• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, October 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Virl Video :  ಹೆಲಿಕಾಪ್ಟರ್‌ ಇಳಿಯುವಾಗ ಜಾರಿ ಬೀಳುವುದರಿಂದ ಪಾರಾದ ಅಮೆರಿಕ ಉಪಾಧ್ಯಕ್ಷನ ಪತ್ನಿ ಉಷಾ ವ್ಯಾನ್ಸ್!

ಪ್ರತಿಧ್ವನಿ by ಪ್ರತಿಧ್ವನಿ
October 6, 2026
in Top Story, ವಿಡಿಯೋ, ವಿದೇಶ
0
Viral Video: Usha Vance, wife of the US Vice President, narrowly escapes a fall while disembarking from a helicopter
Share on WhatsAppShare on FacebookShare on Telegram

ಮೇರಿಲ್ಯಾಂಡ್ : ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಪತ್ನಿ ಉಷಾ ವ್ಯಾನ್ಸ್ (Usha Vance) ಅವರು ಸೋಮವಾರ ಮೇರಿಲ್ಯಾಂಡ್‌ನ ಜಾಯಿಂಟ್ ಬೇಸ್ ಆಂಡ್ರೂಸ್‌ನಲ್ಲಿ ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಜಾರಿ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಈ ವಿಡಿಯೋ ವೈರಲ್ (Viral Video) ಆಗಿದೆ.

ADVERTISEMENT

ಉಷಾ ವ್ಯಾನ್ಸ್  ಆ ಕ್ಷಣದಲ್ಲಿ ಅವರು ತಮ್ಮ ಒಂಬತ್ತು ವಾರಗಳ ಹಸುಗೂಸು ಅಲೆಕ್ ನೀಲ್ ವ್ಯಾನ್ಸ್‌ನನ್ನು ಬೇಬಿ ಕ್ಯಾರಿಯರ್‌ನಲ್ಲಿ ಹಿಡಿದುಕೊಂಡಿದ್ದರು. ಹೆಲಿಕಾಪ್ಟರ್‌ನ ಮೆಟ್ಟಿಲುಗಳ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ಉಷಾ ಅವರ ಕಾಲು ತಡವರಿಸಿದೆ. ತಕ್ಷಣವೇ ಅವರು ಪಕ್ಕದಲ್ಲಿದ್ದ ರೇಲಿಂಗ್ ಅನ್ನು ಬಲವಾಗಿ ಹಿಡಿದುಕೊಂಡು ಬ್ಯಾಲೆನ್ಸ್ ಮಾಡಿಕೊಂಡಿದ್ದರಿಂದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಮಗುವನ್ನು ತಕ್ಷಣವೇ ಪರಿಶೀಲಿಸಿದ ಉಷಾ

ಕಾಲು ತಡವರಿಸಿದ ತಕ್ಷಣವೇ ಉಷಾ ವ್ಯಾನ್ಸ್ ಅವರು ಮೊದಲು ಬೇಬಿ ಕ್ಯಾರಿಯರ್‌ನಲ್ಲಿದ್ದ ತಮ್ಮ ಮಗುವನ್ನು ಪರಿಶೀಲಿಸಿ, ಮಗುವಿಗೆ ಯಾವುದೇ ಅಪಾಯವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಸಾಮಾನ್ಯರಂತೆ ಮುಂದೆ ಸಾಗಿದರು. ಅದೇ ಸಮಯದಲ್ಲಿ ಜೆ.ಡಿ. ವ್ಯಾನ್ಸ್ ಅವರು ತಮ್ಮ ನಾಲ್ಕು ವರ್ಷದ ಮಗಳು ಮಿರಾಬೆಲ್ ಅವರನ್ನು ಎತ್ತಿಕೊಂಡು ಹೆಲಿಕಾಪ್ಟರ್‌ನಿಂದ ಕೆಳಗೆ ಇಳಿಯುತ್ತಿದ್ದರು. ಆದರೆ, ಉಷಾ ಅವರು ಕಾಲು ಜಾರಿದ ಘಟನೆಯನ್ನು ಜೆ.ಡಿ. ವ್ಯಾನ್ಸ್ ಗಮನಿಸಿದಂತೆ ಕಂಡುಬಂದಿಲ್ಲ.

Energy Minister K. J. George : ಜಿ ಪಂ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಾಯಕರು..!

ಸಿಬ್ಬಂದಿಯ ಮೌನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭದ್ರತಾ ಕ್ರಮಗಳ ಕುರಿತು ವ್ಯಾಪಕ ಚರ್ಚೆ ಶುರುವಾಗಿದೆ. ಉಷಾ ಅವರು ಜಾರಿ ಬೀಳುವ ಪರಿಸ್ಥಿತಿ ನಿರ್ಮಾಣವಾದಾಗ ಸಮೀಪದಲ್ಲೇ ಹಲವು ಸಿಬ್ಬಂದಿ ನಿಂತಿದ್ದರೂ, ಯಾರೊಬ್ಬರೂ ತಕ್ಷಣವೇ ಅವರ ನೆರವಿಗೆ ಬಾರದೆ ಸುಮ್ಮನೆ ನಿಂತಿದ್ದೇಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಆದರೆ, ವಿಐಪಿ ಭದ್ರತಾ ನಿಯಮಗಳು ಅಥವಾ ವಿಶೇಷ ಪ್ರೋಟೋಕಾಲ್ ಕಾರಣದಿಂದಾಗಿ ಅವರು ಹಾಗೆ ವರ್ತಿಸಿದರೇ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.

ಘಟನೆಯ ನಂತರ ಅಲಾಸ್ಕಾಗೆ ಕುಟುಂಬದ ಪಯಣ

ಈ ಆತಂಕದ ಕ್ಷಣದ ಬಳಿಕವೂ ವ್ಯಾನ್ಸ್ ಕುಟುಂಬವು ತಮ್ಮ ನಿಗದಿತ ಪ್ರವಾಸವನ್ನು ಮುಂದುವರಿಸಿದೆ. ಅಲಾಸ್ಕಾದಲ್ಲಿ ರಿಪಬ್ಲಿಕನ್ ನ್ಯಾಷನಲ್ ಕಮಿಟಿ ಆಯೋಜಿಸಿರುವ ರ್ಯಾಲಿಯಲ್ಲಿ, ಡೆಮಾಕ್ರಟಿಕ್ ಅಭ್ಯರ್ಥಿ ಮೇರಿ ಪೆಲ್ಟೋಲಾ ವಿರುದ್ಧ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಸೆನೆಟರ್ ಡಾನ್ ಸಲಿವಾನ್ ಪರ ಪ್ರಚಾರ ಮಾಡಲು ಜೆ.ಡಿ. ವ್ಯಾನ್ಸ್ ತೆರಳಿದ್ದಾರೆ. ಅಮೆರಿಕದ 50ನೇ ರಾಜ್ಯವಾದ ಅಲಾಸ್ಕಾಗೆ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ ವ್ಯಾನ್ಸ್, ಒಂಬತ್ತು ವಾರಗಳ ಹಸುಗೂಸಿನೊಂದಿಗೆ ದೀರ್ಘ ವಿಮಾನ ಪ್ರಯಾಣ ಕೈಗೊಳ್ಳುತ್ತಿರುವುದರಿಂದ ಭಾಷಣದ ವೇಳೆ ತಾನು ದಣಿದಂತೆ ಕಂಡರೆ ಅದಕ್ಕೆ ಈ ಪ್ರಯಾಣವೇ ಕಾರಣ ಎಂದು ಲಘು ಧಾಟಿಯಲ್ಲಿ ಹೇಳಿಕೊಂಡಿದ್ದಾರೆ.

Usha Vance nearly crushed her new baby. Glad he’s ok. pic.twitter.com/QjLSacMYXz

— Brian Krassenstein (@krassenstein) October 5, 2026

ಜುಲೈ 19ರಂದು ಜನಿಸಿದ್ದ ಪುಟ್ಟ ಅಲೆಕ್

ಉಷಾ ಮತ್ತು ಜೆ.ಡಿ. ವ್ಯಾನ್ಸ್ ದಂಪತಿಗೆ ಅಲೆಕ್ ನಾಲ್ಕನೇ ಮಗು. ಜುಲೈ 19ರಂದು ಮೇರಿಲ್ಯಾಂಡ್‌ನ ಬೆಥೆಸ್ಡಾದಲ್ಲಿರುವ ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಸೆಂಟರ್‌ನಲ್ಲಿ ಅಲೆಕ್ ಜನಿಸಿದ್ದನು. ಈ ದಂಪತಿಗೆ ಈವಾನ್ (9), ವಿವೇಕ್ (6) ಮತ್ತು ಮಿರಾಬೆಲ್ (4) ಎಂಬ ಮೂವರು ಹಿರಿಯ ಮಕ್ಕಳಿದ್ದಾರೆ. ಸದ್ಯ ಉಷಾ ವ್ಯಾನ್ಸ್ ಅವರು ಮಗುವಿನೊಂದಿಗೆ ಜಾರಿ ಬೀಳುವುದರಿಂದ ಪಾರಾದ ವಿಡಿಯೋ ಇಂಟರ್ನೆಟ್‌ನಲ್ಲಿ ತೀವ್ರ ಗಮನ ಸೆಳೆಯುತ್ತಿದೆ.

GOOD NEWS :‌ ರೈತರಿಗೆ‌ ಕೇಂದ್ರ ಸರ್ಕಾರದಿಂದ ಸಿಗಲಿದೆ ಪ್ರತಿ ತಿಂಗಳು ₹3,000 ಪಿಂಚಣಿ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Tags: HelicopterUsha VanceViral Video
Previous Post

GOOD NEWS :‌ ರೈತರಿಗೆ‌ ಕೇಂದ್ರ ಸರ್ಕಾರದಿಂದ ಸಿಗಲಿದೆ ಪ್ರತಿ ತಿಂಗಳು ₹3,000 ಪಿಂಚಣಿ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Next Post

BREAKING : ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ: ಅಕ್ಟೋಬರ್ 31ಕ್ಕೆ ಅಧಿಕಾರ ಸ್ವೀಕಾರ | Ashutosh Dixit

Related Posts

ಭಗವಂತ್ ಮಾನ್ ಕ್ಯಾಂಪ್ ಕಚೇರಿ ಮೇಲೆ CBI ದಾಳಿ; OSD ಭ್ರಷ್ಟಾಚಾರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
Top Story

ಭಗವಂತ್ ಮಾನ್ ಕ್ಯಾಂಪ್ ಕಚೇರಿ ಮೇಲೆ CBI ದಾಳಿ; OSD ಭ್ರಷ್ಟಾಚಾರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

by ಪ್ರತಿಧ್ವನಿ
October 6, 2026
0

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಚಂಡೀಗಢದ ಕ್ಯಾಂಪ್ ಕಚೇರಿ ಮೇಲೆ ಕೇಂದ್ರ ತನಿಖಾ ದಳ (CBI) ಮಂಗಳವಾರ ಶೋಧ ನಡೆಸಿದೆ. ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ...

Read moreDetails
ಹಾಲು, ಬಸ್‌ ದರ ಏರಿಕೆಗೆ ಸಂಪುಟ ಅಸ್ತು? ಸಭೆಯಲ್ಲಿ 40ಕ್ಕೂ ಹೆಚ್ಚು ನಿರ್ಧಾರ!

ಹಾಲು, ಬಸ್‌ ದರ ಏರಿಕೆಗೆ ಸಂಪುಟ ಅಸ್ತು? ಸಭೆಯಲ್ಲಿ 40ಕ್ಕೂ ಹೆಚ್ಚು ನಿರ್ಧಾರ!

October 6, 2026
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರದೋಷ್‌ ಹೇಳಿಕೆ 108 ಪುಟ!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರದೋಷ್‌ ಹೇಳಿಕೆ 108 ಪುಟ!

October 6, 2026
SIR Allegations of ‘vote theft’ in Karnataka: FIR registered against BJP leaders

ಕರ್ನಾಟಕದಲ್ಲಿ ‘ವೋಟ್‌ ಚೋರಿ’ ಆರೋಪದ ಬಿರುಗಾಳಿ: ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲು | SIR

October 6, 2026
SIR Former CM Siddaramaiah offers advice and instructions via video conference

SIR : ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಹೋರಾಟ: ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ, ಸೂಚನೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

October 6, 2026
Next Post
BREAKING: Air Marshal Ashutosh Dixit Appointed as New Chief of the Indian Air Force

BREAKING : ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ: ಅಕ್ಟೋಬರ್ 31ಕ್ಕೆ ಅಧಿಕಾರ ಸ್ವೀಕಾರ | Ashutosh Dixit

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada