• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಮಹಾರಾಷ್ಟ್ರ: ಉಧ್ಧವ್ ಠಾಕ್ರೆ ಮುಖ್ಯಮಂತ್ರಿ ಪದವಿ ತೂಗುಗತ್ತಿಯಲ್ಲಿ

by
April 29, 2020
in ರಾಜಕೀಯ
0
ಮಹಾರಾಷ್ಟ್ರ: ಉಧ್ಧವ್ ಠಾಕ್ರೆ ಮುಖ್ಯಮಂತ್ರಿ ಪದವಿ ತೂಗುಗತ್ತಿಯಲ್ಲಿ
Share on WhatsAppShare on FacebookShare on Telegram

ಶಾಸಕಾಂಗ ಪರಿಷತ್ತಿನಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಲು ಸಿಎಂ ಠಾಕ್ರೆ ಬಯಸಿದ್ದಾರೆ. ಆದರೆ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯರಿ ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದ ಕಾರಣ ಠಾಕ್ರೆ ಮುಖ್ಯಮಂತ್ರಿ ಪದವಿ ತೂಗುಗತ್ತಿಯ ಮೇಲೆ ನಿಂತಿದೆ.

ADVERTISEMENT

NCPಯ ಅಜಿತ್ ಪವಾರ್, ಜಯಂತ್ ಪಾಟೀಲ್, ಶಿವಸೇನೆಯ ಏಕಾಂತ್ ಶಿಂಢೆ, ಅನಿಲ್ ಪರಾಬ್, ಕಾಂಗ್ರೆಸ್ಸಿನ ಬಾಳಾಸಾಹೇಬ್ ಥೋರಟ್ ಹಾಗೂ ಅಸ್ಲಮ್ ಶೇಖ್‌ನ್ನು ಒಳಗೊಂಡ ಕ್ಯಾಬಿನೆಟ್ ನಿಯೋಗವು ಮಂಗಳವಾರ ರಾಜ್ಯಪಾಲರ ನಿವಾಸಕ್ಕೆ ತೆರಳಿ ಉದ್ದವ್‌ ಠಾಕ್ರೆಯನ್ನು ಪರಿಷತ್ತಿನ ಸದಸ್ಯರಾಗಿ ಮರು ನಾಮನಿರ್ದೇಶನ ಮಾಡಲು ಶಿಫಾರಸ್ಸು ಮಾಡಿದೆ.

“ರಾಜ್ಯಪಾಲರಿಗೆ ನಮ್ಮ ಮನವಿಯನ್ನು ಸಲ್ಲಿಸಿದ್ದೇವೆ, ಅವರು ನಮ್ಮ ನಮ್ಮ ಮನವಿಯನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂದು ಗೊತ್ತಿಲ್ಲ,” ಎಂದು ನಿಯೋಗದ ಹಿರಿಯ ಸದಸ್ಯರೊಬ್ಬರು ಠಾಕ್ರೆಯವರ ನಾಮನಿರ್ದೇಶನದ ಕುರಿತು ಅನಿಶ್ಚಿತತೆಯ ದನಿಯಲ್ಲಿ ಹೇಳಿದರು. ಶಾಸಕಾಂಗ ಪರಿಷತ್ತಿನ ಚುನಾವಣೆಯನ್ನು ನಿಗದಿಗಿಂತ ಮುಂಚಿತವಾಗಿ ನಡೆಸಲು ಚುನಾವಣಾ ಆಯೋಗವನ್ನು ಸಂಪರ್ಕಿಸಲು ಸರ್ಕಾರವು ಚಿಂತಿಸುತ್ತಿದೆ ಎಂದು ಹೇಳಿದರು.

ನಿಗದಿಯಂತೆ ಎಪ್ರಿಲ್ 24ರಂದು 9 ವಿಧಾನ ಪರಿಷತ್ತಿನ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಒಂದು ಸ್ಥಾನಕ್ಕೆ ಉಧ್ಧವ್ ಠಾಕ್ರೆ ಸ್ಪರ್ಧಿಸಬೇಕಿತ್ತು. ಆದರೆ, ಕರೋನ ಬಿಕ್ಕಟ್ಟು ಎದುರಿಟ್ಟು ಚುನಾವಣಾ ಆಯೋಗವು ಚುನಾವಣೆಯನ್ನು ಮುಂದೂಡಿತ್ತು. ಹೀಗಾಗಿ, ಖಾಲಿಯಿರುವ ಎರಡು ನಾಮನಿರ್ದೇಶಿತ ಹುದ್ದೆಗಳಲ್ಲಿ ಒಂದು ಸ್ಥಾನಕ್ಕೆ ರಾಜ್ಯಪಾಲರಿಂದ ನಾಮ ನಿರ್ದೇಶನಗೊಳ್ಳಲು ಮುಖ್ಯಮಂತ್ರಿ ಬಯಸಿದ್ದರು. ಈ ಹಿಂದೆಯೂ, ನಾಮ ನಿರ್ದೇಶನಗೊಳಿಸಲು ಕ್ಯಾಬಿನೆಟ್ ನಿಯೋಗವು ಎಪ್ರಿಲ್ 9ರಂದು ರಾಜಭವನಕ್ಕೆ ಶಿಫಾರಸನ್ನು ಸಲ್ಲಿಸಿತ್ತು. ಆದರೆ ತಾಂತ್ರಿಕ ಕಾರಣವನ್ನು ಮುಂದಿಟ್ಟು ರಾಜಭವನ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ.

Tags: Corona Outbreaklegislative councillockdown effectMaharashtraShivsenaUddhav Thackareyಉಧ್ಧವ್‌ ಠಾಕ್ರೆ
Previous Post

ಗದಗ ಜಿಲ್ಲಾಡಳಿತಕ್ಕೆ ಕೋವಿಡ್ ಆತಂಕ, ಕಳಂಕ; ಜಿಲ್ಲಾಧಿಕಾರಿಗಳಿಗಿಲ್ಲ ಉತ್ತಮ ಅಂಕ

Next Post

ಪಿಡುಗಿಗೆ ಮೊದಲ ಬಾರಿಗೆ ಧಾರ್ಮಿಕ ಬಣ್ಣಹಚ್ಚಿದ ಮಾಧ್ಯಮಗಳು!

Related Posts

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ
Top Story

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

by ಪ್ರತಿಧ್ವನಿ
May 15, 2026
0

*ನಮ್ಮನ್ನು ಟೀಕೆ ಮಾಡದಿದ್ದರೆ ಕುಮಾರಸ್ವಾಮಿ ರಾಜಕೀಯವಾಗಿ ಬದುಕಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್* *ಕುಮಾರಸ್ವಾಮಿ ಅವರೇ ಡಿನೋಟಿಪೈ ಮಾಡಬಹುದಿತ್ತಲ್ಲ, ಯಾಕೆ ಮಾಡಲಿಲ್ಲ?* *ರೈತರ ಬಳಿ ಹೋಗಿ ನಾನೇ...

Read moreDetails
ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

May 15, 2026
64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

May 15, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
ಮೋದಿ ಮಾತಿಗೆ ಬುಲೆಟ್‌ ಏರಿದ ಫಡ್ನವೀಸ್‌ : ಮಹಾರಾಷ್ಟ್ರದಲ್ಲಿ‌ ಇನ್ಮುಂದೆ ಇಂಧನ ಮಿತವ್ಯಯಕ್ಕೆ ಯಾವೆಲ್ಲ ರೂಲ್ಸ್..?

ಮೋದಿ ಮಾತಿಗೆ ಬುಲೆಟ್‌ ಏರಿದ ಫಡ್ನವೀಸ್‌ : ಮಹಾರಾಷ್ಟ್ರದಲ್ಲಿ‌ ಇನ್ಮುಂದೆ ಇಂಧನ ಮಿತವ್ಯಯಕ್ಕೆ ಯಾವೆಲ್ಲ ರೂಲ್ಸ್..?

May 14, 2026
Next Post
ಪಿಡುಗಿಗೆ ಮೊದಲ ಬಾರಿಗೆ ಧಾರ್ಮಿಕ ಬಣ್ಣಹಚ್ಚಿದ ಮಾಧ್ಯಮಗಳು!

ಪಿಡುಗಿಗೆ ಮೊದಲ ಬಾರಿಗೆ ಧಾರ್ಮಿಕ ಬಣ್ಣಹಚ್ಚಿದ ಮಾಧ್ಯಮಗಳು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada