ಕರೋನಾ ಸೋಂಕು ಬೆಂಗಳೂರಿನಾದ್ಯಂತ ಸಾಕಷ್ಟು ವೇಗವಾಗಿ ಹಬ್ಬುತ್ತಿದೆ. ಈ ಹಂತದಲ್ಲಿ ಎಡೆಬಿಡದೆ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮದವರಿಗೂ ಸೋಂಕು ಹಬ್ಬುತ್ತಿರುವುದು ಹಾಗೂ ಅವರು ಬಹಳಷ್ಟು ಜನರೊಂದಿಗೆ ಸಂಪರ್ಕವನ್ನು ಹೊಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಈಗ ಬಂದಿರುವ ಸುದ್ದಿಯ ಪ್ರಕಾರ ರಾಷ್ಟ್ರೀಯ ಸುದ್ದಿ ಟಿವಿಯ ಕ್ಯಾಮೆರಾಮನ್ ಒಬ್ಬರಿಗೆ ಸೋಂಕು ತಗುಲಿದ್ದು ದೃಢವಾಗಿದೆ. ಅವರು ಬೆಂಗಳೂರಿನ ಪ್ರಸ್ಕ್ಲಬ್ ಸೀಲ್ಡೌನ್ ಆಗುವ ಸಾಧ್ಯತೆಗಳಿವೆ.
ಸೋಂಕು ತಗುಲಿರುವ ವಿಚಾರವನ್ನು ದೃಢಪಡಿಸಿರುವ ಪ್ರಸ್ ಕ್ಲಬ್ ಮೂಲಗಳು, ಪ್ರೆಸ್ ಕ್ಲಬ್ ಸಮಿತಿಯು ಈ ವಿಚಾರದ ಕುರಿತಾಗಿ ಚರ್ಚೆ ಮಾಡಲಿದೆ ಎಂದು ತಿಳಿಸಿವೆ.
ಬೆಂಗಳೂರಿನಲ್ಲಿ ಸೋಂಕು ಕಂಡು ಸ್ಥಳಗಳಲ್ಲಿ ಸರ್ಕಾರವು ಕಟ್ಟುನಿಟ್ಟಿನ ಸೀಲ್ಡೌನ್ ಮಾಡಲು ಆದೇಶ ನೀಡಿದೆ. ಹಾಗಾಗಿ ಪ್ರೆಸ್ ಕ್ಲಬ್ ಕೂಡಾ ಸೀಲ್ಡೌನ್ ಆಗುವ ಸಂಭವವಿದೆ ಎಂದಿವೆ ಮೂಲಗಳು.
