• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಹ್ಯಾಪಿ ಯುಗಾದಿ..! ಶೀಘ್ರದಲ್ಲೇ ಆಗಲಿದೆ ಪೆಟ್ರೋಲ್, ಡಿಸೇಲ್ ಬೆಲೆ 8 ರೂಪಾಯಿ ಏರಿಕೆ..!!

by
March 25, 2020
in ದೇಶ
0
ಹ್ಯಾಪಿ ಯುಗಾದಿ..! ಶೀಘ್ರದಲ್ಲೇ ಆಗಲಿದೆ ಪೆಟ್ರೋಲ್
Share on WhatsAppShare on FacebookShare on Telegram

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಲೇ ಇದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ಮಾತ್ರ ಏರುಹಾದಿಯಲ್ಲಿದೆ. ಅದಕ್ಕೆ ಕಾರಣ ಏನು ಎಂಬುದನ್ನು ಈಗಾಗಲೇ ವಿವರಿಸಿದ್ದೇವೆ. ಮಾರ್ಚ್ 14 ರಂದು ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತಲಾ 3 ರೂಪಾಯಿ ವಿಶೇಷ ಎಕ್ಸೈಜ್ ಸುಂಕ ಹೇರಿತ್ತು. ಅದು ಅಷ್ಟಕ್ಕೆ ಮುಗಿಯುತ್ತದೆ ಎಂದು ಯಾರಾದರೂ ಊಹಿಸಿದ್ದರೆ ಅದು ತಪ್ಪು..! ನರೇಂದ್ರ ಮೋದಿ ಸರ್ಕಾರ ಈಗ ಗ್ರಾಹಕರ ಜೇಬಿಗೆ ದೊಡ್ಡ ಪ್ರಮಾಣದಲ್ಲಿ ಕತ್ತರಿ ಹಾಕಲು ಮುಂದಾಗಿದೆ. ಆದರೆ, ಯಾವಾಗ ಎಂಬುದು ಗೊತ್ತಿಲ್ಲ. ಆದರೆ ಎಷ್ಟು ಎಂಬುದು ಗೊತ್ತಿದೆ. ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ತಲಾ 8 ರೂಪಾಯಿ ಏರಿಕೆ ಆಗಲಿದೆ.

ADVERTISEMENT

ಸದ್ಯಕ್ಕೆ ಲಾಕ್ ಡೌನ್ ಆಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ತೈಲದ ಬೇಡಿಕೆ ಕುಗ್ಗಲಿದೆ. ಹೀಗಾಗಿ ಲಾಕ್ ಡೌನ್ ಅವಧಿಯಲ್ಲಿ ದರ ಏರಿಕೆ ಮಾಡದೇ ಇರಬಹುದು. ಆದರೆ, ಲಾಕ್ ಡೌನ್ ಅವಧಿ ಮುಗಿಯುತ್ತಿದ್ದಂತೆ ಗ್ರಾಹಕರು ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯನ್ನು ಭರಿಸಲು ಸಿದ್ದರಾಗಬೇಕಿದೆ.

ಏನಾಗಿದೆ ಎಂದರೆ- ಲಾಕ್ ಡೌನ್ ಹೇರುವ ಮುನ್ನಾ ದಿನ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಾನು ಬಯಸಿದ ಯಾವುದೇ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಜ್ ಸುಂಕವನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ಅನುವು ಮಾಡಿಕೊಡುವ ನಿಬಂಧನೆಗೆ ಅನುಮೋದನೆ ಪಡೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕದ ಮಿತಿಯನ್ನು ಕ್ರಮವಾಗಿ ಲೀಟರ್‌ಗೆ 18 ಮತ್ತು 12 ರೂಪಾಯಿ ಗೆ ಏರಿಸಲು ಹಣಕಾಸು ಕಾಯ್ದೆ ಎಂಟನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಲಾಗಿದೆ. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ 2020 ರ ಹಣಕಾಸು ಮಸೂದೆಗೆ ತಿದ್ದುಪಡಿ ಮಸೂದೆಯು ಯಾವುದೇ ಚರ್ಚೆಯಿಲ್ಲದೇ ಅಂಗೀಕಾರವಾಗಿದೆ. ಹಿಂದಿನ ಮಿತಿ ಪೆಟ್ರೋಲ್‌ಗೆ ಲೀಟರ್‌ಗೆ 10 ಮತ್ತು ಡೀಸೆಲ್‌ಗೆ 4 ರೂಪಾಯಿ ಇತ್ತು. ‘ಕೋವಿಡ್-19’ ನಿಂದ ಉದ್ಭವಿಸಿರುವ ಸಂಕಷ್ಟದಿಂದ ಏಕಾಏಕಿ ಬಂದ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಸುಂಕ ಹೇರುತ್ತಿರುವುದಾಗಿ ಮೋದಿ ಸರ್ಕಾರ ತನ್ನನ್ನು ತಾನು ಸಮರ್ಥಿಸಿಕೊಂಡಿದೆ. ಮಾರ್ಚ್ 14ರಂದು ಏರಿಸಿದ ಎಕ್ಸೈಜ್ ಸುಂಕ ತಲಾ 3 ರೂಪಾಯಿ ಗಳಿಂದ ವಾರ್ಷಿಕ 39,000 ಕೋಟಿ ಹೆಚ್ಚುವರಿ ಆದಾಯಗಳಿಸುವ ನಿರೀಕ್ಷೆ ಇದೆ. 3 ರೂಪಾಯಿ ಪೈಕಿ ವಿಶೇಷ ಹೆಚ್ಚುವರಿ ಎಕ್ಸೈಜ್ ಸುಂಕ 2 ರೂಪಾಯಿ ಮತ್ತು ರಸ್ತೆ ಮತ್ತು ಮೂಲಭೂತ ಸೌಕರ್ಯಗಳ ಮೇಲಿನ ಉಪಕರ (ಸೆಸ್) 1 ರೂಪಾಯಿ ಸೇರಿದೆ.

ಉದ್ದೇಶಿತ ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ಯಾವಾಗ ಬೇಕಾದರೂ 8 ರೂಪಾಯಿ ಏರಿಕೆ ಮಾಡುವ ಅಧಿಕಾರವನ್ನು ನೀಡುತ್ತದೆ. ಸದ್ಯಕ್ಕೆ ಏರಿಕೆ ಇಲ್ಲದಿದ್ದರೂ ಮುಂಬರುವ ದಿನಗಳಲ್ಲಿ ಏರಿಕೆ ಆಗುತ್ತದೆ. ಅಥವಾ ಲಾಕ್ ಡೌನ್ ದಿನಗಳಲ್ಲೇ ನಿತ್ಯವೂ 50 ಪೈಸೆಗಳಷ್ಟು ಏರಿಕೆ ಮಾಡಿ ಲಾಕ್ ಡೌನ್ ಮುಗಿಯುವ ವೇಳೆಗೆ ಗರಿಷ್ಠ ಎಂಟು ರುಪಾಯಿಗಳ ಏರಿಕೆಯನ್ನೂ ಮಾಡುವ ಸಾಧ್ಯತೆ ಇದೆ. ಈ ಹಿಂದೆಯೂ ನರೇಂದ್ರ ಮೋದಿ ಸರ್ಕಾರ ಚುನಾವಣಾ ಅವಧಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡದೇ, ಚುನಾವಣೆ ಮುಗಿದ ನಂತರದಲ್ಲಿ ತ್ವರಿತವಾಗಿ ಏರಿಕೆ ಮಾಡಿ, ಚುನಾವಣಾ ಅವಧಿಯಲ್ಲಿ ಏರಿಕೆ ಮಾಡದ್ದರಿಂದ ಆಗಿದ್ದ ನಷ್ಟವನ್ನೂ ಭರಿಸಿಕೊಂಡಿತ್ತು.

ಈಗ ‘ಕೋವಿಡ್-19’ ಹೆಸರಿನಲ್ಲಿ ದರ ಏರಿಕೆ ಮಾಡುವ ಅಧಿಕಾರವನ್ನು ನರೇಂದ್ರ ಮೋದಿ ಸರ್ಕಾರ ಪಡೆದುಕೊಂಡಿದೆ. ಈಗ ಮೂಲಭೂತ ಪ್ರಶ್ನೆ ಎಂದರೆ- ‘ಕೋವಿಡ್-19’ ಸಂಕಷ್ಟ ಎದುರಿಸಲು ಕೇಂದ್ರ ಸರ್ಕಾರದ ಬಳಿ ಹಣ ಇಲ್ಲವೇ? ಹೆಚ್ಚುವರಿ ತೆರಿಗೆ ಮೂಲಕವೇ ಹಣ ಸಂಗ್ರಹ ಮಾಡುವಂತಹ ಅನಿವಾರ್ಯ ಪರಿಸ್ಥಿತಿ ಇದೆಯೇ? ಅಂದರೆ ಕೇಂದ್ರ ಸರ್ಕಾರದ ಬೊಕ್ಕಸ ಬರಿದಾಗಿದೆಯೇ? ಕೇಂದ್ರ ಸರ್ಕಾರ ದಿವಾಳಿಯತ್ತ ದಾಪುಗಾಲು ಹಾಕಿದೆಯೇ?

ಈ ಎಲ್ಲಾ ಮೂಲಭೂತ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ. ಏಕೆಂದರೆ ಇಡೀ ಜಗತ್ತಿನಲ್ಲೇ ಕಚ್ಚಾ ತೈಲ ದರ ಇಳಿಕೆಯ ಲಾಭವನ್ನು ಗ್ರಾಹಕರು ಅನುಭವಿಸುತ್ತಿದ್ದಾರೆ. ಅದರೆ, ಭಾರತದ ದುರಾದೃಷ್ಟ ಗ್ರಾಹಕ ಮಾತ್ರ ಅದರ ಲಾಭದಿಂದ ವಂಚಿತನಾಗಿದ್ದಾನೆ. ಅಷ್ಟೇ ಅಲ್ಲ, ಸಾಮಾನ್ಯ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು ದರ ಪಾವತಿಸುತಿಸುತ್ತಿದ್ದಾನೆ.

ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರ 71.97 ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿಯುತ್ತಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಮಾರ್ಚ್ 16ರಿಂದಲೂ 71.97 ರೂಪಾಯಿ ಸ್ಥಿರವಾಗಿದೆ. ಹಣಕಾಸು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮೋದಿ ಸರ್ಕಾರವು ಪಡೆದಿರುವ ಅಧಿಕಾರವನ್ನು ಚಲಾಯಿಸಿ 8 ರುಪಾಯಿ ಏರಿಸಿದರೆ ಪೆಟ್ರೋಲ್ ದರವು ಹೆಚ್ಚುಕಮ್ಮಿ 80 ರೂಪಾಯಿಗೆ ಏರುತ್ತದೆ. ಅದಾದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ದರ ಏರಿಕೆ ಆಗುತ್ತದೆ ಎಂದಿಟ್ಟುಕೊಳ್ಳಿ, ಆಗ ತ್ವರಿತವಾಗಿ ದೇಶೀಯ ಮಾರುಕಟ್ಟೆ ದರವೂ ಏರುತ್ತದೆ. ನಾವು ಈ ಹಿಂದೆಯೇ ಹೇಳಿದಂತೆ ನರೇಂದ್ರ ಮೋದಿ ಸರ್ಕಾರವು ಯಾವುದೇ ಕಾರಣಕ್ಕೂ ಪೆಟ್ರೋಲ್ ದರವು 70 ರೂಪಾಯಿಗಿಂತ ಕೆಳಕ್ಕೆ ಇಳಿಯಲು ಬಿಡುವುದಿಲ್ಲ. ಕಚ್ಚಾ ತೈಲ 20 ಡಾಲರ್ ಗೆ ಕುಸಿದರೂ ಭಾರತದ ಗ್ರಾಹಕರು ಮಾತ್ರ ಪೆಟ್ರೋಲ್ ಗೆ ಗರಿಷ್ಠ ಪ್ರಮಾಣದ ದರ ತೆರಲೇಬೇಕು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತ್ವರಿತವಾಗಿ ಕುಸಿದಿದೆ. ರಷ್ಯಾ ದೇಶವನ್ನು ತೈಲ ಮಾರುಕಟ್ಟೆಯಿಂದ ಹೊರಹಾಕಲು ಮುಂದಾಗಿರುವ ಸೌದಿ ಅರೇಬಿಯಾವು ಭಾರಿ ಪ್ರಮಾಣದಲ್ಲಿ ದರ ಕಡಿತ ಮಾಡಿ ದರ ಸಮರ ಸಾರಿದೆ. ಜನವರಿ ಆರಂಭದಲ್ಲಿ ಪ್ರತಿ ಬ್ಯಾರೆಲ್ ಗೆ 66 ಡಾಲರ್ ಇದ್ದ ಕಚ್ಚಾ ತೈಲವು ಈಗ 30 ಡಾಲರ್ ಆಜುಬಾಜಿಗೆ ಇಳಿದಿದೆ. ಅಂದರೆ ಶೇ.52ರಷ್ಟು ಕುಸಿತವಾಗಿದೆ. ಬೆಂಗಳೂರಿನಲ್ಲಿ ಜನವರಿ 1ರಂದು ಪೆಟ್ರೋಲ್ ದರ ರೂ. 77.71 ಇದ್ದದ್ದು ಈಗ (ಮಾರ್ಚ್ 25ರಂದು) ರೂ. 71.97ಕ್ಕೆ ಇಳಿದಿದೆ. ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಶೇ.52ರಷ್ಟು ಕುಸಿದಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಇಳಿದಿರುವುದು ಶೇ.7ರಷ್ಟು ಮಾತ್ರ.

ಕೇಂದ್ರ ಸರ್ಕಾರ ಮಾರ್ಚ್ 14ರಂದು ಮತ್ತೆ ಎಕ್ಸೈಜ್ ಸುಂಕ ಹೇರಿರುವುದರಿಂದ ಕೇಂದ್ರ ಸರ್ಕಾರ ಸರ್ಕಾರ ಪೆಟ್ರೋಲ್ ಮೇಲಿನ ಹಾಲಿ ತೆರಿಗೆಯು ರೂ.17.98 ರಿಂದ ರೂ.98ಕ್ಕೆ ಮತ್ತು ಡಿಸೇಲ್ ತೆರಿಗೆಯು ರೂ.13.83 ರಿಂದ ರೂ.16.83ಕ್ಕೆ ಏರಿದೆ. ಸಾಮಾನ್ಯವಾಗಿ ಒಂದು ಅಥವಾ ಗರಿಷ್ಠ ಎರಡು ರೂಪಾಯಿ ಸುಂಕ ಹೇರುವ ವಾಡಿಕೆ ಇತ್ತು. ನರೇಂದ್ರ ಮೋದಿ ಸರ್ಕಾರವು ಕಚ್ಚಾ ತೈಲ ದರ ಮತ್ತಷ್ಟು ಕುಸಿಯುವ ನಿರೀಕ್ಷೆಯಿಂದಾಗಿ 3 ರೂಪಾಯಿ ಸುಂಕ ಹೇರಿದೆ. ಇದು ಕಳೆದ ಎಂಟು ವರ್ಷಗಳಲ್ಲೇ ಅತಿ ಗರಿಷ್ಠ ಪ್ರಮಾಣದ ಏರಿಕೆಯಾಗಿದೆ. ಒಂದು ವೇಳೆ 8 ರೂಪಾಯಿ ದರ ಏರಿಕೆ ಮಾಡಿದರೆ ಅದು ಸರ್ವಕಾಲಿಕ ಗರಿಷ್ಠ ದರ ಏರಿಕೆಯಾಗಿ ಜಾಗತಿಕ ದಾಖಲೆ ಆಗಲಿದೆ..!

Tags: Central Govtdieselindia lockdownpetrolPM ModiPrice Hikeugadiಕೇಂದ್ರ ಸರಕಾರಡೀಸೆಲ್ದರ ಏರಿಕೆಪೆಟ್ರೋಲ್ಪ್ರಧಾನಿ ಮೋದಿಯುಗಾದಿಲಾಕ್ ಡೌನ್
Previous Post

ದೇಶದ ಗಮನಸೆಳೆದ ಡಾ. ಕಾಮ್ನಾ ಕಕ್ಕರ್‌ ಟ್ವೀಟ್‌ ; ಅಸಲಿ, ನಕಲಿಯಾಚೆಗೆ..!?

Next Post

ಇರಾನ್‌ ಮುಲ್ಲಾ ಮಾತಿಗೆ ಮರುಳಾದಂತೆ, ಪ್ರಧಾನಿ ಮೋದಿ ಮಾತಿಗೆ ಮರುಳಾದ ಭಾರತೀಯರು..!?

Related Posts

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
0

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ನಟಿಯರಲ್ಲಿ ಖುಷಿ ಮುಖರ್ಜಿ (Khushi Mukherjee) ಕೂಡ ಒಬ್ಬರು. ಸದಾ ತುಂಡುಡುಗೆ ತೊಟ್ಟು ಸದ್ದು ಮಾಡುತ್ತಿರುವ ಬೆಡಗಿ ಎಂದೇ ಹೇಳಬಹುದು. ಇದೀಗ...

Read moreDetails

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025
ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
Next Post
ಇರಾನ್‌ ಮುಲ್ಲಾ ಮಾತಿಗೆ ಮರುಳಾದಂತೆ

ಇರಾನ್‌ ಮುಲ್ಲಾ ಮಾತಿಗೆ ಮರುಳಾದಂತೆ, ಪ್ರಧಾನಿ ಮೋದಿ ಮಾತಿಗೆ ಮರುಳಾದ ಭಾರತೀಯರು..!?

Please login to join discussion

Recent News

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
Top Story

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

by ಪ್ರತಿಧ್ವನಿ
July 2, 2025
Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada