• Home
  • About Us
  • ಕರ್ನಾಟಕ
Friday, November 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಪ್ರಾಯೋಜಿತ ಹಬ್ಬಗಳಿಂದ ಹೊರಬರೋಣ

by
October 17, 2020
in ಅಭಿಮತ
0
ಪ್ರಾಯೋಜಿತ ಹಬ್ಬಗಳಿಂದ ಹೊರಬರೋಣ
Share on WhatsAppShare on FacebookShare on Telegram

ಭಾರತೀಯ ಸಂಪ್ರದಾಯದಲ್ಲಿ ಹಬ್ಬ ಹರಿದಿನಗಳಿಗೆ ಅಪಾರ ಪ್ರಾಮುಖ್ಯತೆಯಿದೆ. ಜೊತೆಗೆ ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಆಯಾಮಗಳೂ ಹಬ್ಬಗಳಿಗಿವೆ. ಹಬ್ಬ ಬಂತೆಂದರೆ ಮನೆಮನೆಗಳಲ್ಲಿ ಉತ್ಸಾಹ ಗರಿಗೆದರುತ್ತದೆ. ದೀನರಿಗೆ ಉಪಕರಿಸಿ, ಪಶುಗಳನ್ನು ಪ್ರೀತಿಸಿ,ಪರಿಸರವನ್ನು ಪೂಜಿಸಿ- ಇಷ್ಟನ್ನು ನಮ್ಮಿಂದ ಮಾಡಿಸುವ ವೈವಿಧ್ಯಮಯ ಹಬ್ಬಗಳ ನೈಜ ಆಚರಣೆಯಲ್ಲಿ ಸಂಸ್ಕೃತಿಯು ತಲೆಮಾರಿನಿಂದ ತಲೆಮಾರಿಗೆ ಹರಿಯುತ್ತದೆ.

ADVERTISEMENT

ದೀಪಾವಳಿಯು ದಿವಾಳಿಯೆಂದು ಕರೆಯಲ್ಪಡುತ್ತಿರುವ ಇಂದು, ನಾವು ಆಚರಿಸುವ ಬಹುತೇಕ ಎಲ್ಲ ಹಬ್ಬಗಳನ್ನೂ ದೈತ್ಯ ಬಹುರಾಷ್ಟ್ರೀಯ ಕಂಪನಿಗಳು ಪ್ರಾಯೋಜಿಸಲು ಪೈಪೋಟಿ ನಡೆಸುತ್ತಿವೆ. ಶುದ್ಧಾನುಶುದ್ಧ ಪ್ರಾದೇಶಿಕ ಆಚರಣೆಗಳನ್ನು ಸಹ ತಮ್ಮ ಸ್ಟ್ರಾಟರ್ಜಿಗೆ ಬಳಸುವ ಕಲೆಯಲ್ಲಿ ಕಂಪನಿಗಳು ನಿಷ್ಣಾತರಾಗಿವೆ. ನಾವುಗಳು ಪ್ರಾಯೋಜಿತ ಮನುಷ್ಯರಾಗುತ್ತಿದ್ದೇವೆ. ಹಬ್ಬಗಳು ಬಂತೆಂದರೆ ಸಾಕು, ಆನ್ಲೈನ್ ಶಾಪಿಂಗ್ ಸೈಟ್ ಗಳು ಬಿಗ್ ಬಿಲಿಯನ್ ಡೇ, ಗ್ರೇಟ್ ಇಂಡಿಯನ್ ಫೆಸ್ಟಿವಲ್ ಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಹಪಾಹಪಿತನ ಆರಂಭಿಸುತ್ತವೆ. ಯಾವ ಖರೀದಿ ತಾಣದಲ್ಲಿ ಕಡಿಮೆ‌ ಬೆಲೆಗೆ ಸಿಗುತ್ತದೆಯೆಂಬ ಆಸೆಯಲ್ಲಿ ಜನಸಾಮಾನ್ಯರೂ ಹುಡುಕಾಟ ನಡೆಸುತ್ತಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಂತರ್ಜಾಲ ವಹಿವಾಟು ತಾಣಗಳು ಉಚಿತವಾಗಿ ಮಾರುತ್ತಿದ್ದೇವೇನೋ ಎಂದು ನಂಬಿಸುವಷ್ಟು ಆಫರ್ ಗಳನ್ನು ಹಬ್ಬದ ದಿನಗಳಲ್ಲಿ ನೀಡುತ್ತವೆ. ಪತ್ರಿಕೆಗಳಲ್ಲಿ ಆದಿನಗಳಲ್ಲಿ ಸುದ್ದಿಗೆ ಜಾಗವೇ ಇಲ್ಲ. ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತೇವೆಂಬ ಜಾಹೀರಾತಿನ ಮೂಲಕ ನಮ್ಮನ್ನು ಪ್ರಚೋದಿಸುತ್ತಿವೆ. ಪ್ರತ್ಯೇಕವಾಗಿ ಕಂಪನಿಗಳ ಹೆಸರನ್ನು ಉಲ್ಲೇಖಿಸುವ ಅಗತ್ಯವಿಲ್ಲವೆಂದು ಭಾವಿಸುವೆ. ಇದು ಕೊಳ್ಳುಬಾಕತನ ಹೆಚ್ಚಲೂ ಕಾರಣವಾಗಿದೆ. ಶಾಪಿಂಗ್ ಸೈಟಿನಿಂದ ಹೊಸ ವಸ್ತುವೊಂದು ಮನೆಗೆ ಬಂದರೆ ಮಾತ್ರ ಹಬ್ಬ ಎಂಬಷ್ಟರ ಮಟ್ಟಿಗೂ ಹಲವರ ಮನಸ್ಥಿತಿ ಬದಲಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್ ವಸ್ತುಗಳದ್ದೇ ದೊಡ್ಡಪಾಲು. ‘ಇ -ತ್ಯಾಜ್ಯ’ದ ಹೆಚ್ಚಳಕ್ಕೆ ದಾರಿಮಾಡಿರುವುದೂ ಇದೇ.

ಇದ್ದಿದ್ದರಲ್ಲೇ ಸರಳವಾಗಿ ಹಬ್ಬ ಮಾಡುವ ನಮ್ಮ ಪೂರ್ವಿಕರನ್ನು ನೆನೆಯಬೇಕಾದ ಎಂದಿಗಿಂತ ಇಂದು ಅವಶ್ಯಕತೆಯಿದೆ. ಸರಳ ಮತ್ತು ಅರ್ಥಪೂರ್ಣ ಹಬ್ಬಗಳು ಹಿಂದಿನಿಂದ ನಡೆದುಬಂದ ರೂಡಿ.‌ ಕೋವಿಡ್ -19 ರ ಕಾಲದಲ್ಲಿ ಕೊಳ್ಳುಬಾಕತನ ವೈಯಕ್ತಿಕ ಆರ್ಥಿಕ ಸಾಮರ್ಥ್ಯವನ್ನು ಕುಗ್ಗಿಸದಿರಲಿ.

ಸಹಜ ಪರಿಸರ ಪರ ಆಚರಣೆಗೆ ಒತ್ತು ನೀಡುವ ಪರಂಪರೆಯನ್ನು ಮತ್ತೆ ನೆನಪಿಸಿಕೊಳ್ಳಬೇಕು. ಆನ್ಲೈನ್ ಶಾಪ್ ಗಳಿಗಿಂತ ನಮ್ಮ ಸುತ್ತಮುತ್ತಲಿನ ಸ್ಥಳೀಯ ಅಂಗಡಿಕಾರರು ಬದುಕುವುದು ಮುಖ್ಯ. ಏಕೆಂದರೆ ಅವರೆಲ್ಲರೂ ನಮ್ಮವರೇ. ನಮ್ಮದೇ ಗೆಳೆಯರು, ಸಂಬಂಧಿಕರು, ಪರಿಚಯಸ್ಥರು. ಅವರ ಅಂಗಡಿಗಳಲ್ಲಿ ಖರೀದಿಸಿದರೆ ಅವರ ಕಿಸೆಗೂ ನಾಲ್ಕು ಕಾಸು ಸೇರುತ್ತದೆ. ನಮ್ಮ ಮನೆಯ ಜೊತೆಗೆ ಅವರ ಮನೆಯಲ್ಲೂ ಬೆಳಕು ಹಬ್ಬುತ್ತದೆ.

 ಕಂಪನಿಗಳಿಗೆ ಹಬ್ಬಗಳನ್ನು ಪ್ರಾಯೋಜಿಸಿ ಹಣ ಮಾಡಿಕೊಳ್ಳಲು ಧರ್ಮಬೇಧವಿಲ್ಲ ತಾನೆ? ಎಲ್ಲ ಧರ್ಮಗಳ ಎಲ್ಲ ಹಬ್ಬಗಳೂ ಸರಳ ಮತ್ತು ನೈಜ ತತ್ವವನ್ನೇ ಮುಂದಿಟ್ಟುಕೊಂಡು ಆಚರಿಸಲ್ಪಡಬೇಕು. ಹಬ್ಬಗಳ ಆಚರಣೆ ಆನ್ಲೈನ್ ಶಾಪಿಂಗ್ ಸೈಟ್ ಗಳ ಪ್ರಾಯೋಜಕತ್ವಗಳಿಂದ ಅತ್ಯಂತ ಜರೂರಾಗಿ ಹೊರಬರಬೇಕಿದೆ.

Tags: DeepavaliDiwaliDiwaliOffersDiwaliSaleOnlineShopping
Previous Post

ಬಿಹಾರ ಚುನಾವಣೆಯಲ್ಲಿ ಮತ್ತೆ ಜೀವಂತವಾದ ʼಜಿನ್ನಾ ಆತ್ಮʼ..!

Next Post

ಸಾಲಗಾರರಿಗೆ ಸಹಾಯ ಮಾಡಿದರೆ ಬ್ಯಾಂಕುಗಳ ಬೆಳವಣಿಗೆಗೆ ಮಾರಕ?

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
ಸಾಲಗಾರರಿಗೆ ಸಹಾಯ ಮಾಡಿದರೆ ಬ್ಯಾಂಕುಗಳ ಬೆಳವಣಿಗೆಗೆ ಮಾರಕ?

ಸಾಲಗಾರರಿಗೆ ಸಹಾಯ ಮಾಡಿದರೆ ಬ್ಯಾಂಕುಗಳ ಬೆಳವಣಿಗೆಗೆ ಮಾರಕ?

Please login to join discussion

Recent News

ನಟ, ನಿರೂಪಕ  ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು
Top Story

ನಟ, ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

by ಪ್ರತಿಧ್ವನಿ
November 21, 2025
ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ
Top Story

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

by ಪ್ರತಿಧ್ವನಿ
November 21, 2025
ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**
Top Story

ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**

by ಪ್ರತಿಧ್ವನಿ
November 21, 2025
ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್
Top Story

ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್

by ಪ್ರತಿಧ್ವನಿ
November 21, 2025
ಸಿಎಂ ಬದಲಾವಣೆ ಚರ್ಚೆ: ಮಾಧ್ಯಮಗಳಿಗೆ ಹೆಚ್.ಸಿ ಮಹದೇವಪ್ಪ ಹೀಗಂದಿದ್ಯಾಕೆ..?
Top Story

ಸಿಎಂ ಬದಲಾವಣೆ ಚರ್ಚೆ: ಮಾಧ್ಯಮಗಳಿಗೆ ಹೆಚ್.ಸಿ ಮಹದೇವಪ್ಪ ಹೀಗಂದಿದ್ಯಾಕೆ..?

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಟ, ನಿರೂಪಕ  ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

ನಟ, ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

November 21, 2025
ವಿಧಾನಸೌಧ ಬಳಿ ಗುಂಪು ಗಲಾಟೆ: 13 ಜನರ ಬಂಧನ

ವಿಧಾನಸೌಧ ಬಳಿ ಗುಂಪು ಗಲಾಟೆ: 13 ಜನರ ಬಂಧನ

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada