ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಂವಿಧಾನಿಕ ಅಧಿಕಾರವನ್ನು ಮೀರಿದ್ದಾರೆ ಎಂದ ಕ್ಯಾಲಿಫೋರ್ನಿಯಾದ ನ್ಯಾಯಾಧೀಶರು, ಕಳೆದ ಜೂನ್ನಲ್ಲಿ ಟ್ರಂಪ್ ಹೊರಡಿಸಿದ ಎಚ್ -1 ಬಿ ವೀಸಾ ನಿಷೇಧವನ್ನು ಜಾರಿಗೊಳಿಸುವುದನ್ನು ನಿರ್ಬಂಧಿಸಿದ್ದಾರೆ.
ರಾಷ್ಟ್ರೀಯ ತಯಾರಕರ ಸಂಘ, ಯುಎಸ್ ಚೇಂಬರ್ ಆಫ್ ಕಾಮರ್ಸ್, ನ್ಯಾಷನಲ್ ರಿಟೇಲ್ ಫೆಡರೇಶನ್ ಮತ್ತು ಟೆಕ್ ನೆಟ್ ಪ್ರತಿನಿಧಿಸುವ ಕಂಪನಿಗಳು ವಾಣಿಜ್ಯ ಇಲಾಖೆ ಮತ್ತು ಹೋಮ್ಲ್ಯಾಂಡ್ ಸೆಕ್ಯುರಿಟಿ ವಿಭಾಗದ ವಿರುದ್ಧ ಮೊಕದ್ದಮೆ ಹೂಡಿದ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆರ್ಥಿಕ ಚೇತರಿಕೆ, ಬೆಳವಣಿಗೆಯನ್ನು ಬೆಂಬಲಿಸಲು ತಯಾರಕರು ಉದ್ಯೋಗಗಳನ್ನು ಭರ್ತಿ ಮಾಡುವುದನ್ನು ತಡೆಯುವ ವೀಸಾ ನಿರ್ಬಂಧಗಳ ಸರಣಿಯನ್ನು ಈ ತೀರ್ಪು ತಕ್ಷಣವೇ ಹಿಡಿದಿಡುತ್ತದೆ ಎಂದು ರಾಷ್ಟ್ರೀಯ ತಯಾರಕರ ಸಂಘ ಹೇಳಿದೆ.
ಹೊಸ ಎಚ್ -1 ಬಿ ಮತ್ತು ಎಚ್ -2 ಬಿ, ಜೆ ಮತ್ತು ಎಲ್ ವೀಸಾಗಳು ಸೇರಿದಂತೆ ಇತರ ವಿದೇಶಿ ವೀಸಾಗಳನ್ನು ವರ್ಷಾಂತ್ಯದವರೆಗೆ ನೀಡಲು ತಾತ್ಕಾಲಿಕ ನಿರ್ಬಂಧ ಹೇರಿ ಕಾರ್ಯನಿರ್ವಾಹಕ ಆದೇಶವನ್ನು ಜೂನ್ನಲ್ಲಿ ಹೊರಡಿಸಿದ ಟ್ರಂಪ್, ಕರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿರುವ ಸಮಯದಲ್ಲಿ ಅಮೆರಿಕನ್ನರಿಗೆ ಉದ್ಯೋಗಗಳನ್ನು ಉಳಿಸುವ ಮತ್ತು ರಕ್ಷಿಸುವ ಅಗತ್ಯವಿದೆ ಎಂದು ಟ್ರಂಪ್ ವಾದಿಸಿದ್ದರು.
ಹಲವಾರು ಐಟಿ ಕಂಪನಿಗಳು ಮತ್ತು ಇತರ ಅಮೆರಿಕಾ ಸಂಸ್ಥೆಗಳು ವಿಸಾಗಳ ತಾತ್ಕಾಲಿಕ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದವು.
Also Read: ಟ್ರಂಪ್ ನೂತನ ವೀಸಾ ಕಾನೂನು: ಸಂಕಷ್ಟದಲ್ಲಿ ಭಾರತೀಯ ವಿದ್ಯಾರ್ಥಿಗಳು
ಅಲ್ಲದೆ, ವೀಸಾಗಳ ಮೇಲಿನ ಆಡಳಿತದ ನಿಷೇಧವನ್ನು ಪ್ರಶ್ನಿಸಲು ತಯಾರಕ ಸಂಸ್ಥೆಗಳು ನ್ಯಾಯಾಲಯಕ್ಕೆ ಹೋದವು, ಏಕೆಂದರೆ ವೀಸಾ ಮೇಲಿನ ನಿರ್ಬಂಧಗಳು ನಿರ್ಣಾಯಕ (ಆರ್ಥಿಕ ಕುಸಿತದ) ಸಮಯದಲ್ಲಿ ಉದ್ಯಮವನ್ನು ದುರ್ಬಲಗೊಳಿಸಿದವು ರಾಷ್ಟ್ರೀಯ ತಯಾರಕರ ಸಂಘದ ಹಿರಿಯ ಉಪಾಧ್ಯಕ್ಷ ಮತ್ತು ಸಲಹೆಗಾರ ಲಿಂಡಾ ಕೆಲ್ಲಿ ಹೇಳಿದ್ದಾರೆ.
“ನಮ್ಮ ಉದ್ಯಮದಲ್ಲಿ ಹೊಸತನವನ್ನು ಬೆಂಬಲಿಸಲು ಉನ್ನತ ಪ್ರತಿಭೆಗಳನ್ನು ಕಂಡುಹಿಡಿಯಲು ಮತ್ತು ಅಭಿವೃದ್ಧಿಪಡಿಸಲು ನಾವು ವಿಶ್ವದ ಇತರ ಭಾಗಗಳೊಂದಿಗೆ ಸ್ಪರ್ಧಿಸುತ್ತಿದ್ದೇವೆ. ಇಂದಿನ ನಿರ್ಧಾರವು ಅಮೆರಿಕಾದಲ್ಲಿ ಆ ನಾವೀನ್ಯತೆಯನ್ನು ನಿರ್ಮಿಸಲು ಬದ್ಧವಾಗಿರುವ ತಯಾರಕರಿಗೆ ತಾತ್ಕಾಲಿಕ ಗೆಲುವು, ”ಎಂದು ಅವರು ಹೇಳಿದ್ದಾರೆ.
Also Read: ಹೆಚ್1ಬಿ ವೀಸಾ ರದ್ದು ಮಾಡಿದ ಅಮೆರಿಕ; ಭಾರತದ ಆರ್ಥಿಕತೆಗೆ ಮತ್ತೊಂದು ಬರೆ
ವಿಚಾರಣೆ ಆಲಿಸಿದ ನ್ಯಾಯಾಧೀಶರು , ಟ್ರಂಪ್ ಈ ವಿಷಯದಲ್ಲಿ ತಮ್ಮ ಅಧಿಕಾರವನ್ನು ಮೀರಿದ್ದಾರೆ ಎಂದು ಹೇಳಿ ವೀಸಾ ನಿಷೇಧವನ್ನು ನಿರ್ಭಂಧಿಸಿ ಆದೇಶ ಹೊರಡಿಸಿದ್ದಾರೆ.
ಕೃಪೆ: ಟೈಮ್ಸ್ ಆಫ್ ಇಂಡಿಯಾ