• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

CAA ಪ್ರತಿಭಟನೆಯಲ್ಲಿ ಅಶಾಂತಿ ಸೃಷ್ಟಿಸಲು ಉ.ಪ್ರ. ಪೊಲೀಸರ ಕುಮ್ಮಕ್ಕು?

by
February 4, 2020
in ದೇಶ
0
CAA ಪ್ರತಿಭಟನೆಯಲ್ಲಿ ಅಶಾಂತಿ ಸೃಷ್ಟಿಸಲು ಉ.ಪ್ರ. ಪೊಲೀಸರ ಕುಮ್ಮಕ್ಕು?
Share on WhatsAppShare on FacebookShare on Telegram

ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗಳು ನಡೆದಾಗ ಉಂಟಾದ ಹಿಂಸಾಚಾರವನ್ನು ರಾಜಕೀಯ ಪಕ್ಷಗಳೇ ಸೃಷ್ಟಿಸಿದ್ದವು ಎಂಬ ಆರೋಪ ಕೇಳಿ ಬಂದಿದೆ. ಹಿಂಸಾಚಾರಕ್ಕೆ ಕಾರಣವಾದ ವ್ಯಕ್ತಿಗಳು ನಿಜಕ್ಕೂ ಪ್ರತಿಭಟನಕಾರರೇ ಅಲ್ಲ, ವ್ಯವಸ್ಥಿತವಾದ ಷಡ್ಯಂತ್ರವನ್ನು ರಚಿಸಿ ಕೆಲವು ಗೂಂಡಾಗಳು ಪ್ರತಿಭಟನಾಕಾರರ ಸೋಗಿನಲ್ಲಿ ನಡೆಸಿದ ಹಿಂಸಾಚಾರವಿದು, ಎಂದು ಸದಾಫ್‌ ಜಾಫರ್‌ ಎಂಬ ಮಾನವ ಹಕ್ಕು ಹೋರಾಟಗಾರ್ತಿ ಆರೋಪಿಸಿದ್ದಾರೆ.

ADVERTISEMENT

ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಪೊಲೀಸರಿಂದ ಲಾಠೀಯೆಟು ತಿಂದು ಹದಿನೈದು ದಿನಗಳಿಗೂ ಅಧಿಕ ಕಾಲ ವಿನಾಕಾರಣ ಜೈಲು ಪಾಲಾಗಿದ್ದ ಸದಾಫ್‌ ಅವರ ಪ್ರಕಾರ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಉಗ್ರ ರೂಪಕ್ಕೆ ತಿರುಗಿಸಿದವರು ಗೂಂಡಾಗಳೇ ಹೊರತು ಅವರು ನಿಜವಾದ ಪ್ರತಿಭಟನಾಕಾರರಲ್ಲ. ಡಿಸೆಂಬರ್‌ 19ರಂದು ಉತ್ತರ ಪ್ರದೇಶದ ಪರಿವರ್ತನ್‌ ಚೌಕ್‌ನಲ್ಲಿ ನಡೆದ ಪ್ರತಿಭಟನೆ ಶಾಂತಿಯುತವಾಗಿಯೇ ನಡೆದಿತ್ತು. ಪ್ರತಿಭಟನೆ ಆರಂಭವಾದ ಕೆಲ ಸಮಯದ ನಂತರ ಪ್ರತಿಭಟನಾಕಾರರ ಸೋಗಿನಲ್ಲಿ ಒಂದು ಗುಂಪು ಘೋಷಣೆ ಕೂಗಲಾರಂಭಿಸಿತು. ಕಲ್ಲು ತೂರಾಟ ನಡೆಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು ಹಾಗೂ ಪ್ರತಿಭಟನಾ ಸ್ಥಳದಲ್ಲಿ ಸಂದಿಗ್ದ ವಾತಾವರಣ ನಿರ್ಮಾಣವಾಗಲು ಆ ಗುಂಪು ಕಾರಣ ಎಂದು ಸದಾಫ್‌ ಅವರು ಹೇಳಿದ್ದಾರೆ.

“ಪ್ರತಿಭಟನೆ ನಡೆದ ಸ್ಥಳ ಮುಸ್ಲಿಂ ಸಮುದಾಯ ಪ್ರಬಲವಾಗಿರುವ ಪ್ರದೇಶವಾಗಿರಲಿಲ್ಲ. ಅಷ್ಟು ಕಡಿಮೆ ಸಮಯದಲ್ಲಿ ನೂರಕ್ಕೂ ಹೆಚ್ಚು ಮುಸ್ಲಿಂ ಸಮುದಾಯದವರು ಸೇರಿ ಗಲಾಟೆ ಮಾಡಲು ಸಾಧ್ಯವಿರಲಿಲ್ಲ. ಆದರೂ, ಈ ಗೂಂಡಾಗಳ ಗುಂಪು ಸಮವಸ್ತ್ರದಂತೆ ತಲೆಯ ಮೇಲೆ ಟೋಪಿ ಹಾಗೂ ಕುರ್ತಾ ಧರಿಸಿ ಬೆನ್ನಿನ ಮೇಲೆ ಶಾಳು ಹೊದ್ದಿದ್ದರು. ಪೊಲೀಸರು ಲಾಠೀ ಚಾರ್ಜ್‌ ಮಾಡುತ್ತಿದ್ದರೂ, ಸುತ್ತಮುತ್ತಲಿನ ಜನ ಭಯದಿಂದ ಓಡುತ್ತಿದ್ದರೂ, ಈ ವ್ಯಕ್ತಿಗಳು ರಸ್ತೆಯ ಮಧ್ಯದಲ್ಲಿ ನಮಾಜ್‌ ಮಾಡಲು ಆರಂಭಿಸಿದರು. ಆದರೆ, ಅದು ನಮಾಜ್‌ನ ಸಮಯವೇ ಆಗಿರಲಿಲ್ಲ. ಇವೆಲ್ಲಾ ನೋಡಿದರೆ, ಉದ್ದೇಶ ಪೂರ್ವಕವಾಗಿಯೇ ಪ್ರತಿಭಟನೆಯನ್ನು ಚದುರಿಸಲು ಹಿಂಸೆಯನ್ನು ಸೃಷ್ಟಿಸಲಾಗಿತ್ತು ಹಾಗೂ ಹಿಂಸೆಗೆ ಮುಸ್ಲಿಮರೇ ಕಾರಣ ಎಂಬ ರೀತಿ ಬಿಂಬಿಸಲು ಪ್ರಯತ್ನವನ್ನೂ ನಡೆಸಲಾಗಿತ್ತು,” ಎನ್ನುತ್ತಾರೆ ಸದಾಫ್ ಜಾಫರ್.‌

ಪೊಲೀಸರು ಕೂಡ ಗಲಭೆ ಹುಟ್ಟುಹಾಕುತ್ತಿದ್ದ ವ್ಯಕ್ತಿಗಳನ್ನು ಬಂಧೀಸದೇ, ಅಮಾಯಕರ ಮೇಲೆ ಲಾಠೀ ಪ್ರಹಾರ ನಡೆಸಿದ್ದರು. ಈ ಕುರಿತಾಗಿ ಪೊಲೀಸರ ಬಳಿ ಸದಾಫ್‌ ಹೇಳಿದರೂ, ಅವರ ಮಾತಿಗೆ ಪೊಲೀಸರು ಸೊಪ್ಪು ಹಾಕಲಿಲ್ಲ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರಲ್ಲಿ ಕೆಲವರು, ನಕಲಿ ಪ್ರತಿಭಟನಾಕಾರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೂ, ಅವರ ವಿರುದ್ದ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿರಲಿಲ್ಲ. ಬದಲಾಗಿ, ಅಮಾಯಕರನ್ನು ಹಿಡಿದು ಬಂದು ನಮಗೆ ಒಪ್ಪಿಸುತ್ತಿದ್ದೀರಿ ಎಂದು ಆರೋಪಿಸಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠೀ ಚಾರ್ಜ್‌ ನಡೆಸಿದ ಅಮಾನವೀಯ ಘಟನೆಯೂ ಅಂದು ನಡೆದಿತ್ತು. ಇಲ್ಲಿ ಸ್ಪಷ್ಟವಾಗುವುದೇನೆಂದರೆ, ಗಲಭೆಯನ್ನು ಸೃಷ್ಟಿಸುವ ಷಡ್ಯಂತ್ರದಲ್ಲಿ ಪೊಲೀಸರ ಪಾತ್ರ ಕೂಡಾ ಮಹತ್ವದ್ದಾಗಿತ್ತು.

ಅದೇ ದಿನ, ಹಲವು ಹಿಂದೂ ಮೂಲಭೂತವಾದಿಗಳನ್ನು ಹಿಂಸೆ ಸೃಷ್ಟಿಸಿದ ಕಾರಣಕ್ಕಾಗಿ ಬಂಧಿಸಲಾಗಿತ್ತು ಆದರೆ, ಅವರ ವಿರುದ್ದ FIR ಕೂಡಾ ದಾಖಲಿಸದೇ, ಮರುದಿನವೇ ಬಿಡುಗಡೆ ಮಾಡಲಾಗಿತ್ತು ಎಂದು ಎಂದು ಉತ್ತರ ಪ್ರದೇಶ ಪೊಲೀಸ್‌ನ ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕರಾದ ಎಸ್‌ ಆರ್‌ ದರಾಪುರಿ ಹೇಳಿದ್ದಾರೆ.

ಇವನ್ನೆಲ್ಲಾ ನೋಡುತ್ತಿದ್ದರೆ, CAA ವಿರುದ್ದದ ಪ್ರತಿಭಟನೆಗಳನ್ನು ಹತ್ತಿಕ್ಕಲು ಹಿಂಸೆಯನ್ನು ಸೃಷ್ಟಿಸಿ, ಪ್ರತಿಭಟನಾಕಾರರನ್ನು ಹಿಂಸೆಗೆ ಕಾರಣಕರ್ತರನ್ನಾಗಿಸುವ ದುರುದ್ದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿತ್ತು ಎಂಬುದು ಸ್ಪಷ್ಟವಾಗುತ್ತದೆ. ಇನ್ನು ಪೊಲೀಸ್‌ ಇಲಾಖೆ ಕೂಡಾ ಬಿಜೆಪಿ ಸರ್ಕಾರದ ಅಜೆಂಡಾವನ್ನು ಜಾರಿಗೆ ತರಲು ಬೆಂಬಲ ನೀಡುತ್ತಿದೆ. ಪ್ರತಿಭಟನಾಕಾರರ ಮನವೊಲಿಸಲು ಸಾಧ್ಯವಾಗದಿರುವ ಸಂಧರ್ಭದಲ್ಲಿ ಇಂತಹ ಹೇಯ ಕೃತ್ಯಗಳಿಂದ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ.

Tags: CAAಅಶಾಂತಿಉ.ಪ್ರ.ಉ.ಪ್ರ. ಪೊಲೀಸ
Previous Post

ಅನಂತ್ ಕುಮಾರ್ ಹೆಗಡೆ ವಿಚಾರದಲ್ಲಿ ಬಿಜೆಪಿ ಬೃಹನ್‌ ನಾಟಕ!

Next Post

ಸೆಗಣಿ ಮತ್ತು ಗೋಮೂತ್ರದಿಂದ ಕೊರೋನಾ ತಡೆಗಟ್ಟಲು ಸಾಧ್ಯ- ಹಿಂದೂ ಮಹಾಸಭಾ ನಾಯಕ

Related Posts

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!
Top Story

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

by ಪ್ರತಿಧ್ವನಿ
May 25, 2026
0

ಚೆನೈ : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಬಳಿಕ ನೂತನವಾಗಿ ಅಧಿಕಾರಕ್ಕೆ...

Read moreDetails
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
Next Post
ಸೆಗಣಿ ಮತ್ತು ಗೋಮೂತ್ರದಿಂದ ಕೊರೋನಾ ತಡೆಗಟ್ಟಲು ಸಾಧ್ಯ- ಹಿಂದೂ ಮಹಾಸಭಾ ನಾಯಕ

ಸೆಗಣಿ ಮತ್ತು ಗೋಮೂತ್ರದಿಂದ ಕೊರೋನಾ ತಡೆಗಟ್ಟಲು ಸಾಧ್ಯ- ಹಿಂದೂ ಮಹಾಸಭಾ ನಾಯಕ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada