• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

4000 ಕೋಟಿ ‘ರಾಮಾಯಣ’ ಮೆಗಾ ಪ್ರಾಜೆಕ್ಟ್: ಕಲಾವಿದರ ಭರ್ಜರಿ ಸಂಭಾವನೆ ಬಹಿರಂಗ

ಪ್ರತಿಧ್ವನಿ by ಪ್ರತಿಧ್ವನಿ
April 4, 2026
in Uncategorized
0
ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ: ವಿವಾದಕ್ಕೆ ಕಾರಣ
Share on WhatsAppShare on FacebookShare on Telegram

ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ ಸಿನಿಮಾ ಇದೀಗ ಟೀಸರ್ ಬಿಡುಗಡೆ ಬಳಿಕ ಮತ್ತೊಮ್ಮೆ ಸುದ್ದಿಯಲ್ಲಿದೆ. ನಿರ್ದೇಶಕ ನಿತೇಶ್ ತಿವಾರಿ ರೂಪಿಸುತ್ತಿರುವ ಈ ಮಹಾಕಾವ್ಯ ಆಧಾರಿತ ಚಿತ್ರವು ಸುಮಾರು 4000 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದು, ಅತ್ಯಂತ ದುಬಾರಿ ಭಾರತೀಯ ಸಿನಿಮಾಗಳಲ್ಲಿ ಒಂದಾಗಲಿದೆ.ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ, ಚಿತ್ರದಲ್ಲಿನ ಕಲಾವಿದರ ಸಂಭಾವನೆಗಳ ವಿವರಗಳು ಹೊರಬಂದಿದ್ದು, ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.

ADVERTISEMENT
HD Kumaraswamy : ಅಧಿಕಾರ ಇದ್ದಾಗ ನಡೆಯುವ ಚುನಾವಣೆಗಳಲ್ಲಿ ಆ ಅಧಿಕಾರ ಪಕ್ಷದವರೇ ಗೆಲ್ಲೋದು..! #pratidhvani

ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಣಬೀರ್ ಕಪೂರ್ ಎರಡು ಭಾಗಗಳಿಗೆ ಒಟ್ಟು ಸುಮಾರು 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಮೊದಲ ಭಾಗಕ್ಕೆ 75 ಕೋಟಿ ಹಾಗೂ ಎರಡನೇ ಭಾಗಕ್ಕೂ 75 ಕೋಟಿ ನೀಡಲಾಗುತ್ತಿದೆ ಎಂದು ವರದಿಯಾಗಿದೆ.ರಾವಣನಾಗಿ ನಟಿಸುತ್ತಿರುವ ಯಶ್ ಪ್ರತಿ ಭಾಗಕ್ಕೆ 50 ಕೋಟಿ ರೂ. ಪಡೆದುಕೊಳ್ಳುತ್ತಿದ್ದು, ಸಹ ನಿರ್ಮಾಪಕರಾಗಿರುವುದರಿಂದ ಲಾಭದಲ್ಲೂ ಪಾಲು ಪಡೆಯಲಿದ್ದಾರೆ. ಹೀಗಾಗಿ ಅಂತಿಮವಾಗಿ ಹೆಚ್ಚಿನ ಆದಾಯ ಯಶ್ ಪಾಲಾಗುವ ಸಾಧ್ಯತೆ ಇದೆ.

HD Kumaraswamy : ಪೆಟ್ರೋಲ್​ ಬಂಕ್​ ಮುಂದೆ ಕಿಮೀಗಟ್ಟಲೆ ಆಟೋಗಳ ಕ್ಯೂ HDK ರಿಯಾಕ್ಷನ್‌..! #pratidhvani

ಸೀತೆಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಸಾಯಿ ಪಲ್ಲವಿ ಸುಮಾರು 12 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಸಾಮಾನ್ಯವಾಗಿ ಕಡಿಮೆ ಸಂಭಾವನೆ ಪಡೆಯುವ ಅವರು ಈ ಸಿನಿಮಾದ ಮೂಲಕ ಭಾರಿ ಮೊತ್ತ ಗಳಿಸಿರುವುದು ಗಮನಾರ್ಹ. ಹನುಮಂತನ ಪಾತ್ರ ನಿರ್ವಹಿಸುತ್ತಿರುವ ಸನ್ನಿ ಡಿಯೋಲ್ ಇಬ್ಬಾಗಗಳಿಗೆ ಸೇರಿ ಸುಮಾರು 30 ಕೋಟಿ ರೂ. ಪಡೆದಿದ್ದಾರೆ ಎಂದು ತಿಳಿದುಬಂದಿದೆ.ಲಕ್ಷ್ಮಣನಾಗಿ ನಟಿಸಿರುವ ರವಿ ದುಬೆ ಅವರಿಗೆ ಸುಮಾರು 15 ಕೋಟಿ, ಕೈಕೇಯಿಯಾಗಿ ಕಾಣಿಸಿಕೊಳ್ಳುತ್ತಿರುವ ಲಾರಾ ದತ್ತಾ ಅವರಿಗೆ 3 ಕೋಟಿ ಹಾಗೂ ದಶರಥನ ಪಾತ್ರದ ಅರುಣ್ ಗೋವಿಲ್ ಅವರಿಗೆ 1 ಕೋಟಿ ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ.

Siddaramaiah : ದೇಶಕ್ಕೆ ಸ್ವತಂತ್ರ ತಂದುಕೊಟ್ಟಿದ್ದು ಕಾಂಗ್ರೇಸ್‌ ಪಕ್ಷ..! #congress #bjp #bagalkot

ಶೂರ್ಪನಖಿಯಾಗಿ ರಾಕುಲ್ ಪ್ರೀತ್ ಸಿಂಗ್ ಅಭಿನಯಿಸುತ್ತಿರುವುದೂ ಚಿತ್ರದ ಮತ್ತೊಂದು ವಿಶೇಷ.ಈ ಚಿತ್ರದ ಭಾರೀ ಬಜೆಟ್‌ಗೆ ಪ್ರಮುಖ ಕಾರಣಗಳಲ್ಲಿ ಒಂದು ಉನ್ನತ ಮಟ್ಟದ ವಿಸುಯಲ್ ಎಫೆಕ್ಟ್ಸ್ (VFX) ಆಗಿದೆ. ಹಾಲಿವುಡ್ ಮಟ್ಟದ ತಂತ್ರಜ್ಞಾನ ಬಳಸಿ ಚಿತ್ರ ನಿರ್ಮಾಣವಾಗುತ್ತಿದ್ದು, ಆಸ್ಕರ್ ಪ್ರಶಸ್ತಿ ವಿಜೇತ DNEG ಸಂಸ್ಥೆ ಈ ವಿಭಾಗದ ಜವಾಬ್ದಾರಿಯನ್ನು ಹೊತ್ತಿದೆ.ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ದೀಪಾವಳಿಗೆ ತೆರೆಗೆ ಬರಲಿದೆ ಎಂಬ ನಿರೀಕ್ಷೆ ಇದೆ. ಒಟ್ಟಾರೆ, ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವತ್ತ ಗಮನ ಸೆಳೆದಿದೆ.

Tags: #-pratidhvaniBig Budget Moviebollywood newsDiwali ReleaseDNEGfilm industryIndian CinemaMovie SalariesNamit MalhotraNitesh Tiwaripan india filmRakul Preet SinghRanbir Kapoorsai pallaviSunny Deolupcoming moviesVFXYash
Previous Post

ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ: ವಿವಾದಕ್ಕೆ ಕಾರಣ

Next Post

“ಒಳ್ಳೆಯ ಕಾರಣಕ್ಕೆ ಸರ್ಕಾರ ಒಂದು ದಿನವೂ ಸುದ್ದಿಯಾಗಿಲ್ಲ”: ಸಿ.ಟಿ. ರವಿ ವಾಗ್ದಾಳಿ

Related Posts

ಎಐ ಬ್ಯಾಟ್ ಚಿಪ್ ಆರೋಪಕ್ಕೆ ವೈಭವ್ ಸೂರ್ಯವಂಶಿಯ ಖಡಕ್ ಉತ್ತರ ಇಲ್ಲಿದೆ
Uncategorized

ಎಕ್ಸಿಟ್ ಪೋಲ್ ಅಂಕಿಗಳಿಗೆ ಸವಾಲು ಹಾಕಿದ ಮಮತಾ ಬ್ಯಾನರ್ಜಿ ಹೇಳಿದ್ದೇನು ?

by ಪ್ರತಿಧ್ವನಿ
April 30, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾನದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ ಹಾಗೂ ಎಕ್ಸಿಟ್...

Read moreDetails
ರವಿಬೆಳಗೆರೆ ವಿಚಾರದಲ್ಲಿ ಪ್ರತಾಪ್ ಸಿಂಹ ಕಿಡಿ: ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ

ರವಿಬೆಳಗೆರೆ ವಿಚಾರದಲ್ಲಿ ಪ್ರತಾಪ್ ಸಿಂಹ ಕಿಡಿ: ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ

April 29, 2026
ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

April 17, 2026
ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

April 17, 2026
ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

April 16, 2026
Next Post
“ಒಳ್ಳೆಯ ಕಾರಣಕ್ಕೆ ಸರ್ಕಾರ ಒಂದು ದಿನವೂ ಸುದ್ದಿಯಾಗಿಲ್ಲ”: ಸಿ.ಟಿ. ರವಿ ವಾಗ್ದಾಳಿ

“ಒಳ್ಳೆಯ ಕಾರಣಕ್ಕೆ ಸರ್ಕಾರ ಒಂದು ದಿನವೂ ಸುದ್ದಿಯಾಗಿಲ್ಲ”: ಸಿ.ಟಿ. ರವಿ ವಾಗ್ದಾಳಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada