ರಾಜ್ಯದಲ್ಲಿ ಕರೋನಾ ಸೋಂಕು ಹರಡುತ್ತಿರುವ ವೇಗ ದಿನಗಳೆದಂತೆ ಹೆಚ್ಚುತ್ತಿದೆ. ಒಂದು ವಾರಗಳ ಹಿಂದೆ ತಲಾ ಸಾವಿರದಂತೆ ಕಂಡುಬರುತ್ತಿದ್ದ ಪ್ರಕರಣ, ಇದ್ದಕ್ಕಿದ್ದಂತೆ ದಿನಕ್ಕೆ 2 ಸಾವಿರ ಪ್ರಕರಣಗಳಂತೆ ಏರಿಕೆಯಾಗಲು ಶುರುವಾಗಿತ್ತು. ಇದೀಗ ಒಂದೇ ದಿನದಲ್ಲಿ 3 ಸಾವಿರದ ಗಡಿ ದಾಟಿದೆ.
ಕಳೆದ 24 ಗಂಟೆಗಳಲ್ಲಿ 3,176 ಹೊಸ ಕರೋನಾ ಪ್ರಕರಣಗಳು ಕಂಡು ಬಂದಿದ್ದು, ರಾಜ್ಯದಲ್ಲಿ ಇದುವರೆಗೂ ದಾಖಲಾದ ಕರೋನಾ ಪ್ರಕರಣಗಳ ಸಂಖ್ಯೆ 47,253 ತಲುಪಿದೆ. ಇಂದು ಸೋಂಕಿನಿಂದ 1076 ಮಂದಿ ಚೇತರಿಸಿಕೊಂಡಿದ್ದಾರೆ. ಇದುವರೆಗೂ 18,466 ಮಂದಿ ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ 27,853 ಸಕ್ರಿಯ ಪ್ರಕರಣಗಳಿದ್ದು, 597 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-19 ಗೆ ಇಂದು 87 ಮಂದಿ ಮೃತಪಟ್ಟಿದ್ದು, ಇದುವರೆಗೂ ಸೋಂಕಿನಿಂದಾಗಿ 928 ಮಂದಿ ಅಸುನೀಗಿದ್ದಾರೆ.
ಇಂದು ಬೆಂಗಳೂರು ನಗರವೊಂದರಲ್ಲೇ 1975 ಕರೋನಾ ಸೋಂಕು ಕಂಡುಬಂದಿದೆ. ಬೆಂಗಳೂರು ನಗರವೊಂದರಲ್ಲೇ 22,944 ಕರೋನಾ ಪ್ರಕರಣಗಳು ದಾಖಲಾಗಿವೆ. 17,051 ಸಕ್ರಿಯ ಪ್ರಕರಣಗಳಿರುವ ಬೆಂಗಳೂರಿನಲ್ಲಿ 437 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಇನ್ನು ದೇಶಾದ್ಯಂತ 29,429 ಹೊಸ ಕರೋನಾ ಪ್ರಕರಣಗಳು ಕಂಡುಬಂದಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 9,36,181. ದೇಶದಲ್ಲಿ 5,92,032 ಮಂದಿ ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೂ 24,309 ಮಂದಿ ಕರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ದೇಶದಲ್ಲಿ ಸದ್ಯ 3,19,840 ಸಕ್ರಿಯ ಪ್ರಕರಣಗಳಿವೆ.