ಕೋವಿಡ್‌ನಿಂದಾಗಿ ಮುಚ್ಚಲ್ಪಟ್ಟಿದ್ದ ಕಾಲೇಜುಗಳ ಮುನರಾರಂಭಕ್ಕೆ ಕೊನೆಗೂ ಸಮಯ ಕೂಡಿ ಬಂದಿದೆ. ನವೆಂಬರ್ 17ರಿಂದ ಪದವಿ, ಎಂಜಿನಿಯರಿಂಗ್ ಕಾಲೇಜುಗಳು ಪುನರಾರಂಭಗೊಳ್ಳಲಿವೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ದಾರೆ.
ಶುಕ್ರವಾರ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಡಿಪ್ಲೊಮಾ ಮತ್ತು ಸನಾತಕೋತ್ತರ ತರಗತಿಗಳು ಕೂಡಾ ಅಂದೇ ತೆರೆಯಲಿವೆ ಎಂದು ಅಶ್ವತ್ಥನಾರಾಯಣ ಟ್ವೀಟ್ ಮೂಲಕ ಹೇಳಿದ್ದಾರೆ.
Colleges in Karnataka will reopen for classes from November 17.
This decision is an outcome of a review meeting held under the leadership of CM @BSYBJP. Reopening of all Graduate, PG, Diploma & Engineering Colleges was discussed with all concerned departments' officials.
1/3 pic.twitter.com/hdbSHcmGZY
— Dr. Ashwathnarayan C. N. (@drashwathcn) October 23, 2020
“ತರಗತಿಗೆ ಖುದ್ದಾಗಿ ಹಾಜರಾಗುವುದು ಅಥವಾ ಆನ್‌ಲೈನ್ ಮೂಲಕ ಹಾಜರಾಗುವುದಕ್ಕೂ ಅವಕಾಶವಿದೆ. ತರಗತಿಗೆ ಭೌತಿಕವಾಗಿ ಹಾಜರಾಗಲು ಬಯಸುವ ವಿದ್ಯಾರ್ಥಿಗಳು, ಪೋಷಕರಿಂದ ಸಮ್ಮತಿ ಪತ್ರ ತರುವುದು ಕಡ್ಡಾಯ,” ಎಂದಿದ್ದಾರೆ.
ಇನ್ನು ಯುಜಿಸಿ ನೀಡಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತೀ ಜಿಲ್ಲಾ ಹಾಗೂ ಕಾಲೇಜು ಹಂತದಲ್ಲಿ ಮಾರ್ಗಸೂಚಿಗಳ ಕಡ್ಡಾಯ ಪಾಲನೆಗಾಗಿ ಟಾಸ್ಕ್‌ಪೋರ್ಸ್‌ಗಳನ್ನು ರಚಿಸಲಾಗುವುದು, ಎಂದು ತಿಳಿಸಿದ್ದಾರೆ.







