• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ವೈಯಕ್ತಿಕ ಕೋಪಕ್ಕೆ ಹೊಡೆದಾಡಿ ಸಿಎಎ ಪ್ರತಿಭಟನಾಕಾರರು ಮೃತಪಟ್ಟರು : ಯೋಗಿ ಆದಿತ್ಯನಾಥ್

by
February 22, 2020
in ದೇಶ
0
ವೈಯಕ್ತಿಕ ಕೋಪಕ್ಕೆ ಹೊಡೆದಾಡಿ ಸಿಎಎ ಪ್ರತಿಭಟನಾಕಾರರು ಮೃತಪಟ್ಟರು : ಯೋಗಿ ಆದಿತ್ಯನಾಥ್
Share on WhatsAppShare on FacebookShare on Telegram

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಒಂದಲ್ಲ ಒಂದು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ತಮ್ಮನ್ನು ಮುಖ್ಯಮಂತ್ರಿ ಮಾಡಿದವರಿಗೆ ಸದಾ ನಿಷ್ಠೆ ತೋರುತ್ತಲೇ ಇದ್ದಾರೆ. ದೆಹಲಿ ಚುನಾವಣೆ ಕಾವಿನಲ್ಲಿ ಗುಂಡಿನ ಮೊರೆತ ಕೇಳುತ್ತಿದ್ದರೆ, ಜನ ಭಯಭೀತರಾಗಿದ್ದರು. ಆದರೆ ಇಂತಹ ಘಟನೆಗಳಿಂದ ಕಳವಳ ಪಡಬೇಕಿದ್ದ ಆದಿತ್ಯನಾಥ್‌ ಚುನಾವಣಾ ರ್ಯಾಲಿಯಲ್ಲಿ ʻಬೋಲಿ ಸೇ ನಹೀ ಗೋಲಿ ಸೆ ಸಾಮ್ನಾ ಕರ್ನಾ ಪಡೆಗಾʼ ಎಂದು ಪ್ರಚೋದನಾತ್ಮಕವಾದ ಹೇಳಿಕೆಯನ್ನು ನೀಡಿದ್ದರು. ಶಾಹೀನ್‌ ಭಾಗ್‌ ಪ್ರತಿಭಟನಾಕಾರರನ್ನ ತರಾಟೆಗೆ ತೆಗೆದುಕೊಂಡು ಅವರ ಅಸಲಿಯತ್ತು ಸಿಎಎ ವಿರೋಧಿ ಹೋರಾಟ ಅಲ್ಲ, ಕಾಶ್ಮೀರದಲ್ಲಿ ವಿಶೇಷಾಧಿಕಾರ ತೆರವು ಮಾಡಿದ್ದು, ಸುಪ್ರೀಂಕೋರ್ಟ್‌ ರಾಮಜನ್ಮ ಭೂಮಿ ತೀರ್ಪನ್ನ ನಮ್ಮ ಪರವಾಗಿ ನೀಡಿದ್ದು, ನಮ್ಮ ಸರ್ಕಾರ ತ್ರಿವಳಿ ತಲಾಖ್‌ ರದ್ದು ಮಾಡಿರುವುದು ಎಂದು ಹೇಳಿದ್ದರು.

ADVERTISEMENT

ಇಷ್ಟಕ್ಕೂ ಸುಮ್ಮನಾಗದೇ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕಾಶ್ಮೀರ ವಿಶೇಷ ಕಾಯ್ದೆ ರದ್ಧತಿ ವಿರೋಧಿಸಿ ಪಾಕಿಸ್ತಾನದ ಪರ ನಿಂತಿದ್ದಾರೆ ಎಂದು ಬಿಟ್ಟಿದ್ದರು. ಈ ತರಹದ ಹೇಳಿಕೆಗಳು ಸಾಕಷ್ಟು ನೀಡಿದ್ದಾರೆ ಇನ್ನೂ ನೀಡುತ್ತಾ ಇದ್ದಾರೆ. ಈಗ ಬಹಳ ಆಶ್ಚರ್ಯ ಎನ್ನುವ ಹಾಗೆ ತಮ್ಮ ರಾಜ್ಯದಲ್ಲಿ ಸಿಎಎ ವಿರುದ್ದ ನಡೆದ ಪ್ರತಿಭಟನೆಗಳಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ, ಸಾವು ನೋವುಗಳೇ ಸಂಭವಿಸಿಲ್ಲ, ಪೊಲೀಸರು ಮುಗ್ಧರು ಎನ್ನವಂತೆ ಮಾತನಾಡುತ್ತಿದ್ದಾರೆ. ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವವರಿಗೆ ಪುನಃ ಅದೇ ದಾಟಿಯಲ್ಲಿ ಎಚ್ಚರಿಸಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ದಿನದಿಂದ ಇಲ್ಲಿವರೆಗೆ ಉತ್ತರ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಪೊಲೀಸ್‌ ಹಾಗೂ ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ 20ಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಉತ್ತರ ನೀಡಿದ ಸಿಎಂ ಯೋಗಿ ಆದಿತ್ಯಾನಾಥ್‌, ಸಿಎಎ ವಿರೋಧಿ ಪ್ರತಿಭಟನಾಕಾರ ಯಾರೂ ಮೃತರಾಗಿಲ್ಲ ಎಂದು ಹೇಳಿಕೆ ನೀಡಿ ದಿಗಿಲು ಬಡಿಸಿದ್ದಾರೆ. ಹಾಗಾದರೆ ಕಳೆದ ಎರಡು ತಿಂಗಳಲ್ಲಿ ಮೃತಪಟ್ಟಿರುವವರು ಅವರೆಲ್ಲಾ ಯಾರು ಎಂಬುದಕ್ಕೆ ಅವರ ಉತ್ತರ ಇನ್ನೂ ಬಾಲಿಶವಾಗಿದೆ. ಉತ್ತರ ಪ್ರದೇಶದಲ್ಲಿ ಯಾವುದೇ ಸಂಘರ್ಷ ಆಗಿಲ್ಲ, ಸಾಯುತ್ತೇನೆ ಎಂದು ಬಂದವರನ್ನ ಯಾರು ತಡೆಯುತ್ತಾರೆ? ಪೊಲೀಸ್‌ ಗುಂಡೇಟಿಗಂತೂ ಯಾರೂ ಪ್ರಾಣ ಬಿಟ್ಟಿಲ್ಲ, ಉಪದ್ರವಿಗಳು ಅವರೇ ಹೊಡೆದುಕೊಂಡು ಸತ್ತಿದ್ದಾರೆ , ನಮ್ಮ ಪೊಲೀಸರನ್ನ ಟೀಕಿಸುವುದರ ಬದಲು ಎಲ್ಲರೂ ಹೊಗಳಬೇಕಿದೆ ಎಂದರು.

ಯೋಗಿ ಆದಿತ್ಯಾನಾಥ್‌ ಇರೋದೇ ಹೀಗೆ, ತಮ್ಮದೇ ಇಲಾಖೆಯ ಅಧಿಕಾರಿಗಳು ಮಾಧ್ಯಮದ ಮುಂದೆ ಏನು ಹೇಳಿದ್ದಾರೆಂಬುದರ ಪರಿವೆಯೇ ಇಲ್ಲ ಎಂಬಂತೆ ಸಾವು ನೋವುಗಳಿಗೆ ಷರಾ ಬರೆದುಬಿಟ್ಟರು. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಪೊಲೀಸ್‌ ಮಹಾ ನಿರ್ದೇಶಕ ಓ.ಪಿ ಸಿಂಗ್‌ ಇಂಡಿಯಾ ಟುಡೇ ಚಾನೆಲ್‌ಗೆ ಮಾತನಾಡುವಾಗ, ಸುಮಾರು 20 ಜನರು ಸಿಎಎ ವಿರೋಧಿ ಹೋರಾಟದಲ್ಲಿ ಮೃತರಾಗಿದ್ದಾರೆ, ಬಿಜ್ನೋರ್‌, ಕಾನ್‌ಪುರಗಳಲ್ಲಿ ಪೊಲೀಸ್‌ ಫೈರಿಂಗ್‌ ಆಗಿದೆ ಎಂದು ಹೇಳಿದ್ದರು. ಆದರೆ ಇದ್ಯಾವದೂ ತಮ್ಮ ಅರಿವಿಗೆ ಬಂದಿಲ್ಲವೇನೋ ಎಂಬಂತೆ ಮಾತನಾಡುತ್ತಿದ್ದಾರೆ.

ಯೋಗಿ ಆದಿತ್ಯನಾಥ್ ಇಷ್ಟಕ್ಕೇ ಸುಮ್ಮನಾಗಿಲ್ಲ. ವಿಪಕ್ಷಗಳನ್ನ ತರಾಟೆಗೆ ತೆಗೆದುಕೊಂಡು ಸಂವಿಧಾನವನ್ನ ಇಷ್ಟು ವರ್ಷ ಹಾಳುಗೆಡುವಿರುವ ನಿಮ್ಮಿಂದ ಪಾಠ ಕಲಿಯುವುದು ಬೇಕಿಲ್ಲ. ಯಾರಿಗೆ ಯಾವ ತರಹ ಉತ್ತರ ನೀಡಬೇಕೋ ಅದು ನಮಗೆ ಗೊತ್ತಿದೆ ಎಂದು ಸಿಎಎ ವಿರೋಧಿ ಹೋರಾಟಗಾರರಿಗೂ ಎಚ್ಚರಿಸಿದ್ದಾರೆ. ವಾರದ ಹಿಂದೆ ಸಿಎಎ ವಿರೋಧಿ ಹೋರಾಟದಲ್ಲಿ ಆಸ್ತಿ ನಷ್ಟವಾದರೆ ಅದನ್ನ ಹೋರಾಟಗಾರರೇ ಭರಿಸಬೇಕು ಎಂದು ತಾಕೀತು ಮಾಡಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಉತ್ತರ ಪ್ರದೇಶ ಪೊಲೀಸ್‌ ರಾಜ್ಯವಾಗಿ ಹಲವು ದಶಕಗಳೇ ಕಳೆದಿವೆ, ಅಲ್ಲಿ ಕಾನೂನು ಸುವ್ಯವಸ್ಥೆಗೆ ಅರ್ಥವೇ ಇಲ್ಲವಾಗಿ ಹೋಗುವ ಸಂದರ್ಭ ಎದುರಾಗಿದೆ. ಬಿಜೆಪಿಯ ಯೋಗಿ ಆದಿತ್ಯಾನಾಥ್‌ ಇದರ ಮುಂದುವರಿದ ಭಾಗ ಅಷ್ಟೇ! ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಸರ್ಕಾರ ಆರೋಪಿಗಳಿಗೆ ಅಭಯ ನೀಡಿದ್ದು ಕೂಡಾ ಟೀಕೆಗೆ ಗುರಿಯಾಗಿತ್ತು.

Tags: CAA ProtestsUP PoliceYogi Adityanathಯೋಗಿ ಆದಿತ್ಯನಾಥ್ಸಿಎಎ
Previous Post

ಅಳಿವಿನಂಚಿನಲ್ಲಿರುವ ಅಪರೂಪದ ರಣಹದ್ದುಗಳು ಬಂದವು ವಾಪಸ್!

Next Post

ಕನ್ನಡಿಗರ ನೆಮ್ಮದಿ ಹಾಳು ಮಾಡಲು ಮನೆಹಾಳು ಯೋಜನೆ?

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ಕನ್ನಡಿಗರ ನೆಮ್ಮದಿ ಹಾಳು ಮಾಡಲು ಮನೆಹಾಳು ಯೋಜನೆ?

ಕನ್ನಡಿಗರ ನೆಮ್ಮದಿ ಹಾಳು ಮಾಡಲು ಮನೆಹಾಳು ಯೋಜನೆ?

Please login to join discussion

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’
Top Story

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada