• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿಗೆ ಶರಣಾಯಿತೇ RSS?

by
June 27, 2020
in ಅಭಿಮತ
0
ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿಗೆ ಶರಣಾಯಿತೇ RSS?
Share on WhatsAppShare on FacebookShare on Telegram

ಜೂನ್‌ 25, 1975 ಭಾರತ ಕಂಡ ಅತ್ಯಂತ ಕರಾಳ ದಿನಗಳಲ್ಲಿ ಒಂದು. ದೇಶವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಕೈ ತಪ್ಪಿ ಹೋಗುತ್ತಿದ್ದ ರಾಜಕೀಯ ಪರಿಸ್ಥಿತಿಯನ್ನು ತಮ್ಮ ಮುಷ್ಟಿಯೊಳಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು ಅಂದಿನ ಪ್ರಧಾನಿ ಇಂದಿರಾ ಗಾಂಧಿ. ಪ್ರಭುತ್ವದ ವಿರುದ್ದ ಜನಶಕ್ತಿ ಗೆಲ್ಲುವ ಸಂದರ್ಭದಲ್ಲಿ ಜಾರಿಗೊಳಿಸಿದ್ದ ತುರ್ತು ಸಂದರ್ಭ ಮುಂದೆ ಇಂದಿರಾ ಗಾಂಧಿಯವರಿಗೇ ಮುಳುವಾಗಿತ್ತು. ಇಂದಿಗೆ ತುರ್ತು ಪರಿಸ್ಥಿತಿ ಇತಿಹಾಸವಾಗಿರಬಹುದು. ಆದರೆ, ಇದೇ ವಿಚಾರವನ್ನು RSS ಮತ್ತು ಆಗಿನ ಜನಸಂಘ ಈಗಿನ ಬಿಜೆಪಿ ಇಂದಿಗೂ ಕೆದಕುತ್ತಲೇ ಇದೆ. ಹಳೇ ಗಾಯವನ್ನು ಆರಲೂ ಬಿಡದೇ, ಗುಣವೂ ಪಡಿಸದೇ ಮತ್ತೆ ಮತ್ತೆ ಅದೇ ವಿಷಯವನ್ನು ಕೆದಕಿ ತಮ್ಮ ಬೇಳೆ ಬೇಯಿಸಲು ಕಾಯುತ್ತಿದೆ.

ADVERTISEMENT

2020ರ ಜೂನ್‌ 25ರಂದು ಮಾತನಾಡಿದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌, ಜೂನ್‌ 25ನ್ನು ಒಂದು ಕಪ್ಪು ದಿನವೆಂದು ಕರೆದರು. ಅಷ್ಟಕ್ಕೇ ನಿಲ್ಲಿಸದೇ ಅಂದಿನ ದಿನ ಜಯಪ್ರಕಾಶ್‌ ನಾರಾಯಣ ಅವರನ್ನು ಹಾಗೂ ಅವರ ವಿಚಾರಧಾರೆಯನ್ನು ಸ್ಮರಿಸಲು ಕರೆ ನೀಡಿದರು. ಆದರೆ, ಪ್ರತೀ ಬಾರಿ ಇತಿಹಾಸ ಬದಲಿಸಲು ಹೊರಡುವ ಬಿಜೆಪಿ ಇತಿಹಾಸದಿಂದ ತಿಳಿದುಕೊಳ್ಳಬೇಕಾದ ಒಂದು ವಿಚಾರವೇನೆಂದರೆ, ಸ್ವಾತಂತ್ರ್ಯ ನಂತರ RSS ಅನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ವಿಚಾರವನ್ನು ಖುದ್ದು RSSನ ನಾಯಕರೇ ಹೊಂದಿದ್ದರು.

RSS ಅನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಯತ್ನ:

RSSನ ಅಂದಿನ ಸರಸಂಘಚಾಲಕರಾಗಿದ್ದ ಮಾಧವ ಸದಾಶಿವ ಗೋಲ್ವಾಲ್ಕರ್‌ ಅವರು ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರಿಗೆ ಪತ್ರವನ್ನು ಬರೆಯುತ್ತಾರೆ. ಆ ಪತ್ರದ ಒಕ್ಕಣೆ ಹೀಗಿದೆ.

“ನಾನು ನನ್ನ ಎಲ್ಲ ಸ್ವಯಂ ಸೇವಕರಿಗೆ ಶಾಂತಿಯುತವಾಗಿರಲು ಹೇಳಿದ್ದೇನೆ. ರಾಜಕೀಯ ಕ್ಷೇತ್ರದದಲ್ಲಿರುವ ಕಾಂಗ್ರೆಸ್‌ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿರುವ RSS ಯಾವುದೇ ವೈಷಮ್ಯವಿರದೇ ಪ್ರೀತಿ ಇರಬೇಕು. ಎರಡೂ ಸಂಸ್ಥೆಗಳು ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಮುಂದೆ ಸಾಗಬೇಕು. ನಾನು ನಮ್ಮ ಕಡೆಯಿಂದ ಸಹಯೋಗದ ಹಸ್ತವನ್ನು ಚಾಚುತ್ತಿದ್ದೇನೆ.”

ಮಾಧವ ಸದಾಶಿವ ಗೋಲ್ವಾಲ್ಕರ್‌

1948ರಲ್ಲಿ ಮಹಾತ್ಮಾ ಗಾಂಧಿಯವನ್ನು ಗೋಡ್ಸೆ ಹತ್ಯೆಗೈದ ನಂತರ ಫೆಬ್ರವರಿಯಲ್ಲಿ RSS ಅನ್ನು ನಿಷೇಧಿಸಿದ ಸರ್ದಾರ್‌ ವಲ್ಲಭಭಾಯಿ ಪಟೇಲ್‌, RSSನ್ನು ತೊರೆದು ಕಾಂಗ್ರೆಸ್‌ನೊಂದಿಗೆ ಸೇರಿಕೊಳ್ಳುವಂತೆ RSSಗೆ ಪತ್ರ ಬರೆಯುತ್ತಾರೆ. ಆದರೆ, RSSನ ಅತಿಯಾದ ಧಾರ್ಮಿಕ ನೀತಿಯನ್ನು ಅರ್ಥ ಮಾಡಿಕೊಂಡಿದ್ದ ಹಾಗೂ ಕಾಂಗ್ರೆಸ್‌ನ ಸೈಂದ್ದಾಂತಿಕ ನಿಲುವುಗಳಿಗಾಗಿ ಈ ಪ್ರಸ್ತಾಪವನ್ನು ಜವಹರ್‌ಲಾಲ್‌ ನೆಹರೂ ಅವರು ತಿರಸ್ಕರಿಸಿದ್ದರು.

ಇನ್ನು, 1972ರಲ್ಲಿ RSSನ ಸರಸಂಘಚಾಲಕರಾಗಿದ್ದ ಮಧುಕರ್ ದತ್ತಾತ್ರೇಯ ದೇವರಸ್ ಅವರು ಇಂದಿರಾ ಗಾಂಧಿ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಪರಸ್ಪರ ವಿರೋಧಿಸುವ ಬದಲು ಜೊತೆ ಸೇರಿ ಕೆಲಸ ಮಾಡುವುದು ಉತ್ತಮ ಎಂದು ಹೇಳುತ್ತಲೇ ಇದ್ದರು. ಆದರೆ, ಇಂದಿರಾ ಗಾಂಧಿ, ತಮ್ಮ ತಂದೆಯ ಹಾದಿಯಲ್ಲೇ ನಡೆದು RSSನೊಂದಿಗೆ ಕೈಜೋಡಿಸುವ ವಿಚಾರವನ್ನು ಮುಂದಕ್ಕೆ ತಳ್ಳುತ್ತಲೇ ಬಂದಿದ್ದರು.

ಇದಿಷ್ಟು RSS ಮತ್ತು ಕಾಂಗ್ರೆಸ್‌ ನಡುವಿನ ಬಾಂದವ್ಯದ (?) ಸಂಕ್ಷಿಪ್ತ ಇತಿಹಾಸ. ಇನ್ನು ಮುಖ್ಯ ವಿಚಾರಕ್ಕೆ ಬರುವುದಾದರೆ, ತುರ್ತು ಪರಿಸ್ಥಿಯ ಸಂದರ್ಭ ಯಾಕಾಗಿ ಹೇರಬೇಕಾಯಿತು ಎಂಬುದರ ಕುರಿತು ಈಗಾಗಲೇ ಬಹಳಷ್ಟು ಲೇಖನಗಳು ಬರಹಗಳು ಬರೆದಾಗಿವೆ. ಮತ್ತೆ ಆ ವಿಚಾರವನ್ನು ಕೆದಕುವ ಬದಲು, ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸುವ ಇರಾದೆಯನ್ನು ಹೊಂದಿದ್ದ RSS ನಾಯಕರ ವಿಚಲಿತ ಮನಸ್ಥಿತಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯಾವ ರೀತಿ ಇತ್ತು ಎಂಬುದು ಮುಖ್ಯವಾಗುತ್ತದೆ.

RSS ನಾಯಕರಲ್ಲಿ ಪ್ರಮುಖವಾಗಿ ಬಿರುಕು ಉಂಟಾಗಿದ್ದು ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ ನಂತರ. ಕೆಲವು ನಾಯಕರು ಇಂದಿರಾ ಗಾಂಧಿಯ ನಿರ್ಧಾರದ ವಿರುದ್ದವಾಗಿ ಕಠಿಣವಾದ ನಿಲುವನ್ನು ತಾಳಿದರೆ ಉಳಿದವರು ಕ್ಷಮೆಯಾಚಿಸಿ ಬಂಧನದಿಂದ ದೂರ ಉಳಿದರು. RSSನ ನಾನಾಜಿ ದೇಶ್‌ಮುಖ್, ಮದನ್‌ ಲಾಲ್‌ ಖುರಾನಾ ಮುಂತಾದ ನಾಯಕರು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತುರ್ತು ಪರಿಸ್ಥಿತಿ ವಿರುದ್ದದ ಹೋರಾಟವನ್ನು ಮುಂದುವರೆಸಿದರು. ಬಾಳಾಸಾಹೇಬ್‌ ದೇವರಸ್‌ ಮತ್ತು ಅಟಲ್‌ ಬಿಹಾರಿ ವಾಜಪೇಯಿಯಂತಹ ನಾಯಕರು ಕ್ಷಮೆಯಾಚಿಸಿ ಬಂಧನದಿಂದ ದೂರವಾದರು.

RSS ಪರವಾಗಿ ಮುಖ್ಯವಾಗಿ ಹೋರಾಟವನ್ನು ಮುಂದುವರೆಸಿದವರು, ದತ್ತೋಪಂತ್‌ ತೆಂಗಾಡಿ, ಮಾಧವರಾವ್‌ ಮೂಲೆ, ಮೋರೋಪಂಥ್‌ ಪಿಂಗ್ಲೆ, ರಾಜೇಂದ್ರ ಸೀಂಗ್‌ ಮತ್ತು ಭಾವುಸಾಹೇಬ್‌ ದೇವರಸ್‌. ಆದರೂ, ಈ ಪ್ರಾಂತೀಯ RSS ಮುಖಂಡರು ಏಕನಾಥ್‌ ರಾಮಕೃಷ್ಣ ರಾನಡೆ ಅವರನ್ನು ಸಂಪರ್ಕಿಸಿ ಇಂದಿರಾ ಗಾಂಧಿ ಅವರೊಡನೆ ಮಾತುಕತೆಗೆ ಒತ್ತಾಯಿಸಿದ್ದರು.

ಏಕನಾಥ್‌ ರಾಮಕೃಷ್ಣ ರಾನಡೆ

ಇದಕ್ಕಿಂತಲೂ ಹಿಂದಿನಿಂದ ಇಂದಿರಾ ಗಾಂಧಿಯವರೊಡನೆ ಉತ್ತಮ ಸಂಬಂಧವನ್ನು ಹೊಂದಿದ್ದ ರಾನಡೆ ಅವರು ಬಹಳಷ್ಟು ಯೋಜನೆಗಳಲ್ಲಿ ಇಂದಿರಾ ಗಾಂಧಿಯವರೊಡನೆ ಕೆಲಸವನ್ನೂ ಮಾಡಿದ್ದರು. ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಸಮಿತಿಗೆ ರಾನಡೆ ಅವರನ್ನು ಇಂದಿರಾ ಗಾಂಧಿಯವರು ನೇಮಿಸಿದ್ದರು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ವಾಸಕ್ಕೆ ಒಳಗಾದವರಲ್ಲಿ ಅರುಣ್‌ ಜೇಟ್ಲಿಯೂ ಒಬ್ಬರು. ABVPಯ ನಾಯಕರಾಗಿದ್ದ ಜೇಟ್ಲಿ ಅವರು ತುರ್ತು ಪರಿಸ್ಥಿತಿಯ ಮೊದಲ ದಿನದಿಂದ ಕೊನೆಯವರೆಗೂ ಜೈಲಿನಲ್ಲಿ ಇದ್ದರು. ಆದರೆ, ಇತರ ನಾಯಕರುಗಳಾದ ಬಲ್ಬೀರ್‌ ಪುಂಜ್‌ ಮತ್ತು ಪ್ರಭು ಚಾವ್ಲಾ ಅವರು ಇಂದಿರಾ ಗಾಂಧಿ ಅವರ 20 ಅಂಶಗಳ ಮತ್ತು ಸಂಜಯ್‌ ಗಾಂಧಿ ಅವರ 5 ಅಂಶಗಳ ಒಪ್ಪಂದವನ್ನು ಒಪ್ಪಿಕೊಂಡು ಜೈಲಿನಿಂದ ಬಿಡುಗಡೆಯಾದರು.

ಆಗಿನ RSS ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್‌ ದೇವರಸ್‌ ಅವರು ಜಯಪ್ರಕಾಶ್‌ ನಾರಾಯಣ ಚಳವಳಿಯ ಸದಸ್ಯರಾಗಿ ಇರಲಿಲ್ಲ. ಅವರನ್ನು ಬಂಧಿಸಿಟ್ಟ ಯೆರವಾಡ ಜೈಲಿನಿಂದಲೇ ಇಂದಿರಾ ಗಾಂಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳಾಗಿದ್ದ ಶಂಕರ್‌ರಾವ್‌ ಚವ್ಹಾಣ್‌ ಅವರಿಗೆ ಹಲವು ಪತ್ರಗಳನ್ನು ಬರೆದ ಬಾಳಾಸಾಹೇಬ್‌ ಅವರು ಒಪ್ಪಂದವನ್ನು ಮಾಡಿಕೊಳ್ಳುವ ಕುರಿತು ಒಲವು ತೋರಿಸಿದ್ದರು.

ಬಾಳಾಸಾಹೇಬ್‌ ದೇವರಸ್‌

ವಾಜಪೇಯಿ ಅವರ ಆರೋಗ್ಯ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲದ ಕಾರಣ ಇಂದಿರಾ ಗಾಂಧಿ ಅವರ ಒಪ್ಪಂದಗಳಿಗೆ ಬೇಗನೇ ಒಪ್ಪಿಕೊಂಡು ಪರೋಲ್‌ ಮೇಲೆ ಜೈಲುವಾಸವನ್ನು ತಪ್ಪಿಸಿದರು. ಎಲ್‌ ಕೆ ಅಡ್ವಾಣಿ ಅವರನ್ನು ಹಾಗೂ ವಾಜಪೇಯಿ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.

ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಹ್ಮಣ್ಯನ್‌ ಸ್ವಾಮಿ 13 ಜೂನ್‌ 2000ರಂದು ‘ದ ಹಿಂದೂʼ ಪತ್ರಿಕೆಗೆ ಬರೆದ “Unlearnt lessons of the Emergency” ಲೇಖನದಲ್ಲಿ ಈ ರೀತಿಯ ಉಲ್ಲೇಖವನ್ನು ಮಾಡುತ್ತಾರೆ, “ತುರ್ತು ಪರಿಸ್ಥಿಯ ಹೋರಾಟದಲ್ಲಿ ಹಲವಾರು ಬಿಜೆಪಿ ಹಾಗೂ RSSನ ನಾಯಕರು ದ್ರೋಹವನ್ನು ಮಾಡಿದ್ದಾರೆ. ಜಯಪ್ರಕಾಶ್‌ ನಾರಾಯಣ ಚಳವಳಿಯಿಂದ RSS ದೂರವಾಗುವ ಕುರಿತು RSS ಸರಸಂಘಚಾಲಕರಾಗಿದ್ದ ಬಾಳಾಸಾಹೇಬ್‌ ದೇವರಸ್‌ ಅವರು ಯೆರವಾಡ ಜೈಲಿನಿಂದಲೇ ಇಂದಿರಾ ಗಾಂಧಿಗೆ ಪತ್ರವನ್ನು ಬರೆಯುತ್ತಾರೆ. ಆದರೆ, ಇಂದಿರಾ ಗಾಂಧಿ ಅವರ ಯಾವುದೇ ಪತ್ರಗಳಿಗೆ ಉತ್ತರವನ್ನು ನೀಡುವುದಿಲ್ಲ. ಅಟಲ್‌ ಬಿಹಾರಿ ವಾಜಪೇಯಿ ಕೂಡಾ ಕ್ಷಮಾಪಣಾ ಪತ್ರವನ್ನು ಬರೆಯುತ್ತಾರೆ. ಅವರನ್ನು ಇಂದಿರಾ ಗಾಂಧಿ ಒಪ್ಪಿಕೊಳ್ಳುತ್ತಾರೆ.” ಈ ಲೇಖನ ಬಿಜೆಪಿಯ ಕಣ್ಣನ್ನು ಕೆಂಪಗಾಗಿಸುತ್ತದೆ. ಆದರೆ, ಇತಿಹಾಸದ ಹಲವು ಕ್ರೂರ ಸತ್ಯಗಳನ್ನು ಬೆತ್ತಲೆಯಾಗಿಸುತ್ತದೆ.

ನಾನಾಜಿ ದೇಶ್‌ಮುಖ್‌ ಮತ್ತು ದತ್ತೋಪಂಥ್‌ ತೇಂಗಡಿ ಅವರು ಪೊಲೀಸರಿಂದ ಬಂಧಿಸಲ್ಪಟ್ಟ ನಂತರ RSS ನಾಯಕರ ಆತ್ಮಸ್ಥೈರ್ಯ ಉಡುಗಿ ಹೋಗಿತ್ತು. ಸೆಪ್ಟೆಂಬರ್‌ 1976ರಲ್ಲಿ, ತುರ್ತು ಪರಿಸ್ಥಿತಿಯನ್ನು ಕಠಿಣವಾಗಿ ವಿರೋಧಿಸುತ್ತಿದ್ದವರೂ ಕೂಡಾ ತಣ್ಣಗಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಸುಮಾರು 40,000 RSS ಸ್ವಯಂ ಸೇವಕರ ಕುಟುಂಬಗಳು ಆರ್ಥಿಕವಾಗಿ ಸಂಪೂರ್ಣವಾಗಿ ಬಡವಾದವು.

1976 ನವೆಂಬರ್‌ ತಿಂಗಳಲ್ಲಿ, ಮಾಧವರಾವ್‌ ಮೂಲೆ, ದತ್ತೋಪಂಥ್‌ ತೇಂಗಡಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು RSS ನಾಯಕರು ಒಂದು ಶರತ್ತನ್ನು ಮುಂದಿಟ್ಟು ತುರ್ತು ಪರಿಸ್ಥಿತಿಗೆ ಸಹಕರಿಸುವ ಭರವಸೆಯನ್ನು ನೀಡುತ್ತೇವೆಂದು ಪತ್ರ ಬರೆದರು. ಅವರಿಟ್ಟ ಶರತ್ತು ಏನೆಂದರೆ, ಎಲ್ಲಾ RSS ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕು. ಅವರ ʼಶರಣಾಗತಿಯ ದಾಖಲೆʼಗಳನ್ನು 1977ರ ಜನವರಿಯಲ್ಲಿ ಹೆಚ್‌. ವೈ. ಶಾರದಾ ಪ್ರಸಾದ್‌ ಅವರು ಸ್ವೀಕರಿಸುತ್ತಾರೆ.

ಶರಣಾಗತಿಯ ದಾಖಲೆಗಳನ್ನು RSS ನಾಯಕರಿಂದ ಪಡೆದುಕೊಂಡ ವಿಚಾರವನ್ನು ಕೂಡಾ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ತಮ್ಮ ಲೇಖನದಲ್ಲಿ ದೃಢೀಕರಿಸುತ್ತಾರೆ. “ಎಲ್ಲಾ RSSನ ನಾಯಕರು ಶರಣಾಗತಿಯನ್ನು ಒಪ್ಪಿಕೊಳ್ಳಲಿಲ್ಲ. ನವೆಂಬರ್‌ 1976 ರಲ್ಲಿ ಮಾಧವ್‌ರಾವ್‌ ಮೂಲೆ ತಮ್ಮ ಕಣ್ಣಲ್ಲಿ ನೀರನ್ನು ತುಂಬಿಕೊಂಡು ನನ್ನ ಬಳಿ ಹೇಳುತ್ತಾರೆ ನಾನು ವಿದೇಶಕ್ಕೆ ಪಲಾಯನ ಗೈದಿದ್ದರೆ ಒಳ್ಳೆಯದಿತ್ತು. RSS ಶರಣಾಗತಿಯ ದಾಖಲೆಯನ್ನು ಸಿದ್ದಪಡಿಸಿದೆ. 1977ರ ಜನವರಿ ಕೊನೆಯ ವೇಳೆಗೆ ಅದನ್ನು ಸಹಿ ಮಾಡಬೇಕಾಗಿದೆ. ವಾಜಪೇಯಿ ಅವರ ಒತ್ತಾಯದ ಮೇರೆಗೆ, ಇಂದಿರಾ ಗಾಂಧಿ ಹಾಗೂ ಸಂಜಯ್‌ ಗಾಂಧಿಯವರನ್ನು ಖುಶಿಪಡಿಸಲು ನಾನು ತ್ಯಾಗ ಮಾಡಬೇಕಾಗಿ ಬಂದಿದೆ,” ಎಂದು ಅವರು ಬರೆಯುತ್ತಾರೆ.

Tags: BJPEmergency in 1975Indira GandhiRSSಆರ್‌ಎಸ್‌ಎಸ್‌ಇಂದಿರಾ ಗಾಂಧಿತುರ್ತು ಪರಿಸ್ಥಿತಿಬಿಜೆಪಿ
Previous Post

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವವನ್ನು ನೆಹರೂ ತಿರಸ್ಕರಿಸಿದ್ದರೇ?

Next Post

ಜುಲೈ 5 ರಿಂದ ಪ್ರತಿ ಭಾನುವಾರವೂ ಲಾಕ್‌ಡೌನ್: ರಾಜ್ಯ ಸರ್ಕಾರ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಜುಲೈ 5 ರಿಂದ ಪ್ರತಿ ಭಾನುವಾರವೂ ಲಾಕ್‌ಡೌನ್: ರಾಜ್ಯ ಸರ್ಕಾರ

ಜುಲೈ 5 ರಿಂದ ಪ್ರತಿ ಭಾನುವಾರವೂ ಲಾಕ್‌ಡೌನ್: ರಾಜ್ಯ ಸರ್ಕಾರ

Please login to join discussion

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada