ದೆಹಲಿ ವಿಧಾನಸಭಾ ಸೋಲಿನ ಬಳಿಕ ಮೊದಲ ಬಾರಿ ಬಿಜೆಪಿ ಉತ್ತರ ಕೊಟ್ಟಿದೆ. ಸೋಲಿನ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ದೆಹಲಿ ಸೋಲಿಗೆ ಬಿಜೆಪಿ ನಾಯಕರುಗಳು ನೀಡಿದ ವಿವಾದಿತ ಹೇಳಿಕೆಗಳೇ ಕಾರಣ ಎಂದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗು ಎನ್ಆರ್ಸಿ ಬಗ್ಗೆ ಬಿಜೆಪಿ ಪಕ್ಷದ ನಾಯಕರು ಗೋಲಿಮಾರೋ, ಇಂಡೋ ಪಾಕ್ ಮ್ಯಾಚ್ ಎಂಬ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಪಶ್ಚತ್ತಾಪ ವ್ಯಕ್ತಪಡಿಸಿದ್ದಾರೆ. ನಾಯಕರ ಹೇಳಿಕೆಗಳಿಂದ ಪಕ್ಷ ಅಂತರ ಕಾಯ್ದುಕೊಂಡಿತ್ತು. ಆದರೂ ಆ ರೀತಿಯ ಹೇಳಿಕೆಗಳನ್ನು ಕೊಡಬಾರದು. ಆ ಹೇಳಿಕೆಗಳೇ ನಮಗೆ ಮುಳುವಾದವು ಎಂದಿದ್ದಾರೆ. ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳಿಗೆ ಗುಂಡು ಹಾರಿಸಬೇಕು ಎಂದಿದ್ದರು. ಆ ಬಳಿಕ ಫೈರಿಂಗ್ ಕೂಡ ನಡೆದಿತ್ತು. ಮತ್ತೋರ್ವ ಬಿಜೆಪಿ ನಾಯಕ ಕಪಿಲ್ ಮಿಶ್ರಾ ದೆಹಲಿ ಚುನಾವಣೆಯನ್ನು ಇಂಡೋ ಪಾಕ್ ಯುದ್ಧಕ್ಕೆ ಹೋಲಿಕೆ ಮಾಡಿದ್ದೂ ವಿವಾದ ಸ್ವರೂಪ ಪಡೆದಿತ್ತು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಈ ರೀತಿಯ ಹೇಳಿಕೆಗಳನ್ನು ನೀಡಬಾರದಿತ್ತು ಎಂದಿದ್ದಾರೆ. ಆದರೆ ಕರ್ನಾಟಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ, ಮತ್ತೊಂದು ವಿವಾದ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ದೇಶದ್ರೋಹಿ ಕೆಲಸ ಮಾಡುವ ಸಿನಿಮಾ ಹೀರೋಗಳ ಚಿತ್ರಗಳನ್ನು ನೋಡಬೇಡಿ. ನಟ ಅಕ್ಷಯ್‌ಕುಮಾರ್ ಅವರಂಥ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಈ ರೀತಿಯ ಹೇಳಿಕೆಗಳನ್ನು ನೀಡಬಾರದಿತ್ತು ಎಂದಿದ್ದಾರೆ. ಆದರೆ ಕರ್ನಾಟಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ, ಮತ್ತೊಂದು ವಿವಾದ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ದೇಶದ್ರೋಹಿ ಕೆಲಸ ಮಾಡುವ ಸಿನಿಮಾ ಹೀರೋಗಳ ಚಿತ್ರಗಳನ್ನು ನೋಡಬೇಡಿ. ನಟ ಅಕ್ಷಯ್‌ಕುಮಾರ್ ಅವರಂಥ ದೇಶಭಕ್ತರ ಸಿನಿಮಾಗಳ ನೋಡಿ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ವಿಜಯಪುರದಲ್ಲಿ ಅಪ್ಸರಾ ಟಾಕೀಸ್ ಬಳಿ ‘ತಾನಾಜಿ ಸಿನಿಮಾ’ ವೀಕ್ಷಣೆಗೂ ಮುನ್ನ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಕೆಲವು ಜನ ದೇಶದ ಅನ್ನ ತಿಂದು ಪಾಕಿಸ್ತಾನವನ್ನು ಹೊಗಳುವ ಖಳನಾಯಕರಿದ್ದಾರೆ. ಸಲ್ಮಾನ್ ಖಾನ್, ಶಾರುಕ್‌ಖಾನ್, ಅಮೀರ್ ಖಾನ್ ಅವರಂಥವರು ದೇಶದ ಅನ್ನ ತಿಂದು ಪಾಕಿಸ್ತಾನಕ್ಕೆ ಸಹಾಯ ಮಾಡ್ತಾರೆ ಎಂದು ಟೀಕಿಸಿದರು. ಅಲ್ಲಿ ಭೂಕಂಪವಾದರೆ ಪರಿಹಾರ ಕೊಡ್ತಾರೆ. ನಮ್ಮ ದೇಶದಲ್ಲಿ ಭೂಕಂಪವಾದರೆ ಪರಿಹಾರ ನೀಡುವುದಿಲ್ಲ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಬೆಂಬಲಿಸಿದ್ದ ನಟಿ ದೀಪಿಕಾ ಪಡುಕೋಣೆ ವಿರುದ್ಧವೂ ಕಿಡಿಕಾರಿದ್ದಾರೆ.
ಮುಗು ಚಿವುಟಿ ಅಳಿಸುವುದು, ಲಾಲಿ ಆಡಿಸಿ ಮಲಗಿಸುವುದು..!
ಬಿಜೆಪಿ ನಾಯಕರ ಮಾತುಗಳು ಈ ಗಾದೆಗೆ ಹೊಂದಿಕೊಳ್ಳುವ ಹೇಳಿಕೆಗಳಾಗಿವೆ. ಒಂದು ಕಡೆ ಕೇಂದ್ರ ಗೃಹ ಸಚಿವರೇ ವಿವಾದಿತ ಹೇಳಿಕೆಗಳಿಂದ ಬಿಜೆಪಿ ದೆಹಲಿಯಲ್ಲಿ ಸೋಲಬೇಕಾಯ್ತು ಎನ್ನುತ್ತಾರೆ. ಅದರ ಜೊತೆ ಜೊತೆಯಲ್ಲೇ ಕರ್ನಾಟಕ ಬಿಜೆಪಿ ಶಾಸಕ ಸಿನಿಮಾ ಮಾಯಕರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ದ್ವೇಶ ಸೃಷ್ಟಿಸುವ ವಿವಾದಿತ ಹೇಳಿಕೆ ಕೊಡ್ತಾರೆ. ಇದಕ್ಕೆ ಕಾರಣ ಕೇಂದ್ರ ಗೃಹ ಸಚಿವರ ದ್ವಂಧ್ವ ನಿಲುವು. ನಾವು ಸೋತಿದ್ದೇವೆ ಎನ್ನುವ ಜೊತೆಗೆ ದೆಹಲಿಯಲ್ಲಿ ನಾವು ಸಾಧಿಸಿದ್ದೇವೆ ಎಂದು ಸ್ವತಃ ಅಮಿತ್ ಷಾ ಹೇಳಿಕೆ ಕೊಟ್ಟಿದ್ದಾರೆ. ಜನರು ಯಾಕೆ ಒಂದು ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಅಷ್ಟು ಸುಲಭವಾಗಿ ಹೇಳುವುದು ಅಸಾಧ್ಯ. ಕೇವಲ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ನಮಗೆ ಮುಖ್ಯವಲ್ಲ. ಚುನಾವಣೆ ಮೂಲಕ ನಮ್ಮ ಪಕ್ಷದ ಸಿದ್ಧಾಂತವನ್ನು ವಿಸ್ತರಣೆ ಮಾಡುತ್ತೇವೆ ಎನ್ನುವ ಮೂಲಕ ಹಿಂದುತ್ವ ಅಜೆಂಡಾ ವಿಸ್ತರಣೆ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರು ಪದೇ ಪದೇ ಧರ್ಮದ ಆಧಾರದಲ್ಲಿ ವಿವಾದ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎನಿಸುತ್ತದೆ. ಸೋತರೂ ಪರವಾಗಿಲ್ಲ, ಹಿಂದೂ ಮುಸಲ್ಮಾನ್ ಎಂಬ ಪ್ರತ್ಯೇಕ ಮಾಡುವ ಕೆಲಸ ನಡೆಯುತ್ತಿದ್ಯಾ ಎಂದೆನಿಸುವ ಭಾವನೆ ದೇಶದ ಜನರಲ್ಲಿ ಮೂಡುವಂತಾಗಿದೆ.
ಕರ್ನಾಟಕ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಏಕಪಕ್ಷೀಯವಾಗಿದ್ದು, ಹೈಕೋರ್ಟ್ ಕೂಡ ಛಾಟಿ ಬೀಸಿದಿದೆ. ಕಳೆದ ಜನವರಿ 19ರಂದು ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ತಡೆಯುವ ಕೆಲಸ ಮಾಡಿತ್ತು. ಆದರೆ ರಾಜ್ಯ ಸರ್ಕಾರದ ಈ ಕ್ರಮ ತಪ್ಪು ಎಂದು ಹೈಕೋರ್ಟ್ ವಿಭಾಗಿಯ ಪೀಠ ತಿಳಿಸಿದೆ. ಸರ್ಕಾರ ಈ ನಿರ್ಧಾರ ಅಕ್ರಮ ಹಾಗೂ ಕಾನೂನು ಬಾಹಿರ ಎಂದು ಸ್ಪಷ್ಟ ಅಭಿಪ್ರಾಯ ತಿಳಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಹಾಗು ನ್ಯಾಯಮೂರ್ತಿ ಹೇಮಂತ ಚಂದನಗೌಡರ ವಿಭಾಗೀಯ ನ್ಯಾಯಪೀಠ ಮಹತ್ವದ ಆದೇಶ ಹೊರಡಿಸಿದ್ದಾರೆ. ಆದರೆ ನಿಷೇಧಾಜ್ಞೆ ನಡುವೆಯೂ ಹೋರಾಟ ನಡೆಸಲು ಮುಂದಾಗಿ ಪೊಲೀಸರ ಗುಂಡೇಟಿಗೆ ಬಲಿಯಾದ ಬಳಿಕ ಸರ್ಕಾರದ ನಿರ್ಧಾರ ತಪ್ಪು ಎನ್ನುವುದು ಗೊತ್ತಾದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಒಟ್ಟಾರೆ, ತಾವು ಮಾಡುತ್ತಿರುವುದು ತಪ್ಪು ಎನ್ನುವುದು ಗೊತ್ತಿದ್ದರೂ ಮಾಡುವುದು, ಆ ಬಳಿಕ ತಪ್ಪಿನಲ್ಲೂ ಲಾಭದ ಲೆಕ್ಕಾಚಾರ ಹಾಕುವ ಪ್ರವೃತ್ತಿ ಬಿಜೆಪಿ ಪಾಲಿಗೆ ಕರಗತವಾಗಿದೆಯಾ..? ಎನ್ನುವ ಪ್ರಶ್ನೆ ಹುಟ್ಟಿಸುತ್ತಿದೆ.