• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

IBM ಮುಖ್ಯಸ್ಥರಾಗಿ ಭಾರತೀಯನ ನೇಮಕ: ಒಂದಷ್ಟು ಖುಷಿ, ಒಂದಷ್ಟು ಹೆಮ್ಮೆ… 

by
February 2, 2020
in ದೇಶ
0
IBM ಮುಖ್ಯಸ್ಥರಾಗಿ ಭಾರತೀಯನ ನೇಮಕ: ಒಂದಷ್ಟು ಖುಷಿ
Share on WhatsAppShare on FacebookShare on Telegram

ಜಗತ್ತಿನ ಅತ್ಯಗ್ರ tech giantಗಳಲ್ಲಿ ಒಂದಾಗಿರುವ ಆಗಿರುವ IBMನ ಮುಖ್ಯಸ್ಥರಾಗಿ ಭಾರತೀಯ ಅರವಿಂದ್‌ ಕೃಷ್ಣ ಆಯ್ಕೆಯಾಗಿರುವ ಸುದ್ದಿ ಅದಾಗಲೇ ವೈರಲ್ ಆಗಿದೆ. Data centric ಜಗತ್ತಿನ ಕೇಂದ್ರ ಬಿಂದುಗಳಾದ ಈ ಐಟಿ ಕಂಪನಿಗಳಲ್ಲಿ ಭಾರತೀಯರ ಸಾಧನೆಗಳ ಬಗ್ಗೆ ದೇಶದ ಒಂದು ವರ್ಗ ಹೆಮ್ಮೆ ಪಡುತ್ತಿದ್ದರೆ, ಮತ್ತೊಂದೆಡೆ ಎಂತೆಂಥಾ ಟಾಪ್ ತಲೆಗಳನ್ನೆಲ್ಲಾ ಉಳಿಸಿಕೊಳ್ಳಲು ಒಂದು ವ್ಯವಸ್ಥೆಯಾಗಿ ನಾವೆಲ್ಲಾ ಯಾವ ಮಟ್ಟಿಗೆ ವಿಫಲರಾಗಿಬಿಟ್ಟಿದ್ದೇವೆ ಎಂಬ ನೋವೂ ಸಹ ನಮ್ಮನ್ನು ಒಳಗೊಳಗೇ ಕಾಡುತ್ತಿದೆ ಎನ್ನುವುದಂತೂ ಅಷ್ಟೇ ಸತ್ಯ.

ADVERTISEMENT

ಕಂಪ್ಯೂಟಿಂಗ್‌ ಕ್ಷೇತ್ರದ ಮೊದಲಿಗರಲ್ಲಿ ಒಂದು ಎಂಬ ಹೆಗ್ಗಳಿಕೆ ಇರುವ ಕಂಪನಿಯಾದ IBMನ ಮುಖ್ಯಸ್ಥರಾಗಿ ನೇಮಕಾವಾಗಿರುವ ಅರವಿಂದ್‌, ಸಂಸ್ಥೆಯ ಸದ್ಯದ ನಿಇಓ ವರ್ಜಿನಿಯಾ ರೊಮೆಟ್ಟಿ ಏಪ್ರಿಲ್ 6ರಂದ ಹುದ್ದೆ ತ್ಯಜಿಸಲಿದ್ದು, ತೆರವಾದ ಸ್ಥಾನವನ್ನು ಭರಿಸಲಿದ್ದಾರೆ.

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಗೆ ಸೇರಿದವರಾದ ನಿವೃತ್ತ ಸೇನಾಧಿಕಾರಿ ವಿನೋದ್ ಕೃಷ್ಣ ಪುತ್ರರಾದ ಅರವಿಂದ್‌ ಕೃಷ್ಣ, ಕಾನ್ಪುರ ಐಐಟಿಯಲ್ಲಿ ಇಂಜಿನಿಯರಿಂಗ್‌ ಪದವಿ ಮುಗಿಸಿರುವ ಅರವಿಂದ್‌ ಅಮೆರಿಕದ ಇಲೆನೋಯ್ ವಿವಿಯಲ್ಲಿ ಪಿಎಚ್‌ಡಿ ಮಾಡಿದ್ದಾರೆ. 1990ರಿಂದಲೂ IBMನಲ್ಲಿ ಕೆಲಸ ಮಾಡುತ್ತಿರುವ ಕೃಷ್ಣ ಸದ್ಯ ಸಂಸ್ಥೆಯ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಸಾಫ್ಟ್‌ವೇರ್‌ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಸಶೋಧನೆ & ಅಭಿವೃದ್ಧಿಯಲ್ಲಿ ಅಪಾರವಾದ ಅನುಭವ ಹೊಂದಿರುವ ಅರವಿಂದ್‌ ಕೃಷ್ಣ ಅನೇಕ ಹೊಸತುಗಳನ್ನು ತಂತ್ರಜ್ಞಾನ ಜಗತ್ತಿಗೆ ಪರಿಚಯಿಸಿದ್ದು, ಅವರ ಹೆಸರಿನಲ್ಲಿ 15 ಪೇಟೆಂಟ್‌ಗಳಿವೆ!

ಮೈಕ್ರೋಸಾಫ್ಟ್‌ನ ಸತ್ಯ ನಡೆಲ್ಲ, ಆಲ್ಫಬೆಟ್‌/ಗೂಗಲ್‌ನ ಸುಂದರ್‌ ಪಿಚ್ಚಾಯ್‌, ಅಡೋಬ್‌ನ ಶಂತನು ನಾರಾಯಣ್, ಮೈಕ್ರಾನ್‌ ಟೆಕ್ನಾಲಜಿಯ ಸಂಜಯ್‌ ಮೆಹ್ರೋತ್ರಾ, ಪಾಲಾ ಆಲ್ಟೋದ ನಿಕೇಶ್ ಅರೋರಾ ಹಾಗೂ NetAppನ ಜಾರ್ಜ್ ಕುರಿಯನ್‌ ಈ ಪಟ್ಟಿಯಲ್ಲಿರುವ ಇತರ ಘಟಾನುಘಟಿಗಳಾಗಿದ್ದಾರೆ. ಇವರೆಲ್ಲಾ ಮುನ್ನಡೆಸುತಿರುವ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯವು $2.7 ಲಕ್ಷ ಕೋಟಿಗಳಷ್ಟಿದೆ.

2001ರ ವೇಳಗೆ $107 ಶತಕೋಟಿಯಷ್ಟು ಮಾರುಕಟ್ಟೆ ಮೌಲ್ಯವಿದ್ದ IBM, ಕಳೆದ ಎಂಟು ವರ್ಷಗಳಲ್ಲಿ ಇಳಿಮುಖದ ಹಾದಿಯಲ್ಲಿ ಸಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊಂಚ ಚೇತರಿಕೆ ಕಂಡಿರುವ ಸಂಸ್ಥೆಗೆ, ಅರವಿಂದ್ ಹೊಸ ಚೇತರಿಕೆ ನೀಡುವರು ಎನ್ನುವ ಭರವಸೆ ಇಡಲಾಗಿದೆ. ಕಳೆದೊಂದು ದಶಕದಿಂದ ಕಳೆಗುಂದಿದ್ದ ಮೈಕ್ರೋಸಾಫ್ಟ್‌ಗೆ, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಒಂದಾನೊಂದು ಕಾಲದಲ್ಲಿ ಕಾಂಪಿಟೇಟರ್‌ಗಳಾಗಿದ್ದ ಸಂಸ್ಥೆಗಳೊಂದಿಗೆ ಚತುರ ಹೆಜ್ಜೆಗಳನ್ನು ಇಟ್ಟು ಪಾಲುದಾರಿಕೆಗಳನ್ನು ಬೆಳೆಸುವ ಮೂಲಕ ಹೊಸ ಚೈತನ್ಯ ತುಂಬಿದ ಸತ್ಯ ನಡೆಲ್ಲಾ ಹಾದಿಯಲ್ಲೇ ಕೃಷ್ಣ ಸಹ IBMಗೆ ಹೊಸ ದಿಕ್ಕು ತೋರಬಹುದು ಎಂಬ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಈ ಮಹಾನ್ ಪ್ರತಿಭಾವಂತರು ಹಾಗೂ high qualified ಸಂಪನ್ಮೂಲ ವ್ಯಕ್ತಿಗಳನ್ನು ನಮ್ಮಲ್ಲೇ ಉಳಿಸಿಕೊಂಡು ಹೋಗಲು ಬೇಕಾದ ವಾತಾವರಣವನ್ನು ಸೃಷ್ಟಿಸಲು ವಿಫಲವಾದ ಕಾರಣ ನಾವಿಲ್ಲಿ ಕುಳಿತು ಕೈ ಕೈ ಹೊಸಕಿಕೊಳ್ಳುವಂತಾಗಿದೆ. ದೇಶದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ಷೇತ್ರಕ್ಕೆ ಹೊಸ ಹುರುಪು ನೀಡಲೆಂದು 1950ರ ದಶಕದಲ್ಲಿ ಪ್ರಾರಂಭಿಸಲಾದ highly esteemed ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ IITಗಳು ಮಹಾನ್ ಮೇಧಾವಿಗಳನ್ನೇನೋ ತಯಾರು ಮಾಡುತ್ತಿವೆ ಸರಿ. ಆದರೆ ಇಂಥ ಅಪ್ರತಿಮ ತಲೆಗಳನ್ನು ಬಳಕೆ ಮಾಡಿಕೊಳ್ಳಲು, ಅವುಗಳ potentialಅನ್ನು ಹೀರಿಕೊಳ್ಳಲು ಅತ್ಯಗತ್ಯವಾದ ವೈಜ್ಞಾನಿಕ & ತಾಂತ್ರಿಕ ವಾತಾವರಣವೇ ಇಲ್ಲದ ಕಾರಣ, ಪ್ರತಿಭಾ ಪಲಾಯನವೆಂಬ ದೊಡ್ಡ ಶಾಪಕ್ಕೆ ಭಾರತ ತುತ್ತಾಗುತ್ತಲೇ ಬಂದಿದೆ.

ಇತರ ದೇಶಗಳ ಅನಿವಾಸಿಗಳಿಂದಲೇ ತುಂಬಿಕೊಂಡಿರುವ ಅಮೆರಿಕದ ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿ ಇಸ್ರೇಲಿಗಳು, ಚೀನೀಯರನ್ನು ಬಿಟ್ಟರೆ ಅತ್ಯಂತ ಹೆಚ್ಚು ಪ್ರಭಾವ ಹೊಂದಿರುವವರೇ ಭಾರತೀಯರು. ಅಲ್ಲಿ ಬೇಕಾದಷ್ಟು ದುಡ್ಡಿದೆ, ಸಾಗರದಷ್ಟು ಅವಕಾಶಗಳಿವೆ, ಮುಕ್ತ ಮಾರುಕಟ್ಟೆಯೆಂಬ ಕಾಂಪಿಟೇಟಿವ್‌ ವಾತಾವರಣವೂ ಇದೆ. ತಾಕತ್ತು, ಯೋಗ್ಯತೆ, ಅರ್ಹತೆಗಳಿದ್ದವು ಎಷ್ಟು ದೂರ ಬೇಕಾದರೂ ಕ್ರಮಿಸಬಹುದು, ಎಷ್ಟು ಎತ್ತರವನ್ನಾದರೂ ಏರಬಹುದು.

ಬಡತನ, ನಿರುದ್ಯೋಗ, ಜನಸಂಖ್ಯಾ ಸ್ಫೋಟಗಳಂಥ ಸಾಮಾಜಿಕ ಸಮಸ್ಯೆಗಳೆಂಬ ಟೈಂ ಬಾಂಬ್‌ಅನ್ನು ತನ್ನ ಒಡಲಲ್ಲಿ ಕಟ್ಟಿಕೊಂಡೇ ಭವಿಷ್ಯದತ್ತ ದಿಕ್ಸೂಚಿಯೇ ಇಲ್ಲದೇ ಸಾಗಿ ಬರುತ್ತಿರುವ ಭಾರತದಂಥ ಅಭಿವೃದ್ಧಿಶೀಲ ದೇಶವೊಂದಕ್ಕೆ, ಕಾಯಕಲ್ಪ ನೀಡುವುದು ಬಹಳ ದುಸ್ತರದ ಕೆಲಸವೇ ಸರಿ. ಭಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರಶಾಹಿ ಮೂಗುತೂರಿಸುವಿಕೆ, ಎಲ್ಲ ವ್ಯವಹಾರಗಳಲ್ಲೂ ಸರ್ಕಾರದ ಅಡ್ಡಗಾಲುಗಳು…. ಇಂಥ ಕ್ಯಾನ್ಸರ್‌ ಗಡ್ಡೆಗಳ ಪರಿಣಾಮ, “A drained brain is better than a wasted brain,” ಎಂಬ ನಿಟ್ಟುಸಿರು ಬಿಡುವ ಪರಿಸ್ಥಿತಿಯಲ್ಲಿ ಇದನ್ನು ಬರೆಯುತ್ತಿರುವ ನಾನು ಹಾಗೂ ಓದುತ್ತಿರುವ ನೀವೂ ಇರಬೇಕಾದ ಪರಿಸ್ಥಿತಿಯಲ್ಲಿ ಇದ್ದೇವೆ.

ನಮ್ಮೆಲ್ಲಾ ಚೈತನ್ಯವನ್ನೂ ಇಂಥ ಸಾಮಾಜಿಕ ಸಮಸ್ಯೆಗಳನ್ನು ಸರಿಪಡಿಸಲೆಂದೇ ವಿನಿಯೋಗ ಮಾಡುತ್ತಿರುವ ವಾಸ್ತವದ ನಡವೆ, ಅಭಿವೃದ್ಧಿ ಹೊಂದಿದೆ ಸೂಪರ್‌ ರಿಚ್‌ ದೇಶಗಳ ಪ್ರಭಾವವನ್ನು ಜಗತ್ತಿನಾದ್ಯಂತ ಪಸರಿಸಲು ಬೆನ್ನೆಲುಬಾಗಿ ಇರುವ R&D ecosystem (ಸಂಶೋಧನೆ & ಅಭಿವೃದ್ಧಿ ವಾತಾವರಣ) ನಮ್ಮಲ್ಲಿ ರೂಪುಗೊಳ್ಳಲು ದಶಕಗಳೇ ಬೇಕಾಗಬಹುದು.

Tags: appointmentArvind Krishnabiggest multinational companiesexecutivesglobal IT giantIndian-originಅತಿದೊಡ್ಡ ಬಹುರಾಷ್ಟ್ರೀಯ ಕಂಪನಿಅಧಿಕಾರಿಗಳುಅರವಿಂದ ಕೃಷ್ಣಜಾಗತಿಕ ಐಟಿ ದಿಗ್ಗಜನೇಮಕಭಾರತೀಯ ಮೂಲ
Previous Post

ಇಂಡಿಗೋ ಸಂಸ್ಥೆಯಿಂದ 25 ಲಕ್ಷ ಪರಿಹಾರ ಕೇಳಿ ನೋಟಿಸ್‌ ನೀಡಿದ ಕುನಾಲ್‌ ಕಮ್ರಾ

Next Post

JMI ನಲ್ಲಿ ವಿದ್ಯಾರ್ಥಿಗಳ ಹಕ್ಕು ಕಿತ್ತುಕೊಂಡ ವಿವಿ

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
JMI ನಲ್ಲಿ ವಿದ್ಯಾರ್ಥಿಗಳ ಹಕ್ಕು ಕಿತ್ತುಕೊಂಡ ವಿವಿ

JMI ನಲ್ಲಿ ವಿದ್ಯಾರ್ಥಿಗಳ ಹಕ್ಕು ಕಿತ್ತುಕೊಂಡ ವಿವಿ

Please login to join discussion

Recent News

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!
Top Story

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

by ಪ್ರತಿಧ್ವನಿ
December 14, 2025
“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

December 14, 2025
“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada