ಪೌರತ್ವ ತಿದ್ದುಪಡಿ ಕಾಯ್ದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದರೂ, ದೇಶದಲ್ಲಿ ಹಲವೆಡೆ ಪ್ರತಿಭಟನೆ ನಡೆಯುತ್ತಲೇ ಇದೆ. ಅದರಲ್ಲೂ ಅಸ್ಸಾಂನಲ್ಲಿ ನಡೆದ ತೀವ್ರ ಹೋರಾಟದಲ್ಲಿ ನಾಲ್ಕು ಜನ ಸಾವನಪ್ಪಿದ್ದಾರೆ. ಇದರ ಜತೆ ಈಶಾನ್ಯ ರಾಜ್ಯಗಳಲ್ಲೂ ಪ್ರತಿಭಟನೆಗಳು ವ್ಯಾಪಕವಾಗಿವೆ. ಭಾನುವಾರ ರಾತ್ರಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ದೆಹಲಿಯ ಪೋಲಿಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ಮಾಡಿರುವುದರ ಜೊತೆಗೆ ಆಶ್ರುವಾಯು ಶೆಲ್ ಕೂಡ ಸಿಡಿಸಿದರು. ಇದರಿಂದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪೋಲಿಸರ ಈ ದೌರ್ಜನ್ಯದಿಂದ ದೇಶಾದ್ಯಂತ ಹಲವೆಡೆ, ‘ಇದಕ್ಕೆಲ್ಲಾ ಗೃಹ ಮಂತ್ರಿಯೇ ಕಾರಣ, ಕೂಡಲೇ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು’ #ResignAmitShah ಎಂಬ ಹ್ಯಾಶ್ ಟ್ಯಾಗ್ ಮೂಲಕ ಟಿಟ್ಟರ್‌ನಲ್ಲಿ 63 ಸಾವಿರಕ್ಕೂ ಹೆಚ್ಚು ಮಂದಿ ಆಗ್ರಹಿಸುತ್ತಿದ್ದಾರೆ.
ರಾಜೀನಾಮೆಗಾಗಿ ಆಗ್ರಹಿಸಿ ಕೆಲವು ಟ್ಟೀಟ್ ಗಳು ಇಲ್ಲಿವೆ.