ಸರ್ಕಾರಿ ವೈದ್ಯರ ಕೊರತೆ ಇರುವ ಕುರಿತು ಮಾತನಾಡಿದ ಆರೋಗ್ಯ ಸಚಿವ ಬಿ ಶ್ರೀ ರಾಮುಲು ಈಗಾಗಲೇ 507 ಗುತ್ತಿಗೆ ವೈದ್ಯರು ಗುತ್ತಿಗೆ ಆಧಾರಿತವಾಗಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸದ್ಯ 4000 ಸಾವಿರ ಸರ್ಕಾರಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಗುತ್ತಿಗೆ ಆಧಾರಿತ ಸೇವೆ ಸಲ್ಲಿಸುತ್ತಿರುವ 507 ವೈದ್ಯರನ್ನು ಖಾಯಂಗೊಳಿಸಿದ್ದು, ಉಳಿದ ಹುದ್ದೆಗಳನ್ನು ನೇರ ನೇಮಕಾತಿಗೊಳಿಸುತ್ತೇವೆ ಎಂದು ಶ್ರೀ ರಾಮುಲು ಹೇಳಿದ್ದಾರೆ.
ಇನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಮಾತನಾಡಿ ಕೋವಿಡ್-19 ವಿರುದ್ಧ ಹೋರಾಡುವವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರೋನಾ ವಾರಿಯರ್ಸ್ ನಿಜವಾದ ಯೋಧರು ಎಂದು ಶ್ಲಾಘಿಸಿರುವ ಸುಧಾಕರ್, ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದು ಅಭಯ ನೀಡಿದ್ದಾರೆ.
ಕರೋನಾ ವಾರಿಯರ್ಸ್ಗೆ ರಿಸ್ಕ್ ಭತ್ಯೆ ಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಕರೋನಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೂ ಸೋಂಕು ತಗುಲಿರಬಹುದು. ಆದರೆ ಸೋಂಕಿನ ಕುರಿತು ಆತಂಕ ಬೇಡ. ಸೋಂಕು ಹತ್ತು ದಿನದಲ್ಲಿ ವಾಸಿಯಾಗುತ್ತೆ. ಯಾರೂ ಗಾಬರಿಗೆ ಒಳಗಾಗಬೇಡಿ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಮೈಲ್ಡ್ ಟು ಮಾಡರೇಟ್ ಇರುವ ರೋಗಿಗಳಿಗೆ ಈಗ ರೆಮ್ನೆಸ್ವೀರ್ ಮಾತ್ರೆ ಹಾಗೂ ಇಂಜೆಕ್ಷನ್ ಕೊಡುತ್ತಿದ್ದೇವೆ. ಇದನ್ನು ಬೇರೆ ಬೇರೆ ಮೂಲದಿಂದ ಖಾಸಗಿಯವರು ತರಿಸಿಕೊಂಡು ಬ್ಲ್ಯಾಕಲ್ಲಿ ಮಾರುತ್ತಿದ್ದಾರೆ. ಈ ಕುರಿತು ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. WHO ಬಳಿ ಮಾತನಾಡಿ ಈ ಮೆಡಿಸನ್ ನಾವೇ ತಯಾರು ಮಾಡುವಂತೆ ಅನುಮತಿ ಪಡೆಯಲು ಹೇಳಿದ್ದೇವೆ. ಸದ್ಯ ಜುಬಿಲಿಯಂಟ್ ಫಾರ್ಮಸಿ ಕಂಪನಿಯಲ್ಲಿ ಮಾತ್ರ ಇದನ್ನು ತಯಾರಿಸಲು ಅನುಮತಿ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದಾರೆ.