ದಾವಣಗೆರೆಯ ಪ್ರಭಾವಿ ನಾಯಕ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿರ್ಮಾನದ ಬಗ್ಗೆ ಒಂದು ಆತಂಕದ ಸುದ್ದಿ ಹರಿದಾಡುತ್ತಿದೆ. ಸಚಿವ ಸ್ಥಾನದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ರಾಜೀನಾಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಾಜೀನಾಮೆ ನೀಡುವುದಾಗಿ ಹೇಳಿದ್ದು , ಆದರೆ, ಇದಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗ ನೀಡಿಲ್ಲ ಎಂದು ತಿಳಿದುಬಂದಿದೆ. ಈಗಾಗಲೇ ಮಲ್ಲಿಕಾರ್ಜುನ ಅವರ ತಂದೆ ಶಾಮನೂರು ಅವರು ನಿಧನ ಹೊಂದಿದ್ದು, ಕ್ಷೇತ್ರದಲ್ಲಿ ಉಪಚುನಾವಣೆ ಆಗಬೇಕಾಗಿದ್ದು, ಅವರ ಕುಟುಂಬದಲ್ಲೇ ಒಬ್ಬ ವ್ಯಕ್ತಿಗೆ ಟಿಕೇಟ ಕೊಡಬೇಕು ಎಂಬ ಚರ್ಚೆಗಳಿದ್ದು ಈ ಸಂಧರ್ಭದಲ್ಲಿ ಮಲ್ಲಿಕಾರ್ಜುನ ಅವರ ರಾಜಿನಾಮೆ ವಿಷಯ ಭಾರಿ ಗೊಂದಲ ಉಂಟುಮಾಡಿದೆ.

ತಂದೆ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ವ್ಯವಹಾರಗಳ ಮೇಲ್ವಿಚಾರಣೆಯ ಒತ್ತಡದಿಂದಾಗಿ ಸಚಿವ ಸ್ಥಾನ ನಿಭಾಯಿಸಲು ಕಷ್ಟವಾಗುತ್ತಿದೆ ಎಂಬ ಕಾರಣ ಮಲ್ಲಿಕಾರ್ಜುನ ಅವರು ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಎಸ್ ಎಸ್ ಮಲ್ಲಿಕಾರ್ಜುನ ಅವರಿಂದ ಯಾವ ಮಾಹಿತಿಯೂ ತಿಳಿದು ಬಂದಿಲ್ಲ. ಹಾಗಾಗಿ ಗಾಳಿ ಸುದ್ದಿ ಇರಬಹುದು ಎಂದು ಕೆಲವರು ಹೇಳಿತ್ತಿದ್ದಾರೆ.






