ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಇದೀಗ ಯುದ್ಧ ಆರಂಭವಾಗಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಹಂಚಿಕೆಯ ಗಡಿಯಲ್ಲಿ ಮತ್ತೆ ಘರ್ಷಣೆಗಳು ನಡೆದು ನಂತರ ಇಸ್ಲಾಮಾಬಾದ್ ಅಫ್ಘಾನ್ ತಾಲಿಬಾನ್ ಸರ್ಕಾರದ ಮೇಲೆ “ಮುಕ್ತ ಯುದ್ಧ” ಘೋಷಿಸಿದೆ.

ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ, ಅಫ್ಘಾನ್ ವಾಯುಪಡೆಯು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಬಳಿಯ ಫೈಸಲಾಬಾದ್ ನಗರದ ಬಳಿಯ ಮಿಲಿಟರಿ ಶಿಬಿರವನ್ನ ಗುರಿಯಾಗಿಸಿಕೊಂಡು ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ಶುಕ್ರವಾರ ವಾಯುದಾಳಿ ನಡೆಸಲಾಗಿದೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಫ್ಘಾನಿಸ್ತಾನ -ಪಾಕಿಸ್ತಾನ ಸಂಘರ್ಷ ತೀವ್ರಗೊಂಡಿದೆ. ಪಾಕಿಸ್ತಾನದಿಂದ ಕ್ಷಿಪಣಿ ದಾಳಿ ನಡೆಸಲಾಗಿದೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸೇರಿ 133 ಜನ ಸಾವನ್ನಪ್ಪಿದ್ದಾರೆ. ತಾಲಿಬಾನ್ ಕ್ಯಾಂಪ್ ಗಳನ್ನು ಗುರಿಯಾಗಿಸಿಕೊಂಡು ಕಾಬೂಲ್, ಕಂದಹಾರ್ ಸೇರಿ ಹಲವೆಡೆ ದಾಳಿ ನಡೆಸಲಾಗಿದೆ.200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಹೇಳಿದ್ದಾರೆ,

ಕೇವಲ ನಾಲ್ಕು ಗಂಟೆಗಳ ಕಾಲ ನಡೆದ ಭೀಕರ ಕಾಳಗದಲ್ಲಿ 55 ಪಾಕಿಸ್ತಾನಿ ಸೈನಿಕರನ್ನು ಹತ್ಯೆಗೈಯಲಾಗಿದೆ. ಕೆಲವು ಪಾಕಿಸ್ತಾನಿ ಸೈನಿಕರನ್ನು ಜೀವಂತವಾಗಿ ಸೆರೆಹಿಡಿಯಲಾಗಿದ್ದು, ಸತ್ತ ಸೈನಿಕರ ಶವಗಳನ್ನು ಅಫ್ಘಾನಿಸ್ತಾನಕ್ಕೆ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.






