“ಬಾಬ್ರಿ ಮಸೀದಿ ಧ್ವಂಸ ಮಾಡಲು ಮೊದಲೇ ಯೋಜನೆ ರೂಪಿಸಿರಲಿಲ್ಲ,” ಎಂದು ಹೇಳಿದ ಕೋರ್ಟ್ ಸಂಘಪರಿವಾರದ ಎಲ್ಲಾ ಆರೋಪಿತ ನಾಯಕರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ನ್ಯಾಯಾಲಯದ ಈ ತೀರ್ಪನ್ನು ಹಿಂದುತ್ವ ಹಾಗೂ ಬಿಜೆಪಿ ನಾಯಕರು ಸ್ವಾಗತಿಸಿದರೆ, ಬಿಜಪಿಯೇತರ ನಾಯಕರು ಖಂಡಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಕುರಿತಂತೆ ಬಿಜೆಪಿಯೇತರ ನಾಯಕರ ಪ್ರತಿಕ್ರಿಯೆಗಳು:
ಬಾಬರಿ ಮಸೀದಿ ಧ್ವಂಸ ಪ್ರಕರಣದ 32 ಆರೋಪಿಗಳನ್ನು ಖುಲಾಸೆಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ದುರದೃಷ್ಟಕರ. ನ್ಯಾಯಾಲಯ 2019ರ ಸುಪ್ರೀಮ್ ಕೋರ್ಟ್ ತೀರ್ಪು ಮತ್ತು ಸಂವಿಧಾನದ ಆಶಯಗಳನ್ನು ಗಮನಕ್ಕೆ ತೆಗೆದುಕೊಂಡ ಹಾಗೆ ಕಾಣುತ್ತಿಲ್ಲ.
‘ಬಾಬರಿ ಮಸೀದಿ ಧ್ವಂಸ ನೆಲದ ಕಾನೂನಿಗೆ ವಿರುದ್ಧವಾದ ಕೃತ್ಯ’ ಎಂದು 2019 ನವಂಬರ್ 9ರ ಸುಪ್ರೀಮ್ ಕೋರ್ಟ್ ತೀರ್ಪು ಹೇಳಿದೆ. ಈಗ ಸಿಬಿಐ ವಿಶೇಷ ನ್ಯಾಯಾಲಯ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಬಾಬರಿ ಮಸೀದಿ ಧ್ವಂಸ ಮಾಡಿದವರು ಯಾರೆಂಬ ಪ್ರಶ್ನೆ ಹಾಗೆಯೇ ಉಳಿದಿದೆ.
ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಬಾಬರಿ ಮಸೀದಿ ಧ್ವಂಸ ಮಾಡಿದ ಅಪರಾಧಿಗಳನ್ನು ಶಿಕ್ಷೆಗೊಳಪಡಿಸಬೇಕು.
-ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯ
ಮ್ಯಾಜಿಕ್ನಿಂದ ಬಾಬ್ರಿ ಮಸೀದಿಯನ್ನು ಕೆಡವಲಾಗಿತ್ತೇ? ನಾನು ಇದನ್ನು ಹೇಳಲೇ ಬೇಕಾಗುತ್ತದೆ, ಹಿಂಸೆ ರಾಜಕೀಯದಲ್ಲಿ ನಿಮಗೆ ಸ್ಥಾನ ಮಾನ ನೀಡುತ್ತದೆ. ನೀವೇ ಆಲೋಚಿಸಿ, ಅಡ್ವಾನಿಯ ರಥ ಯಾತ್ರೆ ಭಾರತದಲ್ಲಿ ಎಲ್ಲಿ ಸಾಗಿದೆಯೋ, ಅಲ್ಲಿ ರಕ್ತಪಾತ ಆಗಿದೆ, ಅಮಾಯಕರ ಪ್ರಾಣಹರಣವಾಗಿದೆ. ಆಸ್ತಿಪಾಸ್ತಿ ನಷ್ಟವಾಗಿದೆ. ಬಹಳ ಮನೆತನಗಳು ದಿಕ್ಕೆಟ್ಟುಹೋದವು.
– ಅಸಾದುದ್ದೀನ್ ಒವೈಸಿ
Also Read: ಇಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ: ಅಡ್ವಾಣಿ, ಜೋಶಿ ಭವಿಷ್ಯ ನಿರ್ಧಾರ
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿರುವುದು, ಸುಪ್ರಿಂ ಕೋರ್ಟ್ನ ತೀರ್ಪು ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿದೆ. 9 ನವೆಂಬರ್ 2019ರಂದು ಸುಪ್ರಿಂಕೋರ್ಟ್ನ ಐದು ಸದಸ್ಯರ ಪೀಠ ನೀಡಿದ ತೀರ್ಪಿನ ಪ್ರಕಾರ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಕಾನೂನು ಬಾಹಿರ ಅಪರಾಧ. ಆದರೆ, ವಿಶೇಷ ಕೋರ್ಟ್ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡಿದೆ. ಇದು ಸುಪ್ರಿಂ ಕೋರ್ಟ್ನ ತೀರ್ಪಿಗೆ ವಿರುದ್ದವಾದದ್ದು.
ಸಂಪೂರ್ಣ ದೇಶಕ್ಕೆ ತಿಳಿದಿದೆ, ಬಿಜೆಪಿ, ಆರ್ ಎಸ್ ಎಸ್ ಮತ್ತು ಅದರ ನಾಯಕರು ಸೇರಿ, ಸಮಾಜದಲ್ಲಿ ಇದ್ದಂತಹ ಕೋಮು ಸೌಹಾರ್ದವನ್ನು ರಾಜಕೀಯ ಲಾಭಕ್ಕಾಗಿ ಒಡೆಯುವ ಷಡ್ಯಂತ್ರವನ್ನು ರಚಿಸಿದ್ದರು. ಅಂದಿನ ಉತ್ತರ ಪ್ರದೇಶದ ಸರ್ಕಾರ ಕೂಡಾ ಸಮಾಜದಲ್ಲಿನ ಸಾಂಪ್ರದಾಯಿಕ ಸೌಹಾರ್ದತೆಯನ್ನು ಒಡೆಯುವಲ್ಲಿ ಪಾತ್ರವಹಿಸಿತ್ತು. ಸುಳ್ಳು ಅಫಿಡವಿಟ್ ನೀಡಿ ಸುಪ್ರಿಂ ಕೋರ್ಟ್ ಅನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿತ್ತು. ಈ ಎಲ್ಲಾ ಷಡ್ಯಂತ್ರಗಳನ್ನು ಗಮನದಲ್ಲಿಟ್ಟುಕೊಂಡು, ಬಾಬ್ರಿ ಮಸೀದಿ ಧ್ವಂಸ ಮಾಡಿರುವುದು ಅಪರಾಧ ಎಂದು ಹೇಳಿತ್ತು.
Also Read: ಬಾಬ್ರಿ ಮಸೀದಿ ತೀರ್ಪು ಪ್ರಕಟ: ಆರೋಪಿಗಳು ಖುಲಾಸೆ
ಸಂವಿಧಾನ, ಸಾಮಾಜಿಕ ಸೌಹಾರ್ದ ಮತ್ತು ಸಹೋದರತ್ವವನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯ ಆಪೇಕ್ಷೆಯೇನೆಂದರೆ ವಿಶೇಷ ನ್ಯಾಯಾಲಯದ ತರ್ಕಹೀನ ತೀರ್ಪಿನ ವಿರುದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತಾರೆ.
ಹಾಗೆಯೇ ಯಾವುದೇ ಪಕ್ಷಪಾತವಿಲ್ಲದೇ, ಪೂರ್ವಾಗ್ರಹಪೀಡಿರತಾಗದೇ, ದೇಶದ ಸಂವಿಧಾನ ಹಾಗೂ ಕಾನೂನಿನ ಪಾಲನೆ ಮಾಡುತ್ತಾರೆ. ಇದು ಸಂವಿಧಾನದ ಹಾಗೂ ದೇಶದ ಕಾನೂನಿನ ನಿಜವಾದ ಆಶಯ.
-ರಣ್ದೀಪ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ