ಬೆಂಗಳೂರು : ತಮಿಳುನಾಡಿನ ರಾಜಕೀಯದಲ್ಲಿ ಕ್ಷಣಕ್ಕೊಂದರಂತೆ ಬೆಳವಣಿಗೆಗಳು ನಡೆಯುತ್ತಿವೆ. ಬಹುಮತ ಸಾಬೀತು ಪಡಿಸಲು ಅತಿಡೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಸರ್ಕಾರ ರಚನೆಗೆ ಕಸರತ್ತು ಮುಂದುವರೆಸಿದೆ. ಈ ನಡುವೆಯೇ ಡಿಎಂಕೆ ಹಾಗೂ ಎಐಎಡಿಎಮ್ ಕೆ ಮೈತ್ರಿ ಮಾತುಕತೆಯ ಚರ್ಚೆಯ ಬೆನ್ನಲ್ಲೆ ತಮಿಳುನಾಡು ತಟಸ್ಥವಾಗಿರಲು ನಿರ್ಧರಿಸುವ ಮೂಲಕ ಕುತೂಹಲ ಮೂಡಿಸಿದೆ.

ತಮಿಳುನಾಡಿನಲ್ಲಿ ಯಾವ ಪಕ್ಷ ಜೊತೆಗೂ ನಾವು ಕೈ ಜೋಡಿಸುವುದಿಲ್ಲ. ಯಾರ ಜೊತೆಗೂ ಸೇರಿ ಸರ್ಕಾರ ರಚನೆಯನ್ನೂ ಮಾಡುವುದಿಲ್ಲ. ಅಲ್ಲದೆ ಯಾರಾದರೂ ಸರ್ಕಾರ ರಚನೆಗೆ ಮುಂದಾದರೂ ಸಹ ಆ ಪಕ್ಷದ ಜೊತೆ ನಾವು ಹೋಗುವುದಿಲ್ಲ ಎಂಬ ಸಂದೇಶವನ್ನು ತಮಿಳುನಾಡು ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಸ್ಪಷ್ಟ ಪಡಿಸಿದ್ದಾರೆ.

ಇನ್ನೂ ಡಿಎಂಕೆ ಹಾಗೂ ಎಐಎಯಡಿಎಂಕೆ ಜೊತೆ ಕೈ ಜೋಡಿಸುವ ಬಗ್ಗೆ ಅಸಮಾಧಾನಗೊಂಡಿರುವ ಡಿಎಂಕೆ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಬೆಳವಣಿಗೆಗಳ ಬಳಿಕ ಲೋಕಸಭೆಯಲ್ಲಿ ಆಸನ ಬದಲಾವಣೆಗೆ ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೊಳಿ ಬೇಡಿಕೆ ಇಟ್ಟಿದ್ದಾರೆ. ಲೋಕಸಭೆಯಲ್ಲಿ ನಾವು ಮೊದಲು ಕೂರುತ್ತಿದ್ದ ಆಸನಗಳನ್ನು ಬದಲಾಯಿಸಿ, ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಸಾಕ್ಷಿ ಹೇಳಲು ತೆರಳಿದ್ದ ವ್ಯಕ್ತಿ ಗಡಿಭಾಗದಲ್ಲಿ ಶವವಾಗಿ ಪತ್ತೆ: ಜೋಡಿ ಕೊಲೆ ಪ್ರಕರಣಕ್ಕೆ ಹೊಸ ತಿರುವು!
ಕಾಂಗ್ರೆಸ್ ಪಕ್ಷದೊಂದಿಗಿನ ಡಿಎಂಕೆ ಮೈತ್ರಿ ಅಧಿಕೃತವಾಗಿ ಅಂತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದ ಡಿಎಂಕೆ ಕಾಂಗ್ರೆಸ್ ವಿರುದ್ಧ ಕೆಂಡಕಾರುತ್ತಿದೆ.

ಇನ್ನು ಮುಂದೆ ನಾವು ಕಾಂಗ್ರೆಸ್ ಸಂಸದರ ಪಕ್ಕದಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ. ನಮಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಿ ಎಂದು ಸ್ಪೀಕರ್‌ಗೆ ಅಧಿಕೃತ ಪತ್ರ ಬರೆದು ಸಂಚಲನ ಸೃಷ್ಟಿಸಿದ್ದಾರೆ. ಸದನಲ್ಲಿ ನಮಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಆಸನ ಹಂಚಿಕೆ ಮಾಡಿ ಎಂದು ಕೋರಿದ್ದಾರೆ. ಸದ್ಯ ತಮಿಳುನಾಡು ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಸಮೀಕರಣ ಬದಲಾಗಿದೆ. ಕಾಂಗ್ರೆಸ್ ಪಕ್ಷವು ವಿಜಯ್ ಅವರಿಗೆ ಬೆಂಬಲ ಸೂಚಿಸಿದ್ದರಿಂದ ಡಿಎಂಕೆ ಅಸಮಾಧಾನವಾಗಿದ್ದು, ಇದು ಇಂಡಿಯಾ ಮೈತ್ರಿ ಕೂಟಕ್ಕೆ ದೊಡ್ಡ ಏಟು ಕೊಟ್ಟಂತಾಗಿದೆ.






