ಬಾಲಿವುಡ್ ಸ್ಟಾರ್ ನಟನಾಗಿ ಮಿಂಚಿದ ಸಲ್ಮಾನ್ ಖಾನ್ ಎಷ್ಟೋ ಯುವತಿಯರ ಫೇವರೇಟ್ ಹೀರೊ. ಮೊದಲು ಸಲ್ಮಾನ್ ಖಾನ್ ಹೆಸರು ಹಲವಾರು ನಟಿಯರೊಟ್ಟಿಗೆ ಕೇಳಿ ಬಂದಿದೆ. ಆದರೆ
ಈಗಲೂ ಸಲ್ಮಾನ್ ಖಾನ್ ಸಿಂಗಲ್. ಆದರೆ ಸಲ್ಮಾನ್ ಖಾನ್ ಏಕೆ ಮದುವೆ ಆಗಲಿಲ್ಲ? ಈ ಕುರಿತು ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಹೇಳಿದ ವಿಡಿಯೋ ಈಗ ಭಾರಿ ವೈರಲ್ ಆಗಿದೆ.

ಸಲ್ಮಾನ್ ಖಾನ್ ತಂದೆ ಮಗನ ಕುರಿತು ಹೇಳಿದ ಮಾತುಗಳು ಇದು:
ಸಲ್ಮಾನ್ ಖಾನ್ ಮನಸ್ಥಿತಿ ಎಲ್ಲರಂತಲ್ಲ ಭಿನ್ನವಾದುದು, ಆತನಿಗೆ ತನ್ನ ತಾಯಿಯ ಮೇಲೆ ಅತೀ ಪ್ರೀತಿ. ತಾನು ಪ್ರೀತಿಸುವ ಹುಡುಗಿಯರಲ್ಲಿ ತನ್ನ ತಾಯಿಯನ್ನು ಕಾಣಲು ಇಷ್ಟಪಡುತ್ತಿದ್ದ. ಸಲ್ಮಾನ್ ಖಾನ್ ಪ್ರೀತಿಸಿದ ಹುಡುಗಿಯರೆಲ್ಲ ಸಿನಿಮಾ ರಂಗದವರೇ ಆಗಿರುತ್ತಿದ್ದರು. ಅವರನ್ನು ಮದುವೆಯಾಗಿ ಆತ ತಮ್ಮ ತಾಯಿಯಂತೆ ಮನೆಯಲ್ಲಿ ಇರಿಸಲು ಬಯಸುತ್ತಿದ್ದ ಎನಿಸುತ್ತದೆ. ಆದರೆ ಸಿನಿಮಾ ರಂಗದ ಯುವತಿಯರು ಸಾಕಷ್ಟು ಆಸೆ, ವೃತ್ತಿಯಲ್ಲಿ ಕನಸನ್ಮ ಇರಿಸಿಕೊಂಡವರಾಗಿರುತ್ತಾರೆ, ಅವರಿಗೆ ಮನೆಯಲ್ಲಿ ಕೂರುವುದು ಇಷ್ಟವಾಗಲ್ಲ, ಹಾಗಾಗಿ ಸಲ್ಮಾನ್ ಖಾನ್ರ ಬಹುತೇಕ ಪ್ರೇಮಗಳು ಮದುವೆಯ ವರೆಗೂ ಬರಲೇ ಇಲ್ಲ’ ಎಂದಿದ್ದರು ಸಲೀಂ.

‘ತಾನು ಮದುವೆ ಆಗುವ ಯುವತಿ, ತನ್ನ ಮನೆಯಲ್ಲಿರಬೇಕು, ತಂದೆ-ತಾಯಿಗಳನ್ನು ನೋಡಿಕೊಳ್ಳಬೇಕು, ಮಕ್ಕಳ ಹೋಮ್ವರ್ಕ್ ಮಾಡಿಸಬೇಕು, ಮಕ್ಕಳನ್ನು ಶಾಲೆಗೆ ಬಿಡಲು ಹೋಗಬೇಕು, ಹೀಗೆ ತನ್ನ ತಾಯಿ ತನಗೆ ಮಾಡಿದ್ದೆಲ್ಲವನ್ನೂ ನನ್ನ ಹೆಂಡತಿ ಮಾಡಬೇಕು ಎಂಬ ನಿರೀಕ್ಷೆ ಸಲ್ಮಾನ್ ಖಾನ್ನದ್ದಾಗಿತ್ತು ಆದರೆ ಅದು ಸಾಧ್ಯವಿರಲಿಲ್ಲ. ನಟಿಯರಿಗೆ ನಿರೀಕ್ಷೆಗಳಿರುತ್ತವೆ, ಆಕಾಂಕ್ಷೆಗಳಿರುತ್ತವೆ, ವೃತ್ತಿಯಲ್ಲಿ ಸಾಧನೆ ಮಾಡುವ ಹಂಬಲ ಇರುತ್ತದೆ, ಅವರಿಗೆ ಇದೆಲ್ಲ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸಲ್ಮಾನ್ ಖಾನ್ ಯಾರನ್ನೂ ಮದುವೆ ಆಗಲಿಲ್ಲ’ ಎಂದಿದ್ದರು ಸಲೀಂ ಖಾನ್.






