ನವದೆಹಲಿ : ಬರುವ ನವೆಂಬರ್ (November) ತಿಂಗಳಲ್ಲಿ ನೀವು ಹಣ ಪಾವತಿ, ಚೆಕ್ ಕ್ಲಿಯರೆನ್ಸ್ ಅಥವಾ ಬ್ಯಾಂಕ್ (bank) ಶಾಖೆಗೆ ಖುದ್ದಾಗಿ ಭೇಟಿ ನೀಡಿ ಮಾಡಬೇಕಾದ ಪ್ರಮುಖ ಕೆಲಸಗಳನ್ನು ಯೋಜಿಸುತ್ತಿದ್ದೀರಾ? ಹಾಗಿದ್ದರೆ, ಬ್ಯಾಂಕ್ ರಜೆಗಳ ಪಟ್ಟಿಯನ್ನು ಮುಂಚಿತವಾಗಿಯೇ ತಿಳಿದುಕೊಳ್ಳುವುದು ಉತ್ತಮ.
ನವೆಂಬರ್ ತಿಂಗಳಲ್ಲಿ ದೀಪಾವಳಿ, ಗುರುನಾನಕ್ ಜಯಂತಿ, ಕನಕ ಜಯಂತಿ ಹಾಗೂ ವಿವಿಧ ರಾಜ್ಯಗಳ ಪ್ರಾದೇಶಿಕ ಹಬ್ಬಗಳ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಬ್ಯಾಂಕುಗಳು ಮುಚ್ಚಲ್ಪಡಲಿವೆ. ಇವುಗಳ ಜೊತೆಗೆ ವಾಡಿಕೆಯಂತೆ ಎಲ್ಲಾ ಭಾನುವಾರಗಳು ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಕೂಡ ಬ್ಯಾಂಕ್ ಸೇವೆಗಳು ಇರುವುದಿಲ್ಲ.
ಆದರೆ, ಎಲ್ಲಾ ರಾಜ್ಯಗಳಲ್ಲೂ ಒಂದೇ ದಿನ ರಜೆ ಇರುವುದಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿಯಮಗಳ ಪ್ರಕಾರ, ಆಯಾ ರಾಜ್ಯಗಳ ಹಬ್ಬ ಮತ್ತು ಸಂಸ್ಕೃತಿಗೆ ತಕ್ಕಂತೆ ರಜೆಗಳು ಬದಲಾಗುತ್ತವೆ. ಹೀಗಾಗಿ ನಿಮ್ಮ ರಾಜ್ಯದ ಪಟ್ಟಿಯನ್ನು ಪರಿಶೀಲಿಸಿ ಶಾಖೆಗೆ ತೆರಳುವುದು ಸೂಕ್ತ.
ನವೆಂಬರ್ ತಿಂಗಳ ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿ
ನವೆಂಬರ್ 01: ಭಾನುವಾರ (ವಾರದ ರಜೆ)
ನವೆಂಬರ್ 08: ಭಾನುವಾರ (ದೀಪಾವಳಿ – ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಸೇರಿದಂತೆ ದೇಶದ ಹಲವೆಡೆ ದೀಪಾವಳಿ ಆಚರಣೆ ಇದ್ದರೂ, ಇದು ಭಾನುವಾರವೇ ಬಂದಿರುವುದರಿಂದ ಹೆಚ್ಚುವರಿ ರಜೆ ಇರುವುದಿಲ್ಲ)
ನವೆಂಬರ್ 09: ಗೋವರ್ಧನ ಪೂಜೆ (ಅಗರ್ತಲಾ, ಭೋಪಾಲ್, ಚಂಡೀಗಢ, ಗ್ಯಾಂಗ್‌ಟಾಕ್, ಇಂಫಾಲ್, ಜೈಪುರ, ಕಾನ್ಪುರ, ಲಕ್ನೋಗಳಲ್ಲಿ ರಜೆ)
ನವೆಂಬರ್ 10: ಲಕ್ಷ್ಮೀ ಪೂಜೆ / ಬಲಿಪಾಡ್ಯಮಿ (ಬೆಂಗಳೂರು, ಅಹಮದಾಬಾದ್, ಮುಂಬೈ, ಬೇಲಾಪುರ, ಡೆಹ್ರಾಡೂನ್, ನಾಗ್ಪುರ, ಗ್ಯಾಂಗ್‌ಟಾಕ್‌ನಲ್ಲಿ ರಜೆ)
ನವೆಂಬರ್ 11: ಭಾಯಿ ದೂಜ್ / ಲಕ್ಷ್ಮೀ ಪೂಜೆ / ನಿಂಗೋಲ್ ಚಕ್ಕೋಬಾ (ಗ್ಯಾಂಗ್‌ಟಾಕ್, ಕಾನ್ಪುರ, ಲಕ್ನೋ, ಕೋಲ್ಕತ್ತಾ, ಇಂಫಾಲ್, ಶಿಮ್ಲಾದಲ್ಲಿ ರಜೆ)
ನವೆಂಬರ್ 13: ವಂಗಲಾ ಹಬ್ಬ (ಶಿಲ್ಲಾಂಗ್‌ನಲ್ಲಿ ರಜೆ)
ನವೆಂಬರ್ 14: ಎರಡನೇ ಶನಿವಾರ (ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ರಜೆ)
ನವೆಂಬರ್ 15: ಭಾನುವಾರ (ವಾರದ ರಜೆ)
ನವೆಂಬರ್ 16: ಛತ್ ಪೂಜೆ (ಪಾಟ್ನಾ, ರಾಂಚಿಯಲ್ಲಿ ರಜೆ)
ನವೆಂಬರ್ 20: ಇಗಾಸ್-ಬಗ್ವಾಲ್ (ಡೆಹ್ರಾಡೂನ್‌ನಲ್ಲಿ ರಜೆ)
ನವೆಂಬರ್ 22: ಭಾನುವಾರ (ವಾರದ ರಜೆ)
ನವೆಂಬರ್ 23: ಸೆಂಗ್ ಕುಟ್ ಸ್ನೆಮ್ (ಶಿಲ್ಲಾಂಗ್‌ನಲ್ಲಿ ರಜೆ)
ನವೆಂಬರ್ 24: ಗುರುನಾನಕ್ ಜಯಂತಿ / ಕಾರ್ತಿಕ ಪೂರ್ಣಿಮೆ (ದೇಶದ ಬಹುತೇಕ ಭಾಗಗಳಲ್ಲಿ ಬ್ಯಾಂಕ್ ರಜೆ)
ನವೆಂಬರ್ 27: ಕನಕದಾಸ ಜಯಂತಿ (ಕರ್ನಾಟಕದಲ್ಲಿ ರಜೆ)
ನವೆಂಬರ್ 28: ನಾಲ್ಕನೇ ಶನಿವಾರ (ದೇಶಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ರಜೆ)
ನವೆಂಬರ್ 29: ಭಾನುವಾರ (ವಾರದ ರಜೆ)
ಗ್ರಾಹಕರಿಗೆ ನೆನಪಿರಲಿ
ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ, ಎಟಿಎಂ (ATM), ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಯುಪಿಐ (UPI) ನಂತಹ ಆನ್‌ಲೈನ್ ಡಿಜಿಟಲ್ ಸೇವೆಗಳು ಎಂದಿನಂತೆ 24 ಗಂಟೆಯೂ ಲಭ್ಯವಿರುತ್ತವೆ. ಆದಾಗ್ಯೂ, ಚೆಕ್ ಕ್ಲಿಯರೆನ್ಸ್ ಹಾಗೂ ನೇರ ನಗದು ವಹಿವಾಟುಗಳಿಗೆ ತೊಂದರೆಯಾಗದಂತೆ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಹಣಕಾಸಿನ ಕೆಲಸಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಿಕೊಳ್ಳಿ.
ಯುರೋಪ್‌ನಲ್ಲಿ ಪ್ರತಿಭಟನೆ, ಹಿಂಸಾಚಾರ: ಭಾರತೀಯರ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದೇನು?






