• Home
  • About Us
  • ಕರ್ನಾಟಕ
Tuesday, October 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸಮಾಜ‌ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಜನಗಳಿಗೆ ಹಣ ನೀಡಿ: ಅಭಿಜಿತ್ ಬ್ಯಾನರ್ಜಿ

by
July 16, 2020
in ದೇಶ
0
ಸಮಾಜ‌ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಜನಗಳಿಗೆ ಹಣ ನೀಡಿ: ಅಭಿಜಿತ್ ಬ್ಯಾನರ್ಜಿ
Share on WhatsAppShare on FacebookShare on Telegram

ಕರೋನಾ ಮತ್ತು ಲಾಕ್‌ಡೌನ್‌ನಂತಹ ಅವಳಿ‌ ಕಷ್ಟಗಳು ದೇಶಕ್ಕೆ ಅಪ್ಪಳಿಸಿದ ನಂತರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ, ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ‌ ಗೌವರ್ನರ್ ಡಾ. ರಘುರಾಮ್ ರಾಜನ್ ಮತ್ತು ನೋಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ನಿರಂತರವಾಗಿ ತಮ್ಮ ಮೌಲಿಕ‌ ಸಲಹೆಗಳನ್ನು ನೀಡುತ್ತಿದ್ದಾರೆ. ಇವರ ಮಾತಿಗೆ ಕೇಂದ್ರ ಸರ್ಕಾರ, ಅದರಲ್ಲೂ ಮುಖ್ಯವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಿವಿಗೊಡುತ್ತಿಲ್ಲದಿದ್ದರೂ ಇವರುಗಳು ಮಾತ್ರ ಈ ದುರ್ದಿನದಲ್ಲಿ ಒಳಿತನ್ನು ಹೇಳುವುದು ತಮ್ಮ ಕರ್ತವ್ಯ ಎಂಬಂತೆ ಪದೇ ಪದೇ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಚ್ಚರಿಸುತ್ತಲೇ ಇದ್ದಾರೆ.

ADVERTISEMENT

ರಾಹುಲ್ ಗಾಂಧಿ ಕರೋನಾ ಮತ್ತು ಲಾಕ್‌ಡೌನ್ ಹೊರತುಪಡಿಸಿ ಭಾರತ-ಚೀನಾ ಗಡಿ ಸಮಸ್ಯೆ, ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಮತ್ತಿತರ ವಿಷಯಗಳ ಬಗ್ಗೆಯೂ ಮಾತನಾಡುತ್ತಿದ್ದಾರೆ‌. ಡಾ. ರಘುರಾಮ್ ರಾಜನ್ ಮತ್ತು ಅಭಿಜಿತ್ ಬ್ಯಾನರ್ಜಿ ಅವರ ಕ್ಷೇತ್ರವಾದ ಆರ್ಥಿಕತೆ ಬಗ್ಗೆ ಮಾತ್ರ ಬೆಳಕು ಚೆಲ್ಲುತ್ತಿದ್ದಾರೆ. ಮೊನ್ನೆ ಕೂಡ ಡಾ. ರಘುರಾಮ್ ರಾಜನ್ ಅವರು ‘ಸದ್ಯ ದೇಶದಲ್ಲಿ ರೇಟಿಂಗ್ ಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು, ಕಷ್ಟದಲ್ಲಿರುವ ಜನರಿಗೆ ಮೊದಲು ನೆರವು ನೀಡಬೇಕು. ಅವರ ಬದುಕು ಹಳಿಗೆ ಮರಳಿದ ಮೇಲೆ ಆರ್ಥಿಕ ಪ್ರಗತಿಯತ್ತ ದೃಷ್ಟಿ ಹರಿಸಬೇಕು’ ಎಂದಿದ್ದರು. ಈಗ ಅಭಿಜಿತ್ ಬ್ಯಾನರ್ಜಿ ಅವರ ಸರದಿ.

https://pages.razorpay.com/pl_ELm1SpwajvYePk/view

ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕಾನಾಮಿಕ್ ರೀಸರ್ಚ್ (ಎನ್ ಸಿಎಇಆರ್) ಪ್ಯಾನಲ್ ಡಿಸ್ಕಷನ್ ನಲ್ಲಿ ಮಾತನಾಡುತ್ತಿದ್ದ ಅಭಿಜಿತ್ ಬ್ಯಾನರ್ಜಿ ಅವರು, ಭಾರತ ಸದ್ಯದ ಕಷ್ಟದ ಪರಿಸ್ಥಿತಿಯಿಂದ ಹೊರಬರಲು ತನ್ನ ಸಮಾಜ‌ ಕಲ್ಯಾಣ ಕಾರ್ಯಕ್ರಮಗಳನ್ನು ವಿನ್ಯಾಸ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲಿ ಅವರು ಮುಖ್ಯವಾಗಿ ಉಲ್ಲೇಖಿಸಿರುವುದು ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಆ್ಯಕ್ಟ್ (ಎನ್ ಆರ್ ಇ ಜಿ‌ ಎ) ಕಾರ್ಯಕ್ರಮದ ಬಗ್ಗೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಒದಗಿಸಲೆಂದೇ ಹಿಂದಿನ ಯುಪಿಎ ಸರ್ಕಾರ ತಂದ ಪರಿಣಾಮಕಾರಿ ಕಾರ್ಯಕ್ರಮ ಇದು. ಇದರಿಂದ ಜನ ಗುಳೆ ಹೋಗುವುದು ತಪ್ಪಿತು. ಗ್ರಾಮೀಣ ಭಾರತದ ನಿರುದ್ಯೋಗ ಸಮಸ್ಯೆ ನಿಯಂತ್ರಣಕ್ಕೆ ಬಂದಿತ್ತು. ಹಳ್ಳಿಗಾಡುಗಳಲ್ಲಿ ಜನರಿಗೆ ನೇರವಾಗಿ ನಗದು ಸಿಗುವಂತಾಗಿತ್ತು.

ಆದರೆ ಇದು ಹಿಂದಿನ ಯುಪಿಎ ಸರ್ಕಾರದ ಫ್ಲಾಗ್ ಶಿಪ್ ಯೋಜನೆ ಎನ್ನುವ ಏಕೈಕ ಕಾರಣಕ್ಕೆ 2014ರಲ್ಲಿ ಪ್ರಧಾನ ಮಂತ್ರಿ ಆದ ನರೇಂದ್ರ ಮೋದಿ ನರೇಗಾ ಕಾರ್ಯಕ್ರಮದ ಬಗ್ಗೆ ಅಷ್ಟೇನೂ‌ ಆಸಕ್ತಿ ತೋರಲಿಲ್ಲ. ಅವರ ನೇತೃತ್ವದ ಕೇಂದ್ರ ಸರ್ಕಾರ ಯೋಜನೆಗೆ ಸರಿಯಾಗಿ ಹಣ ಬಿಡುಗಡೆ ಮಾಡಿರಲಿಲ್ಲ. ಈ ಬಗ್ಗೆ ರಾಜ್ಯಗಳ ಬೇಡಿಕೆಗೆ ಕಿಮ್ಮತ್ತು ನೀಡಿರಲಿಲ್ಲ. ಆದರೀಗ ‌ಪರಿಸ್ಥಿತಿ ಭಿನ್ನವಾಗಿದೆ. ಕರೋನಾ ಮತ್ತು ಲಾಕ್‌ಡೌನ್ ಕಾರಣಗಳಿಂದ ‌ಜನ ನಗರಗಳನ್ನು ತ್ಯಜಿಸಿ ಅವರವರ ಊರು ಸೇರಿಕೊಂಡಿದ್ದಾರೆ. ಪರಿಣಾಮವಾಗಿ ಈಗ ಗ್ರಾಮೀಣ ಭಾರತದಲ್ಲಿ ತೀವ್ರವಾದ ನಿರುದ್ಯೋಗ ಸಮಸ್ಯೆ ‌ನಿರ್ಮಾಣವಾಗಿದೆ. ಜೊತೆಗೆ ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ‌ಜನರ ಬಳಿ ಹಣವೂ ಇಲ್ಲದಂತಾಗಿದೆ. ಆದುದರಿಂದ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸಲು ಮತ್ತು ಜನರಿಗೆ ಹಣ ಸಿಗುವಂತೆ ಮಾಡಲು ಪ್ರಯತ್ನಿಸಿತು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯುಪಿಎ ಸರ್ಕಾರದ ಇದೇ ನರೇಗಾ ಯೋಜನೆಯ ಮೊರೆಹೋಗುವಂತಾಗಿದೆ.

ಈ ಬಗ್ಗೆ ಅಭಿಜಿತ್ ಬ್ಯಾನರ್ಜಿ, ಇದು ತುರ್ತು ಪರಿಸ್ಥಿತಿಗೆ ಎಂದು ರೂಪಿಸಿರುವ ಕಾರ್ಯಕ್ರಮವಲ್ಲ. ಕೇಂದ್ರ ಸರ್ಕಾರ ಈಗ ಕಷ್ಟದ ಕಾಲ ಅಂತಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡಿ ನಂತರ ಕೈಬಿಡಬಾರದು. ಸದೃಢ ಗ್ರಾಮೀಣ ಭಾರತದ ನಿರ್ಮಾಣಕ್ಕಾಗಿ ನರೇಗಾ ಯೋಜನೆಯನ್ನು ಮತ್ತಷ್ಟು ಸದೃಢಗೊಳಿಸಬೇಕು. ಜೊತೆಗೆ ಈಗ ಕರೋನಾ ಮತ್ತು ಲಾಕ್ಡೌನ್ ಕಾರಣಗಳಿಂದ ನಗರ ಪ್ರದೇಶಗಳಲ್ಲೂ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವುದರಿಂದ ‘ಈ ಉದ್ಯೋಗ ಭದ್ರತೆ’ಯ ಕಾರ್ಯಕ್ರಮವನ್ನು ನಗರ‌ ಪ್ರದೇಶಗಳಲ್ಲೂ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ.

ಇದೇ ರೀತಿ ಎಲ್ಲಾ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆಯೂ ಪರಮಾರ್ಶೆ ನಡೆಸಿ ಅವುಗಳಿಗೆ ಇನ್ನಷ್ಟು ಉತ್ತೇಜನ ನೀಡಬೇಕು. ಕರೋನಾ ಮತ್ತು ಲಾಕ್‌ಡೌನ್ ಕಾರಣಗಳಿಂದ ಜನ ತೀವ್ರ ಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಕಲ್ಯಾಣ ಕಾರ್ಯಕ್ರಮಗಳ ಮರುವಿನ್ಯಾಸದ ಮೂಲಕ ನೆರವು ನೀಡಬೇಕು. ಜನ ಸಾಮಾನ್ಯರು ಬದುಕು ಕಟ್ಟಿಕೊಳ್ಳುವ ಮೂಲಕ ದೇಶದ ಆರ್ಥಿಕತೆ ಕಟ್ಟುವ ಕೆಲಸಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.

‘ಒನ್ ನೇಷನ್ ಒನ್ ರೇಷನ್’ ಎಂಬ ಕಲ್ಪನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅಭಿಜಿತ್ ಬ್ಯಾನರ್ಜಿ, ಇದೇ ರೀತಿ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳ ಪುನರ್ ವ್ಯಾಖ್ಯಾನ ಆಗಬೇಕು. ಜನರಿಗೆ ಅದು ಪರಿಣಾಮಕಾರಿಯಾಗಿ ಉಪಯೋಗಿ ಆಗುವಂತೆ ಮಾಡಬೇಕು. ಒನ್ ನೇಷನ್ ಒನ್ ರೇಷನ್ ಕಾರ್ಯಕ್ರಮ ಯಶಸ್ವಿಗೊಳಿಸುವುದು ಕಷ್ಟ. ಆದರೆ ನಂಬಿಕೆ ಇಟ್ಟು ಪಡಿತರ ಚೀಟಿ ವ್ಯವಸ್ಥೆ ಮಾಡಿ ಬಡವರಿಗೆ ಪಡಿತರ ಪದಾರ್ಥಗಳು ಸಿಗುವಂತೆ ಮಾಡಬೇಕು ಎಂದಿದ್ದಾರೆ.

ಇದಲ್ಲದೆ ಇವತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ನರೇಗಾ ಯೋಜನೆ ಬಗ್ಗೆ ನರೇಂದ್ರ ಮೋದಿ ಟೀಕಿಸಿದ್ದರು. ಯೋಜನೆಯ ಮುಖಾಂತರ ಬಸ್ ಹೊಂಡಗಳನ್ನು ಅಗೆಯಲಾಗುತ್ತದೆ ಎಂದಿದ್ದರು. ಆದರೆ ಇಂದು ಅದೇ ಹಳ್ಳಕ್ಕೆ ಬಡವರನ್ನು ತಳ್ಳುತ್ತಿದ್ದಾರೆ. ನರೇಗಾ ಯೋಜನೆ ಇಲ್ಲದಿದ್ದರೆ ಬಡತನವು ಕಣ್ಮರೆಯಾಗುವುದಿಲ್ಲ’ ಎಂದು ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಅಭಿಜಿತ್ ಬ್ಯಾನರ್ಜಿ ಅವರ ಸಲಹೆಗಳನ್ನು ಈ ಬಾರಿಯಾದರೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆಯೇ ಎಂಬುದನ್ನು ಕಾದುನೋಡಬೇಕು.

Tags: ಅಭಿಜಿತ್ ಬ್ಯಾನರ್ಜಿಭಾರತದ ಆರ್ಥಿಕತೆ
Previous Post

ಆರ್ಥಿಕತೆ ಪುನರುಜ್ಜೀವನಗೊಳಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಪ್ರಧಾನಿ

Next Post

ಎನ್ಐಎ ವಶದಲ್ಲಿದ್ದ ವರವರ ರಾವ್‌ಗೆ ಕೋವಿಡ್ ದೃಢ!

Related Posts

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
0

ಜ್ವರ ಹಾಗೂ ಯೂರಿನ್ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಕೆಲವು ದಿನಗಳ...

Read moreDetails

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
Next Post
ಎನ್ಐಎ ವಶದಲ್ಲಿದ್ದ ವರವರ ರಾವ್‌ಗೆ ಕೋವಿಡ್ ದೃಢ!

ಎನ್ಐಎ ವಶದಲ್ಲಿದ್ದ ವರವರ ರಾವ್‌ಗೆ ಕೋವಿಡ್ ದೃಢ!

Please login to join discussion

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada