• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ಯಾರಿಗಾಗಿ ಈ ಸೈಟ್, ಯಾರಿಗಾಗಿ ಲೇಔಟ್?”; ಸರ್ಕಾರದ ವಿರುದ್ಧ ದೇವೇಗೌಡರ ಆಕ್ರೋಶ

ಪ್ರತಿಧ್ವನಿ by ಪ್ರತಿಧ್ವನಿ
August 11, 2026
in Top Story
0
“ಯಾರಿಗಾಗಿ ಈ ಸೈಟ್, ಯಾರಿಗಾಗಿ ಲೇಔಟ್?”; ಸರ್ಕಾರದ ವಿರುದ್ಧ ದೇವೇಗೌಡರ ಆಕ್ರೋಶ
Share on WhatsAppShare on FacebookShare on Telegram

ಹಾಸನ: ಬೆಂಗಳೂರು ಭೂಮಿ ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬೆಂಬಲ ವ್ಯಕ್ತಪಡಿಸಿದ್ದು, ಬಡವರು ಹಾಗೂ ಸಂಕಷ್ಟದಲ್ಲಿರುವ ಜನರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಮಾತನಾಡಿದ ದೇವೇಗೌಡರು, ಬಿಡದಿ ಹೋರಾಟದ ಪಾದಯಾತ್ರೆಯಲ್ಲಿ ಭಾಗವಹಿಸಿ ವಾಪಸ್ ಬಂದ ಬಳಿಕ ಪಾದಯಾತ್ರೆಯನ್ನು ತಡೆದಿರುವ ವಿಚಾರ ತಿಳಿಯಿತು ಎಂದು ಹೇಳಿದರು.“ನಾನು ವಾಪಸ್ ಬಂದ ಮೇಲೆ ಪಾದಯಾತ್ರೆ ತಡೆದಿದ್ದಾರೆ ಎಂದು ಗೊತ್ತಾಯಿತು. ನಮ್ಮ ಮನೆಯಲ್ಲಿಯೇ ಕುಳಿತು ಈ ವಿಚಾರವನ್ನು ನೋಡಿದೆ” ಎಂದು ಅವರು ಹೇಳಿದರು.

ಭೂಮಿ ಹೊಂದಿರುವ ಬಡವರು ಹಾಗೂ ಸಣ್ಣ ರೈತರ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ಯಾವುದೇ ಯೋಜನೆಯನ್ನು ವಿರೋಧಿಸುವುದಾಗಿ ತಿಳಿಸಿದ ದೇವೇಗೌಡರು, ತಮ್ಮ 70 ವರ್ಷಗಳ ರಾಜಕೀಯ ಜೀವನದಲ್ಲಿ ರೈತರ ಪರವಾಗಿ ನಡೆಸಿದ ಹಲವು ಹೋರಾಟಗಳ ಉದಾಹರಣೆಗಳಿವೆ ಎಂದರು.

ಮಿಸ್ಟರ್ Nagendra ದಿನಾಲೂ ಕೋರ್ಟ್ ನಲ್ಲೇ ಇರಬೇಕು..! | BJP | Pratidhvani

ತಮ್ಮ ಕುಟುಂಬದ ಹೋರಾಟವನ್ನು ಕೇವಲ ಒಕ್ಕಲಿಗರ ಹಿತಾಸಕ್ತಿಗೆ ಸೀಮಿತಗೊಳಿಸಿ ನೋಡಬಾರದು ಎಂದು ದೇವೇಗೌಡರು ಹೇಳಿದರು.“ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಒಕ್ಕಲಿಗರಿಗಾಗಿ ಮಾತ್ರ ಹೋರಾಟ ಮಾಡುತ್ತಾರೆ ಎಂದು ಭಾವಿಸಬಾರದು. ಸಣ್ಣ ಸಮುದಾಯದವರು, ಹಿಂದುಳಿದ ವರ್ಗದವರು ಹಾಗೂ ಸಂಕಷ್ಟದಲ್ಲಿರುವ ಬಡವರು ಸಾಕಷ್ಟು ಮಂದಿ ಇದ್ದಾರೆ. ಅವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದರೆ ನಾವು ಸುಮ್ಮನಿರುವುದಿಲ್ಲ” ಎಂದು ಅವರು ಎಚ್ಚರಿಸಿದರು.

ಮಿಸ್ಟರ್ Nagendra ದಿನಾಲೂ ಕೋರ್ಟ್ ನಲ್ಲೇ ಇರಬೇಕು..! | BJP | Pratidhvani

ಭೂಮಿ ಸ್ವಾಧೀನ ಹಾಗೂ ಯೋಜನೆಯ ಉದ್ದೇಶದ ಬಗ್ಗೆಯೂ ದೇವೇಗೌಡರು ಹಲವು ಪ್ರಶ್ನೆಗಳನ್ನು ಎತ್ತಿದರು.“ಈ ಯೋಜನೆಗೆ ಯಾರು ಅರ್ಜಿ ಹಾಕಿದ್ದಾರೆ? ಯಾವ ಉದ್ದೇಶಕ್ಕಾಗಿ ಈ ಯೋಜನೆ ಮಾಡಲಾಗುತ್ತಿದೆ? ಯಾರಿಗಾಗಿ ಈ ಸೈಟ್, ಯಾರಿಗಾಗಿ ನೀವು ಲೇಔಟ್ ಮಾಡುತ್ತಿದ್ದೀರಿ?” ಎಂದು ಅವರು ಪ್ರಶ್ನಿಸಿದರು.ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟೊಯೋಟಾ ಕಂಪನಿಗೆ ಸುಮಾರು 3 ಸಾವಿರ ಎಕರೆ ಭೂಮಿ ನೀಡಿದ್ದನ್ನು ಪ್ರಸ್ತಾಪಿಸಿದ ದೇವೇಗೌಡರು, ಈಗ ಕೈಗೊಳ್ಳಲಾಗುತ್ತಿರುವ ಯೋಜನೆಯ ಉದ್ದೇಶವೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ಅಭಿವೃದ್ಧಿ ಹಾಗೂ ಭೂಮಿ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ದೇವೇಗೌಡರು ಹಲವು ಪ್ರಶ್ನೆಗಳನ್ನು ಕೇಳಿದರು.“ಮೂರು ವರ್ಷ ನೀವೇ ಉಪಮುಖ್ಯಮಂತ್ರಿಯಾಗಿರಲಿಲ್ಲವೇ? ಬೆಂಗಳೂರಿನಲ್ಲಿ ಐದು ಕಾರ್ಪೊರೇಷನ್ ಮಾಡಿದ್ದು ನೀವೇ ತಾನೆ? ಆಗ ಯಾಕೆ ಭೂಮಿ ನೀಡಲಿಲ್ಲ? ಈಗ ಒಂದು ತಿಂಗಳಲ್ಲಿ ಈ ವಿಚಾರದಲ್ಲಿ ಯಾಕೆ ಇಷ್ಟು ತುರ್ತು?” ಎಂದು ಅವರು ಪ್ರಶ್ನಿಸಿದರು.

Krishna Byre Gowda : ಬೆಂಗಳೂರಿನ ತ್ಯಾಜ್ಯ ವಿಲೇವಾರಿಗೆ ಜಿಬಿಎ ಸಿದ್ದವಾಗಿದೆ. #pratidhvani

ಮುಖ್ಯಮಂತ್ರಿ ಬದಲಾವಣೆಯಾದ ಬಳಿಕ ಕೇವಲ ಒಂದು ತಿಂಗಳಲ್ಲೇ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತರಲು ಮುಂದಾಗಿರುವುದರ ಹಿಂದೆ ರಾಜಕೀಯ ಕಾರಣಗಳಿವೆ ಎಂಬ ಆರೋಪವನ್ನೂ ದೇವೇಗೌಡರು ಮಾಡಿದರು.“ದೆಹಲಿಯ ಮುಖಂಡರಿಗೆ ಏನೇನು ಮಾತು ಕೊಟ್ಟಿದ್ದೀರೋ, ಅದನ್ನು ಕಾರ್ಯಗತಗೊಳಿಸಲು ಈ ಪ್ರಾಜೆಕ್ಟ್ ಮಾಡಲಾಗುತ್ತಿದೆ. ಹಾಗಾಗಿ ತರಾತುರಿಯಲ್ಲಿ ಯೋಜನೆ ಜಾರಿಗೆ ತರಲು ಹೊರಟಿದ್ದಾರೆ” ಎಂದು ಅವರು ಆರೋಪಿಸಿದರು.

ಬೆಂಗಳೂರಿಗೆ ತೆರಳಿದ ಬಳಿಕ ಹೋರಾಟದ ಕುರಿತು ಮಾಹಿತಿ ಪಡೆದು ಸಮಾಲೋಚನೆ ನಡೆಸುವುದಾಗಿ ದೇವೇಗೌಡರು ಹೇಳಿದರು.ಆಗಸ್ಟ್ 18ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಹೋರಾಟಕ್ಕೆ ಯಾವುದೇ ರೀತಿಯ ಅಡ್ಡಿ ಅಥವಾ ಆತಂಕ ಉಂಟಾದರೆ ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

“ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬೆಂಗಳೂರಿಗೆ ಹೋದ ಬಳಿಕ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇನೆ” ಎಂದು ದೇವೇಗೌಡರು ಸ್ಪಷ್ಟಪಡಿಸಿದರು.ಫ್ರೀಡಂ ಪಾರ್ಕ್‌ನಲ್ಲಿ ಈ ಹಿಂದೆ ಸಾವಿರಾರು ಹೋರಾಟಗಳು ನಡೆದಿವೆ. ತಾವೂ ಹಲವು ಬಾರಿ ಅಲ್ಲಿ ಹೋರಾಟ ನಡೆಸಿದ್ದೇನೆ ಎಂದು ಅವರು ಹೇಳಿದರು. ಫ್ರೀಡಂ ಪಾರ್ಕ್‌ನಲ್ಲಿನ ಹೋರಾಟದ ಕುರಿತು ಸರ್ಕಾರ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.“ಈ ಜಮೀನನ್ನು ಕಬಳಿಸಿ ದೆಹಲಿಯ ಒಳಗೆ ಯಾರಿಗಾಗಿ ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದ ದೇವೇಗೌಡರು, ಬಡವರ ಪರವಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಪುನರುಚ್ಚರಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: August 18 ProtestBengaluru DevelopmentBengaluru Land AcquisitionBengaluru Land Issuebengaluru newsBidadi Land IssueBidadi ProtestDeve Gowda NewsDeve Gowda ProtestFarmers Land IssueFreedom Park ProtestHD KumaraswamyKarnataka FarmersKarnataka farmers protestKarnataka Governmentkarnataka latest newskarnataka political newsKarnataka PoliticsKarnataka ProtestLand Acquisition KarnatakaNikhil Kumaraswamy
Previous Post

ರಾಹುಲ್ ಗಾಂಧಿ ಜೊತೆ ದೋಣಿಯಲ್ಲಿ ಮಹಿಳೆ, ಮಗು; ಗಿರಿರಾಜ್ ಸಿಂಗ್ ಪೋಸ್ಟ್‌ಗೆ ಭಾರೀ ಚರ್ಚೆ

Next Post

NEET ಬಳಿಕ ಮತ್ತೊಂದು ಅಭಿಯಾನಕ್ಕೆ ಅಭಿಜೀತ್ ದೀಪ್ಕೆ;  ರಾಷ್ಟ್ರವ್ಯಾಪಿ ಹೋರಾಟ

Related Posts

ಎಸ್ಐಆರ್ ಪ್ರಕ್ರಿಯೆ: ಪ್ರಜಾಪ್ರಭುತ್ವ ಮತ್ತು ಸಮಾಜದ ಮೇಲೆ ಪರಿಣಾಮ
Top Story

ರಿಹಾಬ್ ಕೇಂದ್ರದ ರೋಗಿಗಳನ್ನು SIR ಪ್ರಕ್ರಿಯೆಯಲ್ಲಿ ಸೇರಿಸಿ: ಮೋಹನ್ ಕುಮಾರ್ ದಾನಪ್ಪ ಆಗ್ರಹ

by ಪ್ರತಿಧ್ವನಿ
August 13, 2026
0

ಬೆಂಗಳೂರು: ಮದ್ಯವ್ಯಸನ ಚಿಕಿತ್ಸಾ/ಪುನರ್ವಸತಿ ಕೇಂದ್ರಗಳಲ್ಲಿ (De-addiction & Rehabilitation Centres) ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳನ್ನು ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ...

Read moreDetails
ವಾಲ್ಮೀಕಿ ಸಮಾಜದ ಬಗ್ಗೆ ಗೌರವ ಇದ್ರೆ ಬಿ.ನಾಗೇಂದ್ರ ರಾಜೀನಾಮೆ ಕೊಡಲಿ- ಬಿ.ವೈ ವಿಜಯೇಂದ್ರ

ವಾಲ್ಮೀಕಿ ಸಮಾಜದ ಬಗ್ಗೆ ಗೌರವ ಇದ್ರೆ ಬಿ.ನಾಗೇಂದ್ರ ರಾಜೀನಾಮೆ ಕೊಡಲಿ- ಬಿ.ವೈ ವಿಜಯೇಂದ್ರ

August 13, 2026
ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

August 13, 2026
ವಿರೋಧ ಪಕ್ಷಗಳಿಗೆ ಮಾತಿನಲ್ಲೇ ಚಡಿ ಏಟು ಕೊಟ್ಟ ಪ್ರಿಯಾಂಕ್​ ಖರ್ಗೆ..

RSS ಕೇಂದ್ರ ಕಚೇರಿಯಿಂದಲೇ ‘ಹರ್ ಘರ್ ತಿರಂಗಾ’ ಆರಂಭಿಸಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಸವಾಲು

August 13, 2026
ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್

ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್

August 13, 2026
Next Post
NEET ಬಳಿಕ ಮತ್ತೊಂದು ಅಭಿಯಾನಕ್ಕೆ ಅಭಿಜೀತ್ ದೀಪ್ಕೆ;  ರಾಷ್ಟ್ರವ್ಯಾಪಿ ಹೋರಾಟ

NEET ಬಳಿಕ ಮತ್ತೊಂದು ಅಭಿಯಾನಕ್ಕೆ ಅಭಿಜೀತ್ ದೀಪ್ಕೆ;  ರಾಷ್ಟ್ರವ್ಯಾಪಿ ಹೋರಾಟ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada