ಆರ್ಥಿಕತೆಯನ್ನು ಪುನರುತ್ಥಾನಗೊಳಿಸುವಲ್ಲಿ ಕೇಂದ್ರದ ಎಡವಿಕೆಯನ್ನು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಗುರುವಾರ ಟೀಕಿಸಿದ್ದಾರೆ. ಆರ್ಥಿಕತೆಯೆಂದರೆ ರಿಂಗ್‌ಮಾಸ್ಟರ್ ಕೋಲಿಗೆ ಪ್ರತಿಕ್ರಿಯಿಸುವ ಸರ್ಕಸ್ ಸಿಂಹವಲ್ಲ ಎಂದ ಅವರು ಆರ್ಥಿಕತೆಯು ಮಾರುಕಟ್ಟೆಯಿಂದ, ಬೇಡಿಕೆ ಮತ್ತು ಪೂರೈಕೆ, ಖರೀದಿ ಶಕ್ತಿ ಹಾಗೂ ಜನರ ಭಾವನೆಗಳಿಂದ ನಿರ್ಧರಿಸಲ್ಪಟ್ಟಿದೆ, ಪ್ರಸ್ತುತ ಅವು ಕಾಣೆಯಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಸರ್ಕಾರವು ಕೆಳಭಾಗದ ಅರ್ಧದಷ್ಟು ಕುಟುಂಬಗಳ ಕೈಯಲ್ಲಿ ಹಣವನ್ನು ಹಾಕದಿದ್ದರೆ ಮತ್ತು ಬಡವರ ತಟ್ಟೆಯಲ್ಲಿ ಆಹಾರವನ್ನು ಹಾಕದಿದ್ದರೆ, ಆರ್ಥಿಕತೆಯು ಅಚ್ಚುಕಟ್ಟಾಗಿ ಪುನರುತ್ಥಾನಗೊಳ್ಳುವುದಿಲ್ಲ” ಎಂದು ಅವರು ಹೇಳಿದ್ದಾರೆ.
ತಾನು ಹೇಳುವುದರಲ್ಲಿ ಸರ್ಕಾರಕ್ಕೆ ನಂಬಿಕೆ ಬರದಿದ್ದರೆ, ಬಿಹಾರದ ಮತದಾರರ ಧ್ವನಿಯನ್ನು ಕೇಳಿಸಿಕೊಳ್ಳಲಿ, ಅಲ್ಲಿ ಉದ್ಯೋಗಗಳಿಲ್ಲ ಅಥವಾ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗವಕಾಶವಿಲ್ಲ. ಕನಿಷ್ಟ ಆದಾಯವಿಲ್ಲದ್ದರಿಂದ ಜನತೆ ಖರ್ಚಿನ ಬಗ್ಗೆ ಚಿಂತಿಸುತ್ತಿಲ್ಲ. ಅವರ ಆಲೋಚನೆಗಳು ಬದುಕುಳಿಯುವುದರಲ್ಲಿಯೇ ಇದೆ ಎಂದರು.

ದೇಶದ ಬಹುಪಾಲು ಜನರಲ್ಲಿ ಹಣವಿಲ್ಲ ಹಾಗಾಗಿ ವಸ್ತುಗಳನ್ನು ಹಾಗೂ ಸೇವೆಯನ್ನು ಖರೀದಿಸಲು ಅವರಿಗೆ ಒಲವಿಲ್ಲ ಎಂಬ ಸತ್ಯವನ್ನು RBI ಗವರ್ನರ್, SEBI ಅಧ್ಯಕ್ಷ ಹಾಗೂ DEA ಕಾರ್ಯದರ್ಶಿ ಒಟ್ಟಾಗಿ ಹಣಕಾಸು ಸಚಿವಾಲಯದ ಬಳಿ ಹೇಳಬೇಕು ಎಂದು ಅವರು ಆಗ್ರಹಸಿದ್ದಾರೆ.
ಈ ವೇಳೆಯಲ್ಲಿ ಮಾಜಿ ವಿತ್ತ ಸಚಿವ ಚಿದಂಬರಂ RBI ಗವರ್ನರ್ ಹೇಳಿಕೆಯನ್ನು ಟೀಕಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದ ತತ್ತರಿಸುತ್ತಿರುವ ಭಾರತದ ಆರ್ಥಿಕತೆಯನ್ನು ಮೇಲೆತ್ತುವ ಪ್ರಕ್ರಿಯೆಯ ಆರಂಭಿಕ ಹಂತದಲ್ಲಿದ್ದೇವೆಂದು RBI ಗವರ್ನರ್ ಹೇಳಿದ್ದರು.