ಬೆಂಗಳೂರು : ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಕ್ರಿಕೆಟ್ ತಂಡವು ಫೈನಲ್ ಪಂದ್ಯಕ್ಕೆ ಸಿದ್ಧವಾಗಿದೆ. ಈಗಾಗಲೇ ಸೆಮಿಫೈನಲ್‌ನಲ್ಲಿ ಆಂಗ್ಲರನ್ನು ಬಗ್ಗು ಪಡೆದಿರುವ ಸೂರ್ಯ ಕುಮಾರ್ ಯಾದವ್ ಪಡೆಯು ಇದೀಗ ನ್ಗೂಜಿಲೆಂಡ್ ತಂಡವನ್ನು ಮಣಿಸಲು ಕಾತರವಾಗಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ಗೆಲುವಿಗಾಗಿ ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಭಾರತ ತಂಡವು 2007ರ ವಿಶ್ವಕಪ್ ಮ್ಯಾಚ್‌ನಲ್ಲಿ ಚಾಂಪಿಯನ್ ಪಡೆದುಕೊಂಡಿತ್ತು. ಇದರ ನಂತರ ದಿನಗಳಲ್ಲಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಫೈನಲ್ ತಲುಪುವ ಹಂತಕ್ಕೂ ಮುನ್ನವೇ ಹಲವು ಬಾರಿ ಪ್ರಯತ್ನದ ಬಳಿಕವೂ ಗೆಲುವು ದಕ್ಕಿರಲಿಲ್ಲ. ಆದರೆ ಬಳಿಕ ಕೆಲ ವರ್ಷಗಳಾದ ಮೇಲೆ ಅಂದರೆ 2014ರಲ್ಲಿ ಫೈನಲ್‌ಗೆ ಲಗ್ಗೆಇಟ್ಟಿತ್ತು. ಆದರೆ ಸಿಂಹಳಿಯರ ವಿರುದ್ಧ ಸೋಲಿನ ಹೊಡೆತಕ್ಕೆ ಸಿಲುಕಿ ನಿರಾಸೆಗೊಳಗಾಗಿತ್ತು. ಹೀಗೆ ವಿಶ್ವಕಪ್ ವಿಚಾರದಲ್ಲಿ ಭಾರತ ಅಷ್ಟಕ್ಕಷ್ಟೇ ಎನ್ನುವ ಸ್ಥಿತಿ ಎದುರಾಗಿತ್ತು.
ಆದರೆ ಮತ್ತೆ ಕಳೆದ 2024ರಲ್ಲಿ ಭಾರತ ಕ್ರಿಕೆಟ್ ತಂಡವು ಚಾಂಪಿಯನ್ ಪಟ್ಟವನ್ನು ಪಡೆಯಿತು. ಸುಮಾರು 17 ವರ್ಷಗಳ ನಂತರದ ದಿನಗಳಲ್ಲಿ ಪುನಃ ಭಾರತವು ಎರಡನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಸುದೀರ್ಘ 17 ವರ್ಷಗಳ ಕಾಲ ಭಾರತದ ಹೋರಾಟ ನಿಜಕ್ಕೂ ಸ್ಫೂರ್ತಿದಾಯಕವಾಗಿತ್ತು. ಆದರೆ ಇದೀಗ ಅದೇ ರೀತಿಯ ಒಳ್ಳೆಯ ಅವಕಾಶ ಭಾರತ ತಂಡಕ್ಕೆ ಒದಗಿ ಬಂದಿದ್ದು, ಈ ಬಾರಿ ಹೇಗಾದರೂ ಮಾಡಿ ವಿಶ್ವಕಪ್ ಗಿಟ್ಟಿಸಿಕೊಳ್ಳಲೇಬೇಕೆಂಬ ಹಠ ಟೀಂ ಹಿಡಿದಿದ್ದು, ಈ ಮೂಲಕ ಇತಿಹಾಸ ಸೃಷ್ಟಿಗೆ ಸನ್ನದ್ಧವಾಗಿ ನಿಂತಿದೆ.
ಇದನ್ನೂ ಓದಿ : “ಮಹಿಳೆ ಒಂದು ಕುಟುಂಬದ ಭಾಗವಲ್ಲ, ಸಮಾಜದ ಶಕ್ತಿ, ಸಂಸ್ಕೃತಿಯ ಸಾರಥಿ, “
ಇನ್ನೂ ಈ ನಡುವೆಯೇ ಭಾರತವನ್ನು ಸದೆಬಡಿದು ಚೊಚ್ಚಲ ಕಪ್ ಗೆಲ್ಲಲು ನ್ಯೂಜಿಲೆಂಡ್ ಕೂಡ ಎದುರು ನೋಡುತ್ತಿದೆ. ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಯಾವುದೇ ಪಂದ್ಯದಲ್ಲೂ ಗೆಲುವು ದಾಖಲಿಸಿಲ್ಲ. ಆದರೆ ಟೂರ್ನಿಯ ವೇಳೆಯಲ್ಲಿ ಎರಡೂ ತಂಡಗಳು 3 ಬಾರಿ ಸೆಣಸಾಟ ನಡಿಸಿವೆ. ಆದರೆ ಎಲ್ಲಾ ಪಂದ್ಯಗಳಲ್ಲೂ ನ್ಯೂಜಿಲೆಂಡ್ ಗೆದ್ದಿದೆ ಎನ್ನುವುದು ಗಮನಾರ್ಹ.
ಅಲ್ಲದೆ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿರುವ ನ್ಯೂಜಿಲೆಂಡ್ ತಂಡವು ಈ ಬಾರಿಯ ಫೈನಲ್‌ನಲ್ಲಿ ಭಾರತವನ್ನು ಹಿಮ್ಮೆಟ್ಟಿಸುವ ಹುಮ್ಮಸ್ಸಿನಲ್ಲಿದೆ. ಇತ್ತ ಸೆಮಿಫೈನಲ್‌ನಲ್ಲಿ ಆಂಗ್ಲರನ್ನು ಬಗ್ಗು ಬಡೆದಿರುವ ಭಾರತವು ಫೈನಲ್ ಪಂದ್ಯದಲ್ಲಿ ಗೆದ್ದು ಕಪ್ ಎತ್ತಿ ಹಿಡಿಯುವ ತವಕದಲ್ಲಿದೆ.
ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತವು ಮೂರನೇ ಬಾರಿಗೆ ಗದ್ದು ದಾಖಲೆ ನಿರ್ಮಿಸಲು ಸಜ್ಜಾಗಿದೆ. ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ತಂಡವು ಕೂಡ ವಿಶ್ವಕಪ್ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯೋಕೆ ಮುಂದಾಗಿದೆ. ಆದರೆ ಈ ಟೂರ್ನಿಯ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತ ತಂಡವು ಗೆಲುವ ದಾಖಲಿಸುವ ಸಾಧ್ಯತೆಗಳು ದಟ್ಟವಾಗಿವೆ. ಸ್ಫೋಟಕ ಆಟಗಾರರನ್ನು ಹೊಂದಿರುವ ತಂಡವು ಬೌಲಿಂಗ್ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಹೀಗಾಗಿ ಭಾರತದ ತಂಡದಲ್ಲಿನ ಆಟಗಾರರ ಪ್ರದರ್ಶನದ ಮೇಲೆ ಇಡೀ ಫೈನಲ್ ಪಂದ್ಯ ನಿಂತಂತಾಗಿದೆ.
ಫೈನಲ್‌ವರೆಗೂ ಭಾರತದ ಹೋರಾಟ ಹೇಗಿತ್ತು..? ಏಳು – ಬೀಳುಗಳ ಹಾದಿ..!
2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚಾಂಪಿಯನ್ಸ್ ಪಟ್ಟ ಪಡೆಯುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಬಳಿಕ 2009ರಲ್ಲೂ ಸೂಪರ್ 8ರ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಹಿನ್ನಡೆ ಅನುಭವಿಸಿತ್ತು. 2010ರಲ್ಲಿಯೂ ಪುನಃ ಸೂಪರ್ 8 ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. 2012ರ ಸೂಪರ್ 8ನೇ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಹಿಂದೆ ಬಿದ್ದಿತ್ತು. ಬಳಿಕ 2014ರಲ್ಲಿ ರನ್ನರ್-ಅಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋಲಿಗೆ ಶರಣಾಗಿತ್ತು. ಮುಂದೆ 2016ರ ಸೆಮಿಫೈನಲ್ ವೆಸ್ಟ್ ಇಂಡೀಸ್ ವಿರುದ್ಧ ಪರಾಭವಗೊಂಡಿತ್ತು. 2021ರಲ್ಲೂ ಸೂಪರ್ 12 ಸೆಮಿಫೈನಲ್ ತಲುಪಲು ಯಡವಿತ್ತು. 2022ರ ಸೆಮಿಫೈನಲ್ ಇಂಗ್ಲೆಂಡ್ ವಿರುದ್ಧ ಸೋಲನ್ನಪ್ಪಿಕೊಂಡಿತ್ತು. ಆದರೆ ಇದೀಗ ಪೈನಲ್ ತಲುಪುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.

ಇಂದು ಸಂಜೆ ಸೂರ್ಯ ಕುಮಾರ್ ಯಾದವ್ ಸಾರಥ್ಯದ ಭಾರತ ತಂಡ ಹಾಗೂ ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ನ್ಯೂಜಿಲೆಂಡ್ ಇಂದಿನ ಪಂದ್ಯದಲ್ಲಿ ಎಲ್ಲ ರೀತಿಯಿಂದಲೂ ಗೆಲುವಿಗಾಗಿ ರಣತಂತ್ರಗಳನ್ನು ಹೆಣೆದಿದ್ದಾರೆ. ಅಂತಿಮವಾಗಿ ಗೆಲುವು ಯಾರ ಮುಡಿಗೆ ಎನ್ನುವುದನ್ನು ಕಾದು ನೋಡಬೇಕಿದೆ.
ಭಾರತ ತಂಡದ ಬಲ ಏನು..?
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿಈ ಎಲ್ಲ ಆಟಗಾರರು ತಮ್ಮ ಪ್ರದರ್ಶನ ನೀಡಲಿದ್ದಾರೆ.
ನ್ಯೂಜಿಲೆಂಡ್‌ನ ಶಕ್ತಿ ಎಷ್ಟಿದೆ..?
ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಸಿಂಕ್ಲೇರ್ ಚಾಪ್‌ಮನ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೋಲ್ ಮೆಕಾಂಚಿ, ಮ್ಯಾಥ್ಯೂ ಜೇಮ್ಸ್ ಹೆನ್ರಿ, ಲಾಕಿ ಫರ್ಗುಸನ್ ಈ ಆಟಗಾರರೂ ಕೂಡ ತಮ್ಮ ಸಾಮರ್ಥ್ಯವನ್ನು ತೋರಿಸಲು ಸಜ್ಜಾಗಿದ್ದಾರೆ.






