• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, May 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಮರಾಠಿ ಭಾಷೆಗೆ ರಿಮೇಕ್‌ ಆದ ಕನ್ನಡದ ‘ಸು ಫ್ರಮ್‌ ಸೋ’

ಪ್ರತಿಧ್ವನಿ by ಪ್ರತಿಧ್ವನಿ
May 25, 2026
in ಸಿನಿಮಾ
0
ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?
Share on WhatsAppShare on FacebookShare on Telegram

ಕನ್ನಡದ ಸೂಪರ್‌ಹಿಟ್‌ಗೆ ಮತ್ತೊಂದು ಗರಿ; ‘ತುಂಬಾಡ್ಚಿ ಮಂಜುಳಾ’ ಹೆಸರಿನಲ್ಲಿ ಮರಾಠಿಗೆ ಎಂಟ್ರಿ. ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ‘ಸು ಫ್ರಮ್‌ ಸೋ’ ಇದೀಗ ಮರಾಠಿ ಭಾಷೆಗೆ ರಿಮೇಕ್‌ ಆಗುತ್ತಿದೆ. ಗ್ರಾಮೀಣ ಹಿನ್ನೆಲೆ, ಹಾರರ್‌-ಕಾಮಿಡಿ ಶೈಲಿ ಮತ್ತು ವಿಭಿನ್ನ ಕಥಾಹಂದರದಿಂದ ಪ್ರೇಕ್ಷಕರ ಮನಗೆದ್ದಿದ್ದ ಈ ಸಿನಿಮಾ ಈಗ ‘ತುಂಬಾಡ್ಚಿ ಮಂಜುಳಾ’ ಹೆಸರಿನಲ್ಲಿ ಮರಾಠಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ADVERTISEMENT
Karnataka Politics shifts to Delhi : "ಹೈ" ಅಂಗಳದಲ್ಲಿ ಗೇಮ್ ಪ್ಲ್ಯಾನ್..#dkshivakumar #siddaramaiah

ನಿರ್ದೇಶಕ ಜೆ.ಪಿ. ತುಮಿನಾಡ್‌ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಸು ಫ್ರಮ್‌ ಸೋ’ ಸಿನಿಮಾ ಬಿಡುಗಡೆಯಾದ ಬಳಿಕ ಭಾರೀ ಜನಪ್ರಿಯತೆ ಪಡೆದಿತ್ತು. ಕರಾವಳಿ ಭಾಗದ ಗ್ರಾಮೀಣ ಸೊಗಡು, ಅತೀಂದ್ರಿಯ ಅಂಶಗಳು ಮತ್ತು ಹಾಸ್ಯದ ಮಿಶ್ರಣ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಹಿಟ್‌ ಮಾಡಿತ್ತು. ಶನೀಲ್‌ ಗೌತಮ್‌, ರಾಜ್‌ ಬಿ. ಶೆಟ್ಟಿ, ಸಂಧ್ಯಾ ಅರಕೆರೆ ಸೇರಿದಂತೆ ಹಲವು ಕಲಾವಿದರ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು.

Siddaramaiah Went Delhi: HAL​ನಿಂದ ನವದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ, ಸಚಿವ ಪರಮೇಶ್ವರ್

ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಇದೀಗ ಮರಾಠಿಯಲ್ಲಿ ರಿಮೇಕ್‌ ಆಗುತ್ತಿದ್ದು, ‘ತುಂಬಾಡ್ಚಿ ಮಂಜುಳಾ’ ಎಂಬ ಟೈಟಲ್‌ ಈಗಾಗಲೇ ಸಿನಿಪ್ರೇಕ್ಷಕರ ಗಮನ ಸೆಳೆದಿದೆ. ವಿಧವ್‌ ಕೊರೇಗಾಂವ್ಕರ್‌ ನಿರ್ದೇಶನದ ಈ ಚಿತ್ರಕ್ಕೆ ರಿಷಿಕೇಶ್‌ ತುರಾಯಿ ಕಥೆ ಬರೆದಿದ್ದಾರೆ. ಝೀ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ಉಮೇಶ್‌ ಕುಮಾರ್‌ ಬನ್ಸಲ್‌ ಮತ್ತು ಭವೇಶ್‌ ಜನವಲೆಕರ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಮಕರಂದ ಅನಾಸ್ಪುರೇ, ಜಿತೇಂದ್ರ ಜೋಶಿ, ಓಂ ಭುತ್‌ಕರ್‌, ಯೋಗೇಶ್‌ ಶಿರ್ಸಾಟ್‌ ಸೇರಿದಂತೆ ಮರಾಠಿ ಚಿತ್ರರಂಗದ ಖ್ಯಾತ ಕಲಾವಿದರು ನಟಿಸುತ್ತಿದ್ದಾರೆ. ನಟಿ ಸಾಯಿ ತಾಮ್ಹಂಕರ್‌ ಪಾತ್ರದ ಬಗ್ಗೆ ವಿಶೇಷ ಕುತೂಹಲ ಮೂಡಿದ್ದು, ಚಿತ್ರದ ಟ್ರೈಲರ್‌ ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

 

‘ಸು ಫ್ರಮ್‌ ಸೋ’ ಸಿನಿಮಾ ಕನ್ನಡದಲ್ಲಿ ಭಾರೀ ಯಶಸ್ಸು ಕಂಡ ನಂತರ ತಮಿಳು ಸೇರಿದಂತೆ ಇತರೆ ಭಾಷೆಗಳಲ್ಲಿಯೂ ರಿಮೇಕ್‌ ಹಕ್ಕುಗಳ ಬೇಡಿಕೆ ಹೆಚ್ಚಾಗಿತ್ತು. ಈಗ ಮರಾಠಿ ರಿಮೇಕ್‌ ಅಧಿಕೃತವಾಗಿ ಘೋಷಣೆಯಾಗಿರುವುದು ಕನ್ನಡ ಕಥೆಗಳಿಗೆ ರಾಷ್ಟ್ರ ಮಟ್ಟದಲ್ಲಿ ಸಿಗುತ್ತಿರುವ ಸ್ವೀಕಾರದ ಸಂಕೇತವಾಗಿದೆ ಎಂದು ಸಿನಿ ವಲಯ ಅಭಿಪ್ರಾಯಪಟ್ಟಿದೆ. ‘ತುಂಬಾಡ್ಚಿ ಮಂಜುಳಾ’ ಸಿನಿಮಾ ಜೂನ್‌ 5ರಂದು ಮಹಾರಾಷ್ಟ್ರದಾದ್ಯಂತ ಬಿಡುಗಡೆಯಾಗಲಿದೆ. ಕನ್ನಡದ ಮೂಲ ಕಥೆಯ ಮಜಾ ಉಳಿಸಿಕೊಂಡೇ ಮರಾಠಿ ನೈಜತೆಯನ್ನು ಸೇರಿಸುವ ಪ್ರಯತ್ನ ಚಿತ್ರತಂಡ ಮಾಡಿದೆ ಎನ್ನಲಾಗುತ್ತಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Tags: Coastal Karnataka StoryFilm RemakeHorror ComedyIndian CinemaJP Thuminadkannada cinemaKannada Film IndustryMarathi CinemaMarathi RemakeRaj B ShettySandhya ArakereSouth Indian cinema.SU From SOTumbadchi ManjulaZee Studios
Previous Post

ಬಿಪಿಎಲ್ ಕುಟುಂಬಗಳಿಗೆ ಶಾಕ್: ಅಕ್ಕಿ ಪ್ರಮಾಣ ಕಡಿತದ ಹಿಂದೆ ಏನು ಕಾರಣ?

Related Posts

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು
ಸಿನಿಮಾ

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

by ಪ್ರತಿಧ್ವನಿ
May 21, 2026
0

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರ ದಾಂಪತ್ಯ ಜೀವನದ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಹಿನ್ನೆಲೆಯಲ್ಲಿ ನಟ ದರ್ಶನ್...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

May 19, 2026
ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

May 19, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada