• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕಾರ್ಮಿಕ ದಿನಾಚರಣೆಗೆ ತನ್ನ ಕಾರ್ಮಿಕರಿಗೆ ʼಶಾಕಿಂಗ್ʼ ಉಡುಗೊರೆ ನೀಡಿದ ಅಂಬಾನಿ

by
May 1, 2020
in ದೇಶ
0
ಕಾರ್ಮಿಕ ದಿನಾಚರಣೆಗೆ ತನ್ನ ಕಾರ್ಮಿಕರಿಗೆ ʼಶಾಕಿಂಗ್ʼ ಉಡುಗೊರೆ ನೀಡಿದ ಅಂಬಾನಿ
Share on WhatsAppShare on FacebookShare on Telegram

ಕರೋನಾ ಸೋಂಕಿನಿಂದ ಎದುರಾದ ಆರ್ಥಿಕ ಬಿಕ್ಕಟ್ಟಿನ ಬಿಸಿ ರಿಲಯನ್ಸ್ ಸಮೂಹ ಸಂಸ್ಥೆಗಳಿಗೂ ತಟ್ಟಿದ್ದು ತೈಲ ಮತ್ತು ಅನಿಲ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನದಲ್ಲಿ ಅರ್ಧದಷ್ಟು ಕಡಿತಗೊಳಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮಂಗಳವಾರ ಘೋಷಿಸಿದೆ ಎಂದು ʼರಾಯಿಟರ್ಸ್ʼ ವರದಿ ಮಾಡಿದೆ. ವಾರ್ಷಿಕ 15 ಲಕ್ಷಕ್ಕಿಂತ ಹೆಚ್ಚು ವೇತನ ಪಡೆಯುವ ಕಾರ್ಮಿಕರ ವೇತನದಲ್ಲಿ 10% ಕಡಿತಗೊಳಿಸಲಾಗುವುದು, ಉನ್ನತ ಹುದ್ದೆಯ ಮಂದಿಯ 30% ರಿಂದ 50% ವೇತನದಲ್ಲಿ ಕಡಿತಗೊಳಿಸಲಾಗುವುದು ಎಂದು ಕಂಪೆನಿಯ ಅಧಿಕೃತ ಹೇಳಿಕೆಯನ್ನು ಆಧರಿಸಿ ʼರಾಯಿಟರ್ಸ್ʼ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಪೆಟ್ರೋ ರಾಸಾಯನಿಕಗಳ ಬೇಡಿಕೆ ಕಡಿಮೆಯಾದ ಕಾರಣ ಹೈಡ್ರೋಕಾರ್ಬನ್ಗಳ ವ್ಯವಹಾರದಲ್ಲಿ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಹಿತಲ್ ಮೆಸ್ವಾನಿ ನೌಕರರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ನಾವು ನಿರ್ವಹಣಾ ವೆಚ್ಚ ಹಾಗೂ ನಿಗದಿತ ವೆಚ್ಚದ ಮೇಲೆ ಗಣನೀಯ ಪ್ರಮಾಣದ ಹಿಡಿತ ಹೊಂದಬೇಕಾದಂತಹ ಪರಿಸ್ಥಿತಿಯಲ್ಲಿದ್ದೇವೆ. ಇದಕ್ಕೆ ನಮ್ಮೆಲ್ಲರ ಕೊಡುಗೆಯೂ ಅಗತ್ಯವಾಗಿದೆ. ನಮ್ಮ ಚೇರ್ಮನ್ (ಅಂಬಾನಿ) ತಮ್ಮ ಸಂಪೂರ್ಣ ಭತ್ಯೆಯನ್ನು ತ್ಯಜಿಸಿದ್ದಾರೆಂದು ಪತ್ರದಲ್ಲಿ ಬರೆದಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಕಾರ್ಮಿಕರಿಗೆ ನೀಡುವ ವಾರ್ಷಿಕ ಬೋನಸ್ ನಗದು ಮತ್ತು ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕಗಳನ್ನು ಕೂಡಾ ಮುಂದೂಡಿದೆ ಎಂದು ʼದಿ ಎಕನಾಮಿಕ್ ಟೈಮ್ಸ್ʼ ವರದಿ ಮಾಡಿದೆ. ರಿಲಯನ್ಸ್ ನೇತೃತ್ವದ ಉಳಿದ ಸಂಸ್ಥೆಗಳ ಮೇಲೆ ಆರ್ಥಿಕ ಬಿಕ್ಕಟ್ಟಿನ ನೇರ ಪರಿಣಾಮ ಬೀರಿದೆಯೇ ಎಂದು ಇನ್ನೂ ಸ್ಪಷ್ಟಗೊಂಡಿಲ್ಲ.

ಪಾರದರ್ಶಕತೆ ಕಾಪಾಡಿಕೊಳ್ಳದ ಕುರಿತು ವಿವಾದಗಳೆದ್ದಿರುವ PM-CARES ನಿಧಿಗೆ 500 ಕೋಟಿ ಸಂಭಾವನೆ ನೀಡಿರುವ ಗುಜರಾತ್ ಮೂಲದ ಅಂಬಾನಿ ತನ್ನ ಕಾರ್ಮಿಕರ ವೇತನದಲ್ಲಿ ಬಹುತೇಕ ಅರ್ಧದಷ್ಟನ್ನು ತಡೆಹಿಡಿದಿರುವುದು ಸಂದೇಹ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ.

ಕೃಪೆ: Scroll.in

Tags: Economical crisisindia lockdownLabourersMukesh AmbaniPMCARESReliance Industries
Previous Post

ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ್ಯ ಭದ್ರತಾ ಪಡೆಗಳ ಅಧೀನದಲ್ಲಿದೆಯೇ?       

Next Post

ದುಡಿಯುವ ಕೈಗಳ ಉದ್ಯೋಗ ಕಸಿದ ಕರೋನಾ ಸಂಕಷ್ಟದ ಹೊತ್ತಲ್ಲಿ ಕಾರ್ಮಿಕ ದಿನ

Related Posts

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?
Top Story

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

by ಪ್ರತಿಧ್ವನಿ
May 26, 2026
0

ಬೆಂಗಳೂರು : ರಾಜ್ಯ ರಾಜಕಾರಣ ದೆಹಲಿಗೆ ಶಿಫ್ಟ್‌ ಆಗಿದ್ದು, ಕಾಂಗ್ರೆಸ್‌ ಪಾಳಯದಲ್ಲಿನ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಕುರಿತು ಈಗಾಗಲೇ ದೆಹಲಿಯಲ್ಲಿರುವ ಸಿದ್ದರಾಮಯ್ಯ ಹಾಗೂ...

Read moreDetails
ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

ಕುರ್ಚಿ ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದರಾಮಯ್ಯ ಟೀಂ ಪ್ಲ್ಯಾನ್‌ ಏನು..? : ಹೈ ವೋಲ್ಟೇಜ್‌ ಸಭೆಯಲ್ಲಿ ಏನಾಗಬಹುದು..?

May 26, 2026
AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

May 25, 2026
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
Next Post
ದುಡಿಯುವ ಕೈಗಳ ಉದ್ಯೋಗ ಕಸಿದ ಕರೋನಾ ಸಂಕಷ್ಟದ ಹೊತ್ತಲ್ಲಿ ಕಾರ್ಮಿಕ ದಿನ

ದುಡಿಯುವ ಕೈಗಳ ಉದ್ಯೋಗ ಕಸಿದ ಕರೋನಾ ಸಂಕಷ್ಟದ ಹೊತ್ತಲ್ಲಿ ಕಾರ್ಮಿಕ ದಿನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!