• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

H.D Kumaraswamy: ಸಿಎಂ ಆದ ಮೇಲೆಯೂ ಹಳೇ ಚಾಳಿ ಬಿಟ್ಟಿಲ್ಲ: ಡಿಕೆಶಿ ವಿರುದ್ಧ ಹೆಚ್‌ಡಿಕೆ ಗರಂ

ಪ್ರತಿಧ್ವನಿ by ಪ್ರತಿಧ್ವನಿ
June 17, 2026
in Top Story, ಕರ್ನಾಟಕ, ರಾಜಕೀಯ
0
H.D Kumaraswamy: ಸಿಎಂ ಆದ ಮೇಲೆಯೂ ಹಳೇ ಚಾಳಿ ಬಿಟ್ಟಿಲ್ಲ: ಡಿಕೆಶಿ ವಿರುದ್ಧ ಹೆಚ್‌ಡಿಕೆ ಗರಂ
Share on WhatsAppShare on FacebookShare on Telegram

ಬೆಂಗಳೂರು: ನಾವು ಬಿಡದಿ ರೈತರ ಪರ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಪೋಸ್ಟರ್‌ಗಳನ್ನು ಅಂಟಿಸಿ ತಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯದ ಮುಖ್ಯಮಂತ್ರಿಯಾದರೂ ಡಿ.ಕೆ. ಶಿವಕುಮಾರ್ ತನ್ನ ಹಳೆಯ ಚಾಳಿ ಬಿಟ್ಟಿಲ್ಲ ಎಂದು ಗುಡುಗಿದರು.

ADVERTISEMENT
HD Kumaraswamy on DKS : ನನ್ನ ಕಾಲದಲ್ಲಿ ಟೌನ್‌ ಶಿಪ್‌ ಮಾಡ್ಲಿಕ್ಕೆ ಹೊರಟಿದ್ದು ನಿಜಾ ಆದ್ರೆ.. #pratidhvani

ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡದಿ ಭಾಗದಲ್ಲಿ ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ಪೋಸ್ಟರ್ ಅಂಟಿಸಿರುವ ಮಾಹಿತಿ ನನಗೂ ಬಂದಿದೆ. ರಾಜ್ಯದ ಸಿಎಂ ಆದ ಮೇಲೆಯೂ ಬ್ಲೂ ಫಿಲ್ಮ್ ‌ಮಾಡಿಸುವುದು, ಪೋಸ್ಟರ್ ಅಂಟಿಸುವುದು ಬಿಡುತ್ತಾರೆ ಅಂದುಕೊಂಡಿದ್ದೆ. ಆ ಚಾಳಿ ಡಿ.ಕೆ ಶಿವಕುಮಾರ್‌ಗೆ ಇನ್ನೂ ಹೋಗಿಲ್ಲ. ವೈಯಕ್ತಿಕವಾಗಿ ಅಪಪ್ರಚಾರ ಮಾಡಿದರೆ ನಾನು ಕುಗ್ಗುವ ಮನುಷ್ಯ ಅಲ್ಲ. ನನ್ನ ಹೋರಾಟ ಇನ್ನೂ ತೀವ್ರವಾಗುತ್ತದೆ ಎಂದು ಕಿಡಿಕಾರಿದರು.

ಕೈಲಾಗದವನ ಕೊನೆಯ ಅಸ್ತ್ರವೇ ಅಪಪ್ರಚಾರ. ಅದನ್ನೇ ಡಿ.ಕೆ ಶಿವಕುಮಾರ್ ಮಾಡುತ್ತಿದ್ದಾರೆ. ಪೋಸ್ಟರ್ ಅಂಟಿಸಿ ‌ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಪತ್ನಿಯ ಚಿತ್ರವನ್ನು ಪೋಸ್ಟರ್‌ನಲ್ಲಿ ಹಾಕಿದ್ದಾರೆ. ಹಾಗೆ ನೋಡಿದರೆ ಈ ವ್ಯಕ್ತಿಯ ಬಗ್ಗೆ ನಾವು ಎಷ್ಟು ಪೋಸ್ಟರ್‌ಗಳನ್ನು ಅಂಟಿಸಬೇಕು. 100 ಎಕರೆ ಅಂತ ಪೋಸ್ಟರ್‌ನಲ್ಲಿ ಬರೆದು ನನ್ನ ಮತ್ತು ನನ್ನ ಪುತ್ರ ನಿಖಿಲ್ ಫೋಟೋಗಳನ್ನು ಹಾಕಿದ್ದಾರೆ. ನನ್ನದೂ ಅಂತ ಭೂಮಿ ಅಂತ ಇರುವುದೇ 46 ಎಕರೆ. 40 ವರ್ಷಗಳ ಹಿಂದೆ ಕಷ್ಟಪಟ್ಟು ಖರೀದಿ ಮಾಡಿರುವ ಜಮೀನು ಅದು. ಅದು ಬಿಟ್ಟು ನನ್ನ ಹೆಸರಿನಲ್ಲಿ ಯಾವ ಜಮೀನು ಇಲ್ಲ. ನೂರು ಎಕರೆ ಎಲ್ಲಿದೆ ಎಂದು ಅವರು ತೋರಿಸಲಿ. ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ಭೂಮಿ ಖರೀದಿಸಿದ್ದಾರೆ. ಅದಕ್ಕೆ ಇನ್ನೂ ಯಾವನೋ ಒಬ್ಬನ ಫೋಟೋ ಹಾಕಿ ಅಂಟಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

HD Kumaraswamy on DKS : ಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ..! #pratidhvani

ಸತ್ತವರ ಹೆಬ್ಬಟ್ಟು ಒತ್ತಿಸಿಕೊಂಡು ಭೂಮಿ ಲಪಟಾಯಿಸಿದ ವ್ಯಕ್ತಿ

ಮಾತು ಮುಂದುವರಿಸಿದ ಅವರು, ನಿಮಗೆ ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಗೊತ್ತಿರಬಹುದು. ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಂಡು ಭೂಮಿ ಲೂಟಿ ಹೊಡೆದ ಕೆಟ್ಟ ಚರಿತ್ರೆ ಈ ವ್ಯಕ್ತಿಯದು. ಬೆನ್ನಿಗಾನಹಳ್ಳಿಯಲ್ಲಿ ಸತ್ತವರ ಹೆಬ್ಬಟ್ಟು ಒತ್ತಿಸಿಕೊಂಡು ಭೂಮಿ ಲಪಟಾಯಿಸಿದ ಈ ವ್ಯಕ್ತಿ ಇವತ್ತು ತನ್ನ ಚೇಲಾಗಳಿಂದ ಪೋಸ್ಟರ್ ಹಾಕಿಸಿದ್ದಾರೆ. ಜನಕ್ಕೆ ಗೊತ್ತಿದೆ, ನಾನು ಏನು? ಈ ವ್ಯಕ್ತಿಯ ಯೋಗ್ಯತೆ ಏನು ಎಂದು. ಮುಖ್ಯಮಂತ್ರಿ ಆಗಿರುವ ವ್ಯಕ್ತಿಗೆ ಒಂದು ಸ್ಟ್ಯಾಂಡರ್ಡ್ ಬೇಡವಾ? ಸ್ಟ್ಯಾಂಡರ್ಡ್ ಇಲ್ಲದ ವ್ಯಕ್ತಿಯ ನಡವಳಿಕೆಯಿಂದಾಗಿ ರಾಜ್ಯ ಯಾವ ದಿಕ್ಕಿಗೆ ಹೋಗುತ್ತದೆ ಅನ್ನುವುದನ್ನು ರಾಜ್ಯದ ಜನತೆಯೇ ಆಲೋಚನೆ ಮಾಡಬೇಕು ಎಂದರು.

ಇದು ಡಿಕೆಶಿ ವಿಕೃತಿ 

ಆರಂಭದಿಂದಲೂ ಇವರ ಹಿನ್ನೆಲೆಯೇ ಇದೇ ಆಗಿದೆ. ಈ ಚಾಳಿಯಲ್ಲಿ ಬಂದ ವ್ಯಕ್ತಿ‌ ಸಿಎಂ ಆದ ಮೇಲೂ ಸಿಎಂ ಕುರ್ಚಿಗೆ ಗೌರವ ಕೊಡೋದು ಬೇಡವೇ? ಪೋಸ್ಟರ್ ಹಾಕಿಕೊಂಡು ಅಪಪ್ರಚಾರ ಮಾಡ್ತಾ ಇದ್ದಾರೆ. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿ.ವೈ.ವಿಜಯೇಂದ್ರ ಅವರ ವಿರುದ್ಧವೂ ಪೋಸ್ಟರ್ ಹಾಕಿಸಿದ್ದಾರೆ. ಆಯಿತು, ನಾವು ತಪ್ಪು ಮಾಡಿದ್ದರೆ ಅಧಿಕಾರಿಗಳಿಗೆ ಹೇಳಿ ಕ್ರಮ ಕೈಗೊಳ್ಳಲು ಹೇಳಿ. ಸುಮ್ಮನೆ ಯಾಕೆ ಪೋಸ್ಟರ್ ಹಾಕಿದ್ದೀರಾ? ಇಲ್ಲಿವರೆಗೂ ಕಾಂಗ್ರೆಸ್ ಪಕ್ಷದ ಶಾಸಕರು, ಮಂತ್ರಿಗಳದ್ದು ನಡೆದು ಹೋಯಿತು. ನನ್ನನ್ನು ಹನಿಟ್ರ್ಯಾಪ್ ಮಾಡಿಸಲು ಸಂಚು ರೂಪಿಸಿದ್ದರು ಎಂದು ಸಚಿವರೊಬ್ಬರೇ ಆರೋಪಿಸಿದ್ದರು. ವಿಧಾನಸಭೆ ಕಲಾಪದಲ್ಲಿ ನಡೆದಿದ್ದನ್ನು ಇಡೀ ರಾಜ್ಯವೇ ನೋಡಿತು. ಕೊನೆಗೆ ಅವರ ಬಾಯಿ ಮುಚ್ಚಿಸಿದರು. ಸತ್ಯ ಹೇಳುತ್ತೇನೆ ಎಂದ ಅವರು ಕೊನೆಗೆ ಬಾಯಿ ತೆಗೆಯಲಿಲ್ಲ. ಹಾಳಾಗಿ ಹೋಗಲಿ, ಮುಖ್ಯಮಂತ್ರಿ ಆಗಿದ್ದಾರೆ, ಮುಂದೆ ಎಲ್ಲವೂ ನಿಲ್ಲುತ್ತದೆ ಎಂದುಕೊಂಡಿದ್ದೆ. ಇವರ ಚಾಳಿ ಬಿಡುವ ಹಾಗೆ ಕಾಣುತ್ತಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.

Prakash Raj : ಆರೋಪಿ ಚಿನ್ನಯ್ಯ ಆರೋಪಕ್ಕೆ ಉತ್ತರ ಕೊಟ್ಟ ನಟ ಪ್ರಕಾಶ್ ರಾಜ್..! #pratidhvani

ನನ್ನ ಬದುಕು ತೆರೆದ ಪುಸ್ತಕ, ಹೆದರುವ ಪ್ರಶ್ನೆಯೇ ಇಲ್ಲ

ನನ್ನ ಬದುಕು ತೆರದ ಪುಸ್ತಕ. ನನ್ನ ಬಗ್ಗೆ ನನ್ನ ಕಾರ್ಯಕರ್ತರಿಗೆ, ಜನತೆಗೆ ಗೊತ್ತು. ಇಂತಹ ಬೆದರಿಕೆ, ಅಪಪ್ರಚಾರಕ್ಕೆ ಹೆದರುವ ಪ್ರಶ್ನೆ ಇಲ್ಲ. ಈ ಪೋಸ್ಟರ್‌ಗಳಿಗೆ ಬೆದರುವ ಪ್ರಶ್ನೆಯೇ ಇಲ್ಲ. ಜನರಿಗಾಗಿ, ರೈತರಿಗಾಗಿ ನಮ್ಮ ಪಕ್ಷದ ಹೋರಾಟ ಮುಂದುವರಿಯುತ್ತದೆ. ಬಿಡದಿ ಟೌನ್ ಶಿಪ್ ನನ್ನ ಕಾಲದಲ್ಲಿ ಮಾಡಲು ಹೊರಟಿದ್ದು ನಿಜ. ಜನ ವಿರೋಧ ಮಾಡಿದರು. ಅವರಿಗೇ ಬೇಡದ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟೆ. ನಾನು ಮಾಡಲೇಬೇಕು ಅಂತಿದ್ದರೆ ಎರಡನೇ ಬಾರಿ ಸಿಎಂ ಆಗಿದ್ದಾಗ ಮಾಡುತ್ತಿದ್ದೆ. ಅಂತಹ ಕೆಲಸ ನಾನು ಮಾಡಲಿಲ್ಲ. ನನ್ನ ಹೆಸರು ಹೇಳಿಕೊಂಡು ಭೂಮಿ ಲಪಟಾಯಿಸಲು ಹೊರಟಿದ್ದಾರೆ. ಉದ್ದೇಶ ಒಳ್ಳೆಯದು ಇದ್ದರೆ ಬೆಂಬಲ ‌ಕೊಡೋಣ. ಇವರು ಯಾವುದೇ ಕೆಲಸ ಕೈಗೆತ್ತಿಕೊಂಡರೂ ಎಷ್ಟು ದುಡ್ಡು ಹೊಡೆಯಬಹುದು ಎಂದು ನೋಡುತ್ತಾರೆ. ಇಂತಹ ವ್ಯಕ್ತಿ ಬಗ್ಗೆ ನಾನು ಎಷ್ಟು ಸಾರಿ ಮಾತಾಡಲಿ ಎಂದು ಡಿ.ಕೆ ಶಿವಕುಮಾರ್‌ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.

Actor Prakash Raj : ಪ್ರಶ್ನೆ ಕೇಳುವವರನ್ನು ಹಿಂದೂ ವಿರೋಧಿ ಅಂದ್ರೆ ಏನರ್ಥ? ಈ ಬಗ್ಗೆ ಮಾತನಾಡಲೇಬೇಕು#pratidhvani

 

Previous Post

ಚಿನ್ನಯ್ಯ ಜೊತೆ ಮಾತನಾಡಿದ್ದು ನಿಜನಾ..? ಪ್ರಕಾಶ್ ರಾಜ್ ಕೊಟ್ಟ ಉತ್ತರವೇನು..?

Next Post

ರಾಜ್ಯದ ಮಾವು ಬೆಳೆಗಾರರ ಸಂಕಷ್ಟ: ಕೇಂದ್ರ ಕೃಷಿ ಸಚಿವರಿಗೆ ಕುಮಾರಸ್ವಾಮಿ ಪತ್ರ

Related Posts

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?
Top Story

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?

by ಪ್ರತಿಧ್ವನಿ
July 25, 2026
0

ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮದ ವಿರುದ್ಧ 35 ದಿನಗಳ ಕಾಲ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಯಶಸ್ವಿಯಾಗಿ ಅಂತ್ಯಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ...

Read moreDetails
ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

July 25, 2026
ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

July 25, 2026
ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

July 25, 2026
ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

July 25, 2026
Next Post
ರಾಜ್ಯದ ಮಾವು ಬೆಳೆಗಾರರ ಸಂಕಷ್ಟ: ಕೇಂದ್ರ ಕೃಷಿ ಸಚಿವರಿಗೆ ಕುಮಾರಸ್ವಾಮಿ ಪತ್ರ

ರಾಜ್ಯದ ಮಾವು ಬೆಳೆಗಾರರ ಸಂಕಷ್ಟ: ಕೇಂದ್ರ ಕೃಷಿ ಸಚಿವರಿಗೆ ಕುಮಾರಸ್ವಾಮಿ ಪತ್ರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada