• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ತಾಮ್ರ ರಫ್ತು ಮಾಡುತ್ತಿದ್ದ ಭಾರತದಲ್ಲೇ ತಾಮ್ರದ ಕೊರತೆ!

by
November 20, 2019
in ದೇಶ
0
ತಾಮ್ರ ರಫ್ತು ಮಾಡುತ್ತಿದ್ದ ಭಾರತದಲ್ಲೇ ತಾಮ್ರದ ಕೊರತೆ!
Share on WhatsAppShare on FacebookShare on Telegram

ಎರಡೇ ವರ್ಷಗಳಲ್ಲಿ ತಾಮ್ರದ ಆಮದುದಾರ ರಾಷ್ಟ್ರವಾದ ಭಾರತ. ದಶಕಗಳ ಕಾಲದಿಂದಲೂ ಭಾರತವು ತಾಮ್ರದ ಪ್ರಮುಖ ರಫ್ತು ರಾಷ್ಟ್ರವಾಗಿತ್ತು. ಜಾಗತಿಕ ಮಟ್ಟದಲ್ಲಿ ತಾಮ್ರದ ಬಳಕೆ ಹೆಚ್ಚಾಗುತಿದ್ದಂತೆ ದೇಶದ ರಫ್ತೂ ಕೂಡ ಅದಕ್ಕೆ ಸರಿಸಮಾನವಾಗಿ ಏರಿಕೆಯನ್ನೇ ದಾಖಲಿಸಿತ್ತು. ಆದರೆ ಕಳೆದ ಒಂದೂವರೆ ವರ್ಷಗಳಿಂದ ತಾಮ್ರದ ಕೊರತೆ ಉಂಟಾಗುತ್ತಿರುವ ಪರಿಣಾಮ ಭಾರತ ತಾಮ್ರದ ಆಮದು ರಾಷ್ಟ್ರವಾಗಿ ಪರಿವರ್ತಿತವಾಗಿದೆ. ಕಳೆದ ಒಂದೂವರೆ ವರ್ಷದಿಂದ ತಾಮ್ರವನ್ನು ಆಮದು ಮಾಡಿಕೊಳ್ಳುವಲ್ಲಿ ಏರಿಕೆಯನ್ನೇ ದಾಖಲಿಸುತ್ತಿದೆ. ಕೇಂದ್ರ ವಾಣಿಜ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2017-18ರಲ್ಲಿ, ತಾಮ್ರದ ಕ್ಯಾಥೋಡ್‌ಗಳನ್ನು ರಫ್ತು ಮಾಡುವ ಅಗ್ರ ಐದು ರಫ್ತುದಾರರಲ್ಲಿ ಒಂದಾಗಿದ್ದು 2018-19ರ ಆರಂಭದಿಂದ ನಿವ್ವಳ ಆಮದುದಾರ ರಾಷ್ಟ್ರವಾಗಿದೆ.

ADVERTISEMENT

ಇದಕ್ಕೆ ಪ್ರಮುಖ ಕಾರಣವೇನು ಗೊತ್ತೆ ? ದೇಶದ ಪ್ರಮುಖ ತಾಮ್ರ ಉತ್ಪಾದಕ ಕಂಪೆನಿ ವೇದಾಂತ ಸಮೂಹದ ತಮಿಳು ನಾಡಿನ ತೂತುಕುಡಿಯಲ್ಲಿರುವ ಸ್ಟರ್ಲೈಟ್‌ ಕಾಪರ್‌ ಪ್ಲಾಂಟ್‌ ನ್ನು 2018 ರ ಮೇ ತಿಂಗಳಿನಲ್ಲಿ ಮುಚ್ಚಲಾಯಿತು. ಕಾರ್ಖಾನೆಯು ಹೊರ ಬಿಡುವ ತ್ಯಾಜ್ಯ ಮಾನವ ಆರೋಗ್ಯಕ್ಕೆ ಅಪಾಯಕಾರಿ ಎಂದು ಸ್ಥಳೀಯ ನಿವಾಸಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯ ಕಾರಣದಿಂದ ತಮಿಳುನಾಡು ಸರ್ಕಾರ 2018 ರ ಮೇ ತಿಂಗಳಿನಲ್ಲಿ ಕಾರ್ಖಾನೆಗೆ ಬೀಗ ಮುದ್ರೆ ಹಾಕಿತು.

ಇಂದು ಜಾಗತಿಕವಾಗಿ ವ್ಯಾಪಕ ಬಳಕೆಯಲ್ಲಿರುವ ಲೋಹಗಳ ಪೈಕಿ ಉಕ್ಕು , ಅಲ್ಯುಮೀನಿಯಂ ಬಿಟ್ಟರೆ ಮೂರನೇ ಸ್ಥಾನದಲ್ಲಿ ತಾಮ್ರ ಇದೆ. ದೇಶದ ಕಟ್ಟಡ ನಿರ್ಮಾಣ, ದೂರ ಸಂಪರ್ಕ, ಸಾರಿಗೆ, ಗ್ರಾಹಕ ಉತ್ಪನ್ನ, ಆಟೊಮೊಬೈಲ್ಸ್‌ ಕ್ಷೇತ್ರಗಳಲ್ಲಿ ವ್ಯಾಪಕ ಬಳಕೆಯಾಗುವ ತಾಮ್ರದ ಸರಬರಾಜು ದೇಶೀಯ ಮಾರುಕಟ್ಟೆಯಲ್ಲಿ ಕಡಿಮೆ ಆಗುತಿದ್ದಂತೆ ಬಹಳಷ್ಟು ಉತ್ಪಾದಕ ಕಂಪೆನಿಗಳು ತಮ್ಮ ಬೇಡಿಕೆ ಪೂರೈಸುವುದಕ್ಕೆ ಅನಿವಾರ್ಯವಾಗಿ ಅಮದಿನ ಮೊರೆ ಹೋಗಿವೆ.

ಅಂಕಿ – ಅಂಶಗಳ ಪ್ರಕಾರ 2017-18 ನೇ ಸಾಲಿನಲ್ಲಿ ದೇಶ 378 ಕಿಲೋ ಟನ್‌ ಗಳಷ್ಟು ತಾಮ್ರದ ಕ್ಯಾಥೋಡ್‌ ಗಳನ್ನು ರಫ್ತು ಮಾಡಿತ್ತು. ವಾರ್ಷಿಕ ಸುಮಾರು 400 ಕಿಲೋ ಟನ್‌ ಗಳಷ್ಟು ಉತ್ಪದನಾ ಸಾಮರ್ಥ್ಯದ ತೂತುಕುಡಿಯ ತಾಮ್ರದ ಕಾರ್ಖಾನೆ ಮುಚ್ಚಿದ ನಂತರ ದೇಶದ ರಫ್ತು 48 ಕಿಲೋ ಟನ್‌ ಗಳಿಗೆ ಕುಸಿತ ದಾಖಲಿಸಿತು. 2018-19 ರ ಲ್ಲಿ ತಾಮ್ರದ ರಫ್ತು ಮೌಲ್ಯ 300 ಮಿಲಿಯನ್‌ ಡಾಲರ್‌ ಗಳಿಗೆ ಕುಸಿಯಿತು. ಅದರಲ್ಲೂ 2019-20 ರ ಮೊದಲ ಅರ್ಧ ವರ್ಷದಲ್ಲಿ ದೇಶ 42 ಮಿಲಿಯನ್‌ ಡಾಲರ್‌ ಮೌಲ್ಯದ ಕೇವಲ 7 ಕಿಲೋ ಟನ್‌ ಗಳಷ್ಟು ತಾಮ್ರವನ್ನು ರಫ್ತು ಮಾಡಿದೆ.

2017-18 ನೇ ಸಾಲಿನಲ್ಲಿ ಭಾರತ 243 ಮಿಲಿಯನ್‌ ಡಾಲರ್‌ ಮೌಲ್ಯದ 36 ಕಿಲೋ ಟನ್‌ ಗಳಷ್ಟು ತಾಮ್ರದ ಕ್ಯಾಥೋಡ್‌ ಗಳನ್ನು ಆಮದು ಮಾಡಿಕೊಂಡಿದೆ. 2018-19 ನೇ ಸಾಲಿನಲ್ಲಿ ಆಮದು ಮೌಲ್ಯ ಏರಿಕೆ ದಾಖಲಿಸಿದ್ದು 551 ಮಿಲಿಯನ್‌ ಡಾಲರ್‌ ಮೌಲ್ಯದ 84 ಕಿಲೋ ಟನ್‌ ಗಳಷ್ಟು ತಾಮ್ರದ ಕ್ಯಾಥೋಡ್‌ ಗಳನ್ನು ಆಮದು ಮಾಡಿಕೊಂಡಿದೆ. 2019-20 ನೇ ಸಾಲಿನಲ್ಲಿ ಭಾರತ ಈಗಾಗಲೇ 447 ಮಿಲಿಯನ್‌ ಡಾಲರ್‌ ಮೌಲ್ಯದ 70 ಕಿಲೋ ಟನ್‌ ಗಳಷ್ಟು ತಾಮ್ರವನ್ನು ಅಮದು ಮಾಡಿಕೊಂಡಿದೆ.

ಚೀನಾ ಅತ್ಯಂತ ದೊಡ್ಡ ಆಮದು ರಾಷ್ಟ್ರವಾಗಿದ್ದು 2017-18 ನೇ ಸಾಲಿನಲ್ಲಿ ಭಾರತ 1.5 ಬಿಲಿಯನ್‌ ಡಾಲರ್‌ ಮೌಲ್ಯದ ತಾಮ್ರವನ್ನು ಚೀನಾಗೆ ರಫ್ತು ಮಾಡಿದ್ದು 2018-19 ನೇ ಸಾಲಿನಲ್ಲಿ ರಫ್ತು ಮೌಲ್ಯ ಶೇಕಡಾ 85 ರಷ್ಟು ಕುಸಿದು 226 ಮಿಲಿಯನ್‌ ಡಾಲರ್‌ ಗಳಿಗೆ ಇಳಿಕೆ ಅಯಿತು. ಈ ವರ್ಷದ ಮೊದಲ ಆರು ತಿಂಗಳಿನಲ್ಲಿ ಭಾರತ 39 ಮಿಲಿಯನ್‌ ಡಾಲರ್‌ ಮೌಲ್ಯದ ತಾಮ್ರವನ್ನು ಮಾತ್ರ ಚೀನಾಗೆ ರಫ್ತು ಮಾಡಿದೆ.

ಮತ್ತೊಂದೆಡೆ 2018-19 ನೇ ಸಾಲಿನಲ್ಲಿ ಭಾರತ ಜಪಾನ್‌ ನಿಂದ 390 ಮಿಲಿಯನ್‌ ಡಾಲರ್‌ ಮೌಲ್ಯದ ತಾಮ್ರವನ್ನು ಆಮದು ಮಾಡಿಕೊಂಡಿದೆ. ಈ ವರ್ಷದ ಏಪ್ರಿಲ್‌ -ಸೆಪ್ಟೆಂಬರ್‌ ವರೆಗೆ ಭಾರತ 384 ಮಿಲಿಯನ್‌ ಡಾಲರ್‌ ಮೌಲ್ಯದ ತಾಮ್ರವನ್ನು ಆಮದು ಮಾಡಿಕೊಂಡಿದೆ.

ರೇಟಿಂಗ್‌ ಏಜೆನ್ಸಿ ಕೇರ್‌ ತನ್ನ ಸೆಪ್ಟೆಂಬರ್‌ 2019 ರ ವರದಿಯಲ್ಲಿ ದೇಶದ ತಾಮ್ರ ಉತ್ಪದನೆ ಶೇಕಡಾ 46 ರಷ್ಟು ಕುಸಿಯಲಿರುವ ಬಗ್ಗೆ ಮುನ್ನೆಚ್ಚರಿಕೆ ನೀಡಿತ್ತು. ದೇಶದ ತಾಮ್ರದ ಸಂಸ್ಕರಣೆಯಲ್ಲಿ ತೂತುಕುಡಿಯ ಕಾರ್ಖಾನೆಯ ಪಾಲು ಶೇಕಡಾ 40 ರಷ್ಟಿದೆ. ಫೇಡರೇಷನ್‌ ಆಫ್‌ ಇಂಡಿಯನ್‌ ಎಕ್ಸ್‌ಪೋರ್ಟ್‌ ಆರ್ಗನೈಸೇಷನ್ಸ್‌ ನ ಸಿಈಓ ಮತ್ತು ಡೈರೆಕ್ಟರ್‌ ಜನರಲ್‌ ಅಜಯ್‌ ಸಹಾನಿ ಪ್ರಕಾರ ಸ್ಟರ್‌ಲೈಟ್‌ ಕಾರ್ಖಾನೆ ಮುಚ್ಚಿದ್ದೇ ದೇಶದ ತಾಮ್ರದ ಉತ್ಪಾದನೆ ಕುಸಿಯಲು ಕಾರಣವಾಗಿದ್ದು ಇದು ಪುನಃ ಅರಂಭಗೊಂಡರೆ ಭಾರತ ತನ್ನ ಎಂದಿನ ಸ್ಥಾನವನ್ನು ಗಳಿಸಿಕೊಳ್ಳಲಿದೆ.

ವೇದಾಂತ ಸಮೂಹ ತಮಿಳುನಾಡು ಸರ್ಕಾರದ ತೀರ್ಮಾನದ ವಿರುದ್ದ ಮಧುರೈ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಇದರ ವಿಚಾರಣೆ ಬಾಕಿ ಇದೆ. ಈ ಕಾರ್ಖಾನೆ ಮುಚ್ಚಿದ್ದರಿಂದಾಗಿ ಸಂಸ್ಥೆ ಯ ಲಾಭ ಗಳಿಕೆಯಲ್ಲಿ 200 ಮಿಲಿಯನ್‌ ಡಾಲರ್‌ ಗಳಷ್ಟು ಕಡಿಮೆ ಅಗಿದೆ ಎಂದು ವೇದಾಂತ ಸಮೂಹದ ಅಧ್ಯಕ್ಷ ಅನಿಲ್‌ ಅಗರ ವಾಲ್‌ ಹೇಳಿದ್ದಾರೆ.

ಲೋಹ ತಜ್ಞರ ಪ್ರಕಾರ ದೇಶದಲ್ಲಿ ವಿದ್ಯುತ್‌ ವಲಯ, ನವೀಕರಿಸಬಹುದಾದ ಇಂಧನ, ಗ್ರಾಹಕ ವಸ್ತುಗಳು , ಹೆಚ್ಚುತ್ತಿರುವ ಹೈಬ್ರಿಡ್‌ ಮತ್ತು ವಿದ್ಯುತ್‌ ಚಾಲಿತ ಕಾರುಗಳ ತಯಾರಿಕೆಯಿಂದಾಗಿ ತಾಮ್ರದ ಬೇಡಿಕೆ ವಾರ್ಷಿಕವಾಗಿ ಶೇಕಡಾ 7ರಿಂದ 8 ರಷ್ಟು ಹೆಚ್ಚಾಗುತ್ತಿದೆ. ಬೇಡಿಕೆಯ ಹೆಚ್ಚಳದಿಂದಾಗಿ ಭಾರತ ಸಂಸ್ಕರಿಸಿದ ತಾಮ್ರದ ನಿವ್ವಳ ಆಮದುದಾರ ರಾಷ್ಟ್ರವಾಗಿಯೇ ಮುಂದುವರಿಯಲಿದ್ದು ಇದರಿಂದಾಗಿ ದೇಶದ ವಿತ್ತೀಯ ಕೊರತೆಯ ಮೇಲೂ ಹೊರೆ ಆಗುತ್ತಿದೆ.

Tags: CopperCopper ExportCopper ImportCopper ProductionDemandFederation Of IndianSterlite Copper PlantTamilnadu Governmentತಮಿಳುನಾಡು ಸರ್ಕಾರತಾಮ್ರತಾಮ್ರ ಆಮದುತಾಮ್ರ ಉತ್ಪಾದನೆತಾಮ್ರ ರಫ್ತುಫೇಡರೇಷನ್‌ ಆಫ್‌ ಇಂಡಿಯನ್‌ಬೇಡಿಕೆಸ್ಟರ್ಲೈಟ್‌ ಕಾಪರ್‌ ಪ್ಲಾಂಟ್‌
Previous Post

ಉಪಚುನಾವಣೆ ಅನರ್ಹರಿಗಷ್ಟೇ ಅಲ್ಲ, ಬಿಎಸ್ ವೈ, ಸಿದ್ದುಗೂ ಪ್ರತಿಷ್ಠೆಯ ಪ್ರಶ್ನೆ

Next Post

ಸಂರಕ್ಷಿತ ಪ್ರದೇಶದಲ್ಲಿ ಜಾಕ್ವೆಲ್ ಯೋಜನೆ: ವನ್ಯಜೀವಿ ಪ್ರೇಮಿಗಳ ಪ್ರತಿಭಟನೆ

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

May 19, 2026
Next Post
ಸಂರಕ್ಷಿತ ಪ್ರದೇಶದಲ್ಲಿ ಜಾಕ್ವೆಲ್ ಯೋಜನೆ: ವನ್ಯಜೀವಿ ಪ್ರೇಮಿಗಳ ಪ್ರತಿಭಟನೆ

ಸಂರಕ್ಷಿತ ಪ್ರದೇಶದಲ್ಲಿ ಜಾಕ್ವೆಲ್ ಯೋಜನೆ: ವನ್ಯಜೀವಿ ಪ್ರೇಮಿಗಳ ಪ್ರತಿಭಟನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada