• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, September 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾತ್ರೋರಾತ್ರಿ ಸಿದ್ದರಾಮಯ್ಯ 9 ಅಡಿ ಪ್ರತಿಮೆ ಸ್ಥಾಪನೆ; ಬೆಳಗಿನ ಜಾವವೇ ಪಾಲಿಕೆ-ಪೊಲೀಸರ ಕಾರ್ಯಾಚರಣೆ!

ಪ್ರತಿಧ್ವನಿ by ಪ್ರತಿಧ್ವನಿ
September 17, 2026
in Top Story
0
ರಾತ್ರೋರಾತ್ರಿ ಸಿದ್ದರಾಮಯ್ಯ 9 ಅಡಿ ಪ್ರತಿಮೆ ಸ್ಥಾಪನೆ; ಬೆಳಗಿನ ಜಾವವೇ ಪಾಲಿಕೆ-ಪೊಲೀಸರ ಕಾರ್ಯಾಚರಣೆ!
Share on WhatsAppShare on FacebookShare on Telegram

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ನಗರ ಕಲಬುರಗಿಯ ಹೈಕೋರ್ಟ್ ವೃತ್ತದಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ ರಾತ್ರೋರಾತ್ರಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಬೆಳಗಿನ ಜಾವವೇ ತೆರವುಗೊಳಿಸಿದ್ದಾರೆ.ಗುರುವಾರ ಮುಂಜಾನೆ ಹೈಕೋರ್ಟ್ ಕ್ರಾಸ್‌ ಬಳಿ ಸಿದ್ದರಾಮಯ್ಯ ಅವರ ಪ್ರತಿಮೆ ಕಾಣಿಸಿಕೊಂಡಿತ್ತು. ಸುಮಾರು ಏಳೆಂಟು ಮಂದಿ ಅಭಿಮಾನಿಗಳು ಯಾವುದೇ ಅಧಿಕೃತ ಅನುಮತಿ ಪಡೆಯದೆ ರಾತ್ರಿ ವೇಳೆ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹರಿದಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ADVERTISEMENT
N. Chaluvaraya Swamy : ಕಾಮಗಾರಿ ವಿಳಂಬಕ್ಕೆ ಕಠಿಣ ಕ್ರಮ: ಚಲುವರಾಯಸ್ವಾಮಿ..! #chaluvarayaswamy

ಹೈಕೋರ್ಟ್ ವೃತ್ತಕ್ಕೆ ಈ ಹಿಂದೆ ಯಾವುದೇ ಅಧಿಕೃತ ಅನುಮತಿ ಇಲ್ಲದೆ ‘ಸಿದ್ದರಾಮಯ್ಯ ಸರ್ಕಲ್’ ಎಂಬ ಹೆಸರಿನ ಬ್ಯಾನರ್ ಅಳವಡಿಸಲಾಗಿತ್ತು ಎಂಬ ಮಾಹಿತಿಯೂ ಇದೀಗ ಚರ್ಚೆಗೆ ಬಂದಿದೆ.

ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಿರುವ ವಿಷಯ ತಿಳಿಯುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮುನ್ನವೇ ಪ್ರತಿಮೆಯ ಮುಖವನ್ನು ಮುಚ್ಚಲಾಗಿದ್ದು, ಬಳಿಕ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪಾಲಿಕೆ ಸಿಬ್ಬಂದಿ ಪ್ರತಿಮೆಯನ್ನು ತೆರವುಗೊಳಿಸಿದರು.ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಕಲಬುರಗಿಗೆ ಆಗಮಿಸಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸಲಾಗಿದ್ದ ಹೈಕೋರ್ಟ್ ವೃತ್ತದ ಮಾರ್ಗವಾಗಿಯೇ ಮುಖ್ಯಮಂತ್ರಿ ಅಫಜಲಪುರಕ್ಕೆ ತೆರಳಬೇಕಿದ್ದ ಹಿನ್ನೆಲೆಯಲ್ಲಿ, ಪ್ರತಿಮೆ ತೆರವು ಕಾರ್ಯಾಚರಣೆ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Basavaraj Bommai : ಹರಿಪ್ರಸಾದ್ ಹೇಳಿಕೆಗೆ ಬೊಮ್ಮಾಯಿ ಕೌಂಟರ್..! #pratidhvani

ಸಾರ್ವಜನಿಕ ಸ್ಥಳಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯದೆ ಪ್ರತಿಮೆ, ಬ್ಯಾನರ್‌ ಸೇರಿದಂತೆ ಯಾವುದೇ ರಚನೆಗಳನ್ನು ಸ್ಥಾಪಿಸುವುದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags: BBMPBreaking NewsGulbargaHigh Court CircleKalaburagiKalaburagi Municipal CorporationKALABURAGI NewsKarnataka Governmentkarnataka latest newskarnataka newsKarnataka Politicspolitical newssiddaramaiahsiddaramaiah newsSiddaramaiah statueUnauthorized Statue
Previous Post

ದಾಖಲೆಗಳಿದ್ದರೂ ಕ್ರಮವಿಲ್ಲವೇ? ಕೆಐಎಡಿಬಿ ಪ್ರಕರಣದಲ್ಲಿ ಸಚಿವರ ಮೌನಕ್ಕೆ ಕಾರಣವೇನು?

Next Post

ಮೋದಿ ಬರ್ತ್‌ಡೇಗೆ ಶುಭಾಶಯಗಳ ಮಹಾಪೂರ; ರಾಹುಲ್, ಖರ್ಗೆ, ಮುರ್ಮು ಹೇಳಿದ್ದೇನು 

Related Posts

ಮೋದಿ ಬರ್ತ್‌ಡೇಗೆ ಶುಭಾಶಯಗಳ ಮಹಾಪೂರ; ರಾಹುಲ್, ಖರ್ಗೆ, ಮುರ್ಮು ಹೇಳಿದ್ದೇನು 
Top Story

ಮೋದಿ ಬರ್ತ್‌ಡೇಗೆ ಶುಭಾಶಯಗಳ ಮಹಾಪೂರ; ರಾಹುಲ್, ಖರ್ಗೆ, ಮುರ್ಮು ಹೇಳಿದ್ದೇನು 

by ಪ್ರತಿಧ್ವನಿ
September 17, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 17) 76ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 1950ರ ಸೆಪ್ಟೆಂಬರ್ 17ರಂದು ಗುಜರಾತ್‌ನ ವಡನಗರದಲ್ಲಿ ಜನಿಸಿದ ಪ್ರಧಾನಿ ಮೋದಿಗೆ ದೇಶದ...

Read moreDetails
ದಾಖಲೆಗಳಿದ್ದರೂ ಕ್ರಮವಿಲ್ಲವೇ? ಕೆಐಎಡಿಬಿ ಪ್ರಕರಣದಲ್ಲಿ ಸಚಿವರ ಮೌನಕ್ಕೆ ಕಾರಣವೇನು?

ದಾಖಲೆಗಳಿದ್ದರೂ ಕ್ರಮವಿಲ್ಲವೇ? ಕೆಐಎಡಿಬಿ ಪ್ರಕರಣದಲ್ಲಿ ಸಚಿವರ ಮೌನಕ್ಕೆ ಕಾರಣವೇನು?

September 17, 2026
ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ; ಸಚಿವ ಸಂಪುಟದ ಮುಂದೆ ಪ್ರಸ್ತಾವನೆ: ಸಚಿವ ಕೆ.ಜೆ. ಜಾರ್ಜ್‌

ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ; ಸಚಿವ ಸಂಪುಟದ ಮುಂದೆ ಪ್ರಸ್ತಾವನೆ: ಸಚಿವ ಕೆ.ಜೆ. ಜಾರ್ಜ್‌

September 17, 2026
ಮಗಳನ್ನ ಶಾಲೆಗೆ ಕರೆದೊಯ್ಯುತ್ತಿದ್ದಾಗಲೇ ಅನಂತ್ ನಾಗ್ ಮೇಲೆ ದಾಳಿ; ಅಂದು ನಡೆದಿದ್ದೇನು?

ಮಗಳನ್ನ ಶಾಲೆಗೆ ಕರೆದೊಯ್ಯುತ್ತಿದ್ದಾಗಲೇ ಅನಂತ್ ನಾಗ್ ಮೇಲೆ ದಾಳಿ; ಅಂದು ನಡೆದಿದ್ದೇನು?

September 17, 2026
ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

ಭ್ರಷ್ಟಾಚಾರ – ವ್ಯವಸ್ಥೆಯ ಬೇರುಗಳಲ್ಲಿರುವ ವೈರಾಣು

September 17, 2026
Next Post
ಮೋದಿ ಬರ್ತ್‌ಡೇಗೆ ಶುಭಾಶಯಗಳ ಮಹಾಪೂರ; ರಾಹುಲ್, ಖರ್ಗೆ, ಮುರ್ಮು ಹೇಳಿದ್ದೇನು 

ಮೋದಿ ಬರ್ತ್‌ಡೇಗೆ ಶುಭಾಶಯಗಳ ಮಹಾಪೂರ; ರಾಹುಲ್, ಖರ್ಗೆ, ಮುರ್ಮು ಹೇಳಿದ್ದೇನು 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!