿದ್ದಾರೆ. ಹೆಚ್ಚಿನ ತಂಡಗಳಿದ್ದರೆ, ಎಲ್ಲಾ ಪ್ರತಿಭಾವಂತ ಆಟಗಾರರನ್ನು ಅಳವಡಿಸಬಹುದಾಗಿದೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.