ಸಿನಿಮಾ ಕ್ಷೇತ್ರದಲ್ಲೇ ಬಹುದೊಡ್ಡ ಹೆಸರು ಮಾಡುತ್ತಿರುವ ರಾಕಿಂಕ್ ಸ್ಟಾರ್ ಯಶ್ ಜೊತೆ ಸದಾ ಅವರ ಬಾಡಿ ಗಾರ್ಡ್ ಒಬ್ಬ ಇರುತ್ತಾನೆ. ಯಶ್ ಜೊತೆಗಿರುವ ಬಾಡಿಗಾರ್ಡ್ ಶ್ರೀನಿವಾಸ್ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ. ಬಾಡಿಗಾರ್ಡ್ ಶ್ರೀನಿವಾಸ್ ಪಡೆಯುವ ಸಂಬಳ ಎಷ್ಟು ಗೊತ್ತೆ ?

ಶ್ರೀನಿವಾಸ್ ಅವರು ಯಶ್ ಅವರ ಪ್ರತಿಯೊಂದು ಕಾರ್ಯಕ್ರಮದಲ್ಲೂ, ಶೂಟಿಂಗ್ ಸೆಟ್‌ನಲ್ಲಿಯೂ ಅತ್ಯಂತ ಜಾಗರೂಕತೆಯಿಂದ ರಕ್ಷಣೆ ನೀಡುತ್ತಾರೆ.ಯಶ್ ಅವರು ಕೆಜಿಎಫ್‌ಗಿಂತ ಮುಂಚಿನಿಂದಲೂ ಈ ಮಟ್ಟಕ್ಕೆ ಬೆಳೆಯುವವರೆಗೆ ಶ್ರೀನಿವಾಸ್ ಅವರು ಜೊತೆಯಲ್ಲೇ ಇದ್ದಾರೆ. ಯಶ್ ಇವರನ್ನು ಪ್ರೀತಿಯಿಂದ ‘ಸೀನಾ’ ಎಂದು ಕರೆಯುತ್ತಾರೆ.

ಯಶ್‌ಗೆ ಬಾಡಿಗಾರ್ಡ್ ಆಗಿರುವವರು ಫಿಟ್‌ನೆಸ್ ಮಾಡೆಲ್ ಶ್ರೀನಿವಾಸ್ ಸಂಬಳ ಎಷ್ಟು ಗೊತ್ತೆ? ವರದಿಗಳ ಪ್ರಕಾರ, ಶ್ರೀನಿವಾಸ್ ಅವರಿಗೆ ಯಶ್ ನೀಡುವ ಸಂಬಳವು ದಕ್ಷಿಣ ಭಾರತದ ಅನೇಕ ಸ್ಟಾರ್ ನಟರ ಬಾಡಿಗಾರ್ಡ್‌ಗಳಿಗಿಂತಲೂ ಹೆಚ್ಚಿದೆ ಎಂದು ಹೇಳಲಾಗುತ್ತದೆ. ತಿಂಗಳಿಗೆ ಸುಮಾರು ₹2.5 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತಂತೆ!






