• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕೆಂದು ಸಿದ್ದರಾಮಯ್ಯ ಅವರಿಗೆ ಎಐಸಿಸಿ ನಾಯಕರಿಂದ ರಾಜೀನಾಮೆಗೆ ಸೂಚನೆ..

ಪ್ರತಿಧ್ವನಿ by ಪ್ರತಿಧ್ವನಿ
May 26, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..
Share on WhatsAppShare on FacebookShare on Telegram

ಬೆಂಗಳೂರು : ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಮ್ಮತಿಸಿದ್ದಾರೆ ಎನ್ನಲಾಗಿದೆ.

ADVERTISEMENT
Karnataka Power Tussle : ನಾಯಕತ್ವ ಬದಲಾವಣೆ ಇಲ್ಲ, ಆದ್ರೆ ಟ್ವಿಸ್ಟ್ ಇದೆ..!  #dkshivakumar #siddaramaiah

ಇದರೊಂದಿಗೆ ಕರ್ನಾಟಕದಲ್ಲಿ ಕಳೆದ ಹಲವು ತಿಂಗಳಿನಿಂದ ಕೇಳಿ ಬರುತ್ತಿದ್ದ ನಾಯಕತ್ವ ಬಿಕ್ಕಟ್ಟಿನ ಗೊಂದಲಕ್ಕೆ ಪೂರ್ಣ ವಿರಾಮ ಬೀಳಲಿದೆ. ಗುರುವಾರ ಕರ್ನಾಟಕದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಲೋಕಭವನದಲ್ಲಿ ಭೇಟಿಯಾಗಲಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಇದರೊಂದಿಗೆ ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ರಾಜಕಾರಣದಲ್ಲಿ ಮಿಂಚಿದ್ದ ಅಹಿಂದ ನಾಯಕನ ರಾಜಕಾರಣವು ಇನ್ನು ಮುಂದೆ ಬಹುತೇಕ ಮಗ್ಗಲು ಬದಲಿಸಿದಂತಾಗಲಿದೆ.

ಮಂಗಳವಾರ ನವದೆಹಲಿಯ ಕಾಂಗ್ರೆಸ್ ಕಚೇರಿ ಇಂದಿರರಾಭವನದಲ್ಲಿ ದಿನಪೂರ್ತಿ ನಡೆದ ಸರಣಿ ಸಭೆಯಲ್ಲಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಲು ಎಐಸಿಸಿ ವರಿಷ್ಠರು ಗಟ್ಟಿ ನಿರ್ಧಾರ ಮಾಡಿದ್ದಾರೆ. ಶತಾಯಗತಾಯ 2028ರ ವಿಧಾನಸಭೆ ಚುನಾವಣೆಯವರಿಗೂ ತಾವೇ ಪೂರ್ಣ ಅವಧಿಗೆ ಅಧಿಕಾರದಲ್ಲಿ ಮುಂದುವರೆಯಲು ನಡೆಸಿದ ಎಲ್ಲಾ ಕಸರತ್ತುಗಳು ಕೈಹಿಡಿಯಲಿಲ್ಲ.

ಇದನ್ನೂ ಓದಿ : ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕೆಂದು ಸಿದ್ದರಾಮಯ್ಯ ಅವರಿಗೆ ಎಐಸಿಸಿ ನಾಯಕರು ಸೂಚಿಸಿದ ಹಿನ್ನೆಲೆಯಲ್ಲಿ ಕೊನೆಗೆ ಯಾವುದೇ ದಾರಿ ಕಾಣದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ‌ಒಲ್ಲದ ಮನಸ್ಸಿನಿಂದ ಸಮ್ಮತಿಸಿದ್ದಾರೆ ಎಂಬುವುದು ಮೂಲಗಳ ಮಾಹಿತಿಯಾಗಿದೆ.

ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಂತರ ಸಿದ್ದರಾಮಯ್ಯ ಅವರ ಜೊತೆ ಇನ್ನೊಂದು ಸುತ್ತಿನ ಚರ್ಚೆ ನಡೆಸಿದ ಬಳಿಕ ಪತ್ರಿಕಕಾಗೋಷ್ಠಿಯಲ್ಲಿ ರಾಜೀನಾಮೆ ನೀಡುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂಬುವ ಮಾಹಿತಿ ಲಭ್ಯವಾಗಿದೆ.

ಆದರೆ ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ, ಸಿಎಂ ಕಚೇರಿ ಮೂಲಗಳ ಪ್ರಕಾರ ಬುಧವಾರ ಸಿಎಂ ಪತ್ರಿಗೋಷ್ಠಿ ನಡೆಸಿ ರಾಜೀನಾಮೆ ನೀಡುವ ಬಗ್ಗೆ ತಿಳಿದು ಬಂದಿದೆ. ಈಗಾಗಲೇ ಲೋಕಭವನಕ್ಕೆ ರಾಜ್ಯಪಾಲರ ವಿಶೇಷ ಕರ್ತವ್ಯ ಅಧಿಕಾರಿಗೆ ಮಾಹಿತಿ ನೀಡಲಾಗಿದ್ದು ಗುರುವಾರ ರಾಜ್ಯಪಾಲರ‌ ಸಮಯ ಅವಕಾಶವನ್ನು ಕೇಳಲಾಗಿದೆ.

ಇದಕ್ಕೂ ಮುನ್ನ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ,ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಎಲ್ಲರೂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಸುದೀರ್ಘವಾದ ಚರ್ಚೆ ನಡೆಸಿದ್ದರು.

Kichcha Sudeeep : ಕಿಚ್ಚ ನಿರ್ದೇಶನದ ಚಿತ್ರ ಯಾವುದು ಗೊತ್ತಾ..? #sandalwood #kichchasudeep #kichcha

ಬೆಳಿಗ್ಗೆ 11 ಗಂಟೆಯಿಂದ ಆರಂಭವಾದ ಸಭೆಯಲ್ಲಿ ನಾಯಕತ್ವ ಗೊಂದಲವೇ ಪ್ರಮುಖ ಚರ್ಚೆಯ ವಿಷಯವಾಗಿತ್ತು. ನಾನು ಈ ಅವಧಿಗೂ ಅಧಿಕಾರವನ್ನು ಪೂರ್ಣಗೊಳಿಸುತ್ತೇನೆ 2028ರ ಚುನಾವಣೆಯಲ್ಲಿ ನೀವು ಯಾರನ್ನಾದರೂ ಮುಖ್ಯಮಂತ್ರಿಯಾಗಿ ಬಿಂಬಿಸಿ ನನ್ನ ಅಭ್ಯಂತರವಿಲ್ಲ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಜವಾಬ್ದಾರಿ ಎಂದು ಸಿದ್ದರಾಮಯ್ಯ ವರಿಷ್ಠರಿಗೆ ಅಭಯ ನೀಡಿದ್ದರು.

ಆದರೆ ಇದನ್ನು ಒಪ್ಪದ ಹೈಕಮಾಂಡ್ ನಾಯಕರು 2023ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಗುವ ಮುನ್ನ ನೀವು ಕೊಟ್ಟ ಮಾತನ್ನು ನೆನಪಿಸಿಕೊಳ್ಳಿ ಒಪ್ಪಂದದ ಪ್ರಕಾರ ಅಧಿಕಾರ ಹಸ್ತಾಂತರ ಆಗಬೇಕು. ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಾವು ನಿರ್ಧರಿಸುತ್ತೇವೆ ನಿಮ್ಮ ಮಾತಿನಂತೆ ನೀವು ನಡೆದುಕೊಳ್ಳಿ ಎಂದು ಸಿದ್ದರಾಮಯ್ಯನವರಿಗೆ ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಕಡ್ಡಿ ಮುರಿದಂತೆ ಹೇಳಿದ್ದಾರೆ ಎನ್ನಲಾಗಿದೆ.

ಒಂದು ಹಂತದಲ್ಲಿ ಸಿದ್ದರಾಮಯ್ಯನವರಿಗೆ ರಾಜ್ಯಸಭೆ ಹಾಗೂ ಪುತ್ರ ಯತೀದ್ರಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಪ್ರಮುಖ ಖಾತೆ ನೀಡುವ ಬಗ್ಗೆಯೂ ಪ್ರಸ್ತಾಪವಾಗಿದೆ. ಆದರೆ ಸಿದ್ದರಾಮಯ್ಯ ಇದನ್ನು ಒಪ್ಪದೇ ಅಧಿಕಾರದಲ್ಲಿ ನಾನೇ ಮುಂದುವರಿಯುತ್ತೇನೆ ಎಂದು ಹಠಮಾರಿ ಧೋರಣೆ ತೋರಿದ್ದಾರೆ. ಈ ನಡುವೆಯೇ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಮಧ್ಯ ಪ್ರವೇಶ ಮಾಡುವ ಮೂಲಕ ಕಳೆದ 2023ರ ಚುನಾವಣೆಯಲ್ಲಿ ಹಾಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಕಡೆಗಣಿಸಲಾಗುವುದು ಎಂಬ ಸಂದೇಶವನ್ನು ಖರ್ಗೆ ಮೂಲಕ ತಲುಪಿಸಿದ್ದರು.

ಡಿಕೆ ಶಿವಕುಮಾರ್ ಕೂಡ ಪಕ್ಷಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರವನ್ನು ಕಡೆಗಣಿಸಲಾಗಲ್ಲಾ. ಉಳಿದ ಎರಡು ವರ್ಷದ ಅವಧಿಗೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಲೇಬೇಕೆಂದು ಖಡಕ್‌ ಸೂಚನೆ ರವಾನಿಸಿದ್ದರು.

ಈ ಮೊದಲು ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರನ್ನು ಬದಲಿಸಲು ಹಿಂದೆ ಮುಂದೆ ನೋಡುತ್ತಿದ್ದ ರಾಹುಲ್ ಗಾಂಧಿ ಯಾವಾಗ ತಮ್ಮ ತಾಯಿ ಮತ್ತು ಸಹೋದರಿ ಮಧ್ಯಪ್ರವೇಶ ಮಾಡಿರಫ ವಿಧಿ ಇಲ್ಲದೆ ಸಿಎಂ ಅವರಿಗೆ ಅಧಿಕಾರ ಬಿಟ್ಟುಕೊಡಬೇಕು ಎಂಬ ಹಿತೋಪದೇಶ ಮಾಡಿದ್ದಾರೆ.

ಕೊನೆಗೆ ಸಿದ್ದರಾಮಯ್ಯ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ ನಾನು ನನ್ನ ಸ್ಥಾನವನ್ನು ಬಿಟ್ಟುಕೊಡುತ್ತೇನೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ. ಆದರೂ ಇದಕ್ಕೂ ಒಪ್ಪದ ವರಿಷ್ಠರು ಈ ವಾರದೊಳಗೆ ನೀವು ರಾಜೀನಾಮೆ ನೀಡಿ ಅಧಿಕಾರ ಹಸ್ತಾಂತರವನ್ನು ಸುಸೂತ್ರವಾಗಿ ನಡೆಸಿಕೊಡಬೇಕೆಂದು ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.

ಇಂದಿರಾ ಭವನದಿಂದ ಅಸಮಾಧಾನದಿಂದ ನಿರ್ಗಮಿಸಿದ ಸಿದ್ದರಾಮಯ್ಯ ಅಲ್ಲಿಂದ ನೇರವಾಗಿ ದೆಹಲಿಯಲ್ಲಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ನಿವಾಸದಲ್ಲಿ ತಮ್ಮ ಆಪ್ತ ಸಚಿವರ ಜೊತೆ ರಹಸ್ಯ ಮಾತುಕತೆ ನಡೆಸಿದರು. ಸಚಿವರಾದ ಡಾ. ಜಿ ಪರಮೇಶ್ವರ್. ಎಚ್‌ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಎಂ ಬಿ ಪಾಟೀಲ್, ಹೆಚ್‌.ಕೆ. ಪಾಟೀಲ್ ಹಾಗೂ ಕಾನೂನು ಸಲಹೆಗಾರ ಪೊನ್ನಣ್ಣ ಅವರ ಜೊತೆ ಗುಪ್ತವಾಗಿ ಸಭೆ ನಡೆಸಿ ಹೈಕಮಾಂಡ್ ನಿರ್ಧಾರದ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಸಿಎಂ ಆಪ್ತರು ರಾಜೀನಾಮೆ ನೀಡುವುದು ಬೇಡ ಶಾಸಕಾಂಗ ಸಭೆ ನಡೆಯಲಿ ಅಲ್ಲಿ ಯಾರಿಗೆ ಹೆಚ್ಚಿನ ಬೆಂಬಲ ಇರುತ್ತದೆಯೋ ಅವರೇ ಮುಂದುವರಿಯಲಿ, ಒಂದು ವೇಳೆ ಹೆಚ್ಚಿನ ಶಾಸಕರು ಡಿಕೆ ಶಿವಕುಮಾರ್ ನಾಯಕತ್ವಕ್ಕೆ ಬೆಂಬಲ ಸೂಚಿಸಿದರೆ ಅವರೇ ಮುಖ್ಯಮಂತ್ರಿ ಆಗಲಿ, ಆದರೆ ಅಲ್ಲಿ ತನಕ ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಾರದೆಂದು ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿದ್ದಾರೆ. ಆದರೆ ಇದನ್ನು ಒಪ್ಪದ ಸಿಎಂ ಹೈಕಮಾಂಡ್ ಏನು ಹೇಳಿದಿಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿ ಬೆಂಗಳೂರಿನತ್ತ ಪಯಣ ಬೆಳೆಸಿದ್ದಾರೆ.

Previous Post

ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ದೆಹಲಿ ಸಭೆ ಬಳಿಕ ಕಾಂಗ್ರೆಸ್‌ನಲ್ಲಿ ಕುತೂಹಲ

Next Post

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ದೆಹಲಿ ಸಭೆ ಬಳಿಕ ಕಾಂಗ್ರೆಸ್‌ನಲ್ಲಿ ಕುತೂಹಲ

ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ದೆಹಲಿ ಸಭೆ ಬಳಿಕ ಕಾಂಗ್ರೆಸ್‌ನಲ್ಲಿ ಕುತೂಹಲ

May 26, 2026
ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

May 26, 2026
ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

ಅರಣ್ಯ ಒತ್ತುವರಿಗೆ ಖಡಕ್ ಎಚ್ಚರಿಕೆ; 2015 ಬಳಿಕದ ಅತಿಕ್ರಮಣ ತೆರವಿಗೆ ಖಂಡ್ರೆ ಆದೇಶ

May 26, 2026
Next Post
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada