ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24ಕ್ಕೆ ಭಾರತಕ್ಕೆ ಬರುತ್ತಿದ್ದಾರೆ. ಭಾರತ ಕೂಡ ವಿಶ್ವದ ದೊಡ್ಡಣ್ಣನನ್ನು ಸ್ವಾಗತ ಮಾಡಲು ತುಗಾಲಲ್ಲಿ ನಿಂತಿದೆ. ಟ್ರಂಪ್ ಸ್ವಾಗತಕ್ಕಾಗಿ ಗುಜರಾತ್‌ನ ಅಹಮಾದಾಬಾದ್‌ನಲ್ಲಿ ರತ್ನಗಂಬಳಿ ಸ್ವಾಗತಕ್ಕೆ ಸಜ್ಜಾಗಿ ನಿಂತಿದೆ. ಈಗಾಗಲೇ ಅಮೆರಿಕದಿಂದ ನಾಲ್ಕನೇ ಯುಎಸ್ ಏರ್ ಫೋರ್ಸ್ನ ವಿಮಾನ ಅಧ್ಯಕ್ಷರ ಕುಂಟುಂಬದ ಸಾಮಗ್ರಿಗಳನ್ನು ಹೊತ್ತು ತಂದಿದೆ. ಕೇವಲ 36 ಗಂಟೆಗಳ ಪ್ರವಾಸ ಕೈಗೊಂಡಿರುವ ಡೊನಾಲ್ಡ್ ಟ್ರಂಪ್ ಬಂದ ಪುಟ್ಟ.. ಹೋದ ಪುಟ್ಟ ಎನ್ನುವಂತೆ ತನ್ನ ಸ್ವಂತ ಲಾಭಕ್ಕೆ ಏನೇನು ಬೇಕು ಅದನ್ನು ಮಾತ್ರ ಮಾಡಿಕೊಂಡು ವಾಪಸ್ ಹೋಗ್ತಾರಾ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಸಂಬಂಧದ ಬಗ್ಗೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದಿದ್ದಾರೆ.
ಮೋದಿ ತವರೂರು ಗುಜರಾತ್ ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಕ್ಕಾಗಿ ಬರೋಬ್ಬರಿ 85 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಉದ್ಘಾಟನೆ ಮಾಡಲು ವೇದಿಕೆ ಸಜ್ಜಾಗಿದೆ. 1 ಲಕ್ಷದ 10 ಸಾವಿರ ಜನರು ಸೇರಬಹುದಾದ ಸ್ಟೇಡಿಯಂನಲ್ಲಿ ನಮಸ್ತೇ ಟ್ರಂಪ್ ಕಾರ್ಯಕ್ರಮ ನಡೆಯಲಿದೆ. ಆದರೆ ಭಾರತ, ಅಮೆರಿಕ ನಡುವಣ ಯಾವೆಲ್ಲಾ ವಿಚಾರಗಳು ಚರ್ಚೆ ಆಗಲಿದೆ ಎನ್ನುವುದು ಮಾತ್ರ ಇಲ್ಲೀವರೆಗೂ ಬಹಿರಂಗವಾಗಿಲ್ಲ. ಡೊನಾಲ್ಡ್ ಟ್ರಂಪ್ ಜೊತೆ ಹಿರಿಯ ಅಧಿಕಾರಿಗಳ ತಂಡ ಕೂಡ ಆಗಮಿಸಲಿದ್ದು, ಎರಡೂ ದೇಶಗಳ ನಡುವೆ ಸ್ನೇಹ ವೃದ್ಧಿ ಹಾಗು ವ್ಯವಹಾರದ ಬಗ್ಗೆ ಮಹತ್ವದ ಮಾತುಗಳು ನಡೆಯಲಿವೆ ಎನ್ನಲಾಗಿದೆ. ಯಾವೆಲ್ಲಾ ಕಾರ್ಯಕ್ರಮಗಳು ಚರ್ಚೆಯ ಭಾಗವಾಗಲಿವೆ ಎನ್ನುವ ವಿಚಾರವನ್ನು ಗುಪ್ತವಾಗಿ ಇಡಲಾಗಿದೆ.
ಡೊನಾಲ್ಡ್ ಟ್ರಂಪ್ ರೀತಿ 2006ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾಜ್ ಡಬ್ಲ್ಯೂ ಬುಷ್ ಭಾರತಕ್ಕೆ ಬಂದಿದ್ದರು. ಮನೋಹನ್ ಸಿಂಗ್ ಪ್ರಧಾನಿ ಆಗಿದ್ದರು. ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರಪತಿ ಆಗಿದ್ದರು. ಆ ವೇಳೆ ಇಷ್ಟೊಂದು ಅಬ್ಬರ ಇಲ್ಲದಿದ್ದರು ಭಾರತೀಯ ಸೇನೆ ಸದೃಢವಾಗಲು ಬೇಕಾದ ನಾಗರಿಕ ಪರಮಾಣು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈ ಬಾರಿ ಡೊನಾಲ್ಡ್ ಟ್ರಂಪ್, ಈಗಾಗಲೇ ವ್ಯಾಪಾರ ವಹಿವಾಟಿನ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುವುದು ಎಂದಿದ್ದಾರೆ. ಅಂದರೆ ಚರ್ಚೆ ವಿಷಯಗಳ ಪಟ್ಟಿಯಲ್ಲಿ ಭಾರತ ಹಾಗು ಅಮೆರಿಕ ನಡುವಿನ ವ್ಯಾಪಾರ ವೃದ್ಧಿ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ ಎನ್ನುವುದು ಸ್ಪಷ್ಟ. ಆದ್ರೆ ಅಚ್ಚರಿಯ ಬೆಳವಣಿಗೆಯಲ್ಲಿ ವ್ಯಾಪಾರ ವ್ಯವಹಾರದ ಬಗ್ಗೆ ಮಹತ್ವದ ಒಪ್ಪಂದ ನಡೆದರೂ ನಡೆಯಬಹುದು ಎನ್ನುವ ಮಾಹಿತಿ ವೈಟ್‌ಹೌಸ್ ಮೂಲದಿಂದ ಹೊರಬಿದ್ದಿದೆ.
ಇಂದಿಗೂ ಅಮೆರಿಕ ಹಾಗು ಭಾರತದ ನಡುವೆ ದೊಡ್ಡ ಸಮಸ್ಯೆ ಎಂದರೆ ಹೆಚ್ 1 ಬಿ ವೀಸಾ ಸಮಸ್ಯೆ. ಟ್ರಂಪ್ ಭಾರತಕ್ಕೆ ಆಗªಮಿಅಸುತ್ತಿರುವ ಈ ಸಮಯದಲ್ಲಿ ನರೇಂದ್ರ ಮೋದಿ ಪ್ರಬಾವ ಬೀರುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಿದರೆ, ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಲು ಅನುಕೂಲ ಆಗಲಿದೆ. ಜೊತೆಗೆ ಹಲವಾರು ಜನರು ಅಮೆರಿಕದಲ್ಲಿ ಉದ್ಯೂಗ ಗಿಟ್ಟಿಸುವ ಬಾಗಿಲು ತೆರೆದಂತಾಗುತ್ತದೆ.
2020ರ ಏಪ್ರಿಲ್ 1ನೂತನ ವೀಸ ನೀತಿ ಜಾರಿ ಮಾಡುವ ಬಗ್ಗೆ ಈ ಹಿಂದೆಯೇ ಟ್ರಂಪ್ ಘೋಷಣೆ ಮಾಡಿದ್ದಾರೆ. ಅದನ್ನು ಭಾರತದಲ್ಲಿ ಮೊದಲ ಬಾರಿಗೆ ಸಹಿ ಮಾಡ್ತಾರಾ ಎನ್ನುವುದನ್ನು ಕಾದು ನೋಡ್ಬೇಕು. ಆದ್ರೆ ಗೋದ್ರಾ ಹತ್ಯಾಕಾಂಡದ ಬಳಿಕ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ಕೊಟ್ಟಿರಲಿಲ್ಲ. ಭಾರತದ ಪ್ರಧಾನಿಯಾದ ಬಳಿಕವಷ್ಟೇ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ಕೊಟ್ಟಿದೆ. ಇದೀಗ ವಿದ್ಯಾರ್ಥಿಗಳು ಹಾಗು ಉದ್ಯೋಗಿಗಳಿಗೆ ಪಾಸ್‌ಪೋರ್ಟ್ ಕೊಡಿಸ್ತಾರಾ ಕಾದು ನೋಡ್ಬೇಕು.