ಮಹಾರಾಷ್ಟ್ರದಲ್ಲಿದ್ದ ವಲಸೆ ಕಾರ್ಮಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಕರ್ನಾಟಕ ಸರ್ಕಾರ ಒಪ್ಪಿಕೊಂಡಿರುವುದರಿಂದ ಮಹಾರಾಷ್ಟ್ರದ ಥಾಣೆಯಿಂದ ಕಲಬುರಗಿಗೆ ವಲಸೆ ಕಾರ್ಮಿಕರನ್ನು ಕರೆತರುವ ರೈಲು ಸೋಮವಾರದಂದು ಹೊರಟಿದೆ. ಇದುವರೆಗೂ 66 ರೈಲುಗಳಲ್ಲಿ ಸುಮಾರು 73,132 ಮಂದಿ ಕಾರ್ಮಿಕರು ಮಹಾರಾಷ್ಟ್ರದಿಂದ ತಮ್ಮ ರಾಜ್ಯಗಳಿಗೆ ಹೊರಟಿದ್ದಾರೆ. ಅದರಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಸೇರಿದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಲಾಕ್‌ಡೌನ್‌ನಿಂದ ವಿವಿಧ ರಾಜ್ಯಗಳಲ್ಲಿ ಬಾಕಿಯಾಗಿದ್ದ ಕಾರ್ಮಿಕರು, ಹಾಗೂ ಯಾತ್ರಿಕರನ್ನು ಅವರ ರಾಜ್ಯದ ಗಡಿಗಳವರೆಗೆ ತಲುಪಿಸಲು ಹಾಗೂ ಅನ್ಯರಾಜ್ಯಗಳಲ್ಲಿ ಬಾಕಿಯಾಗಿದ್ದ ಕರ್ನಾಟಕದ ನಿವಾಸಿಗಳನ್ನು ಹಿಂದಕ್ಕೆ ಕರೆತರಲು ರಾಜ್ಯ ಸರ್ಕಾರ ಮೇ ಏಳರಂದು ಒಪ್ಪಿಗೆ ನೀಡಿತ್ತು.

MHA ನಿರ್ದೇಶನದಂತೆ ಲಾಕ್ಡೌನ್ ಸಂಧರ್ಭದಲ್ಲಿ ಬಾಕಿಯಾಗಿದ್ದವರ ಪ್ರಯಾಣಕ್ಕೆ ಅನುಕೂಲವಾಗುವಂತೆ ಗಡಿಗಳನ್ನು ತೆರೆದಿದ್ದೇವೆ. ಅನ್ಯರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರ ಆರೋಗ್ಯ ಹಾಗೂ ಸುರಕ್ಷತೆಯ ಬಗ್ಗೆ ಖಚಿತಪಡಿಸಕೊಳ್ಳಲಾಗುವುದು ಎಂದು ರಾಜ್ಯ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ T K ಅನಿಲ್ ಕುಮಾರ್ ಹೇಳಿದ್ದರು.
ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರೋನಾದ ವಿರುಧ್ಧ ಹೋರಾಟದಲ್ಲಿ ಕರ್ನಾಟಕ ತಕ್ಕಮಟ್ಟಿನ ನಿಯಂತ್ರಣ ಹೊಂದಿದೆ. ದೇಶದಲ್ಲೇ ಅತ್ಯಧಿಕ ಕರೋನಾ ಸೋಂಕು ದಾಖಲಾಗಿರುವ ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಕರ್ನಾಟಕಕ್ಕೆ ಬರವುದರಿಂದ ರಾಜ್ಯ ಸರ್ಕಾರಕ್ಕೆ ಇನ್ನಷ್ಟು ಸವಾಲುಗಳು ಎದುರಾಗಲಿರುವ ಸಾಧ್ಯತೆ ಇದೆ