• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ- ಗೆಟ್ ರೆಡಿ ಬೆಂಗಳೂರು: ಐತಿಹಾಸಿಕ ಪಂದ್ಯಾವಳಿಗೆ ಕೌಂಟ್ ಡೌನ್..!

ಪ್ರತಿಧ್ವನಿ by ಪ್ರತಿಧ್ವನಿ
February 12, 2026
in Top Story, ಕರ್ನಾಟಕ, ಕ್ರೀಡೆ, ವಿಶೇಷ, ಸರ್ಕಾರಿ ಗೆಜೆಟ್
0
ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿ- ಗೆಟ್ ರೆಡಿ ಬೆಂಗಳೂರು: ಐತಿಹಾಸಿಕ ಪಂದ್ಯಾವಳಿಗೆ ಕೌಂಟ್ ಡೌನ್..!
Share on WhatsAppShare on FacebookShare on Telegram

ನಾವೆಲ್ಲಾ ಒಂದಾಗಿ ಆಟನಾ ಆಡೋಣ… ಜೊತೆಯಾಗಿ ಆಡುತ್ತಾ ಸ್ನೇಹನಾ ಬೆಳೆಸೋಣ..ಅದಕ್ಕಾಗಿ ಸೇರೋಣ.. ಒಂದಾಗಿ ಗೆಲ್ಲೋಣ… ಸೌರ್ಹಾದತೆಯ ಸಂದೇಶವನ್ನು ಸಾರೋಣ.. ಹೊಸ ಪರಂಪರೆಗೆ ಮುನ್ನಡಿ ಬರೆಯೋಣ…!
ಶಟಲ್ ಕಾಕ್‍ನ ಸದ್ದಿನೊಂದಿಗೆ ಸವಾಲು – ಪ್ರತಿ – ಸವಾಲು ಎಸೆಯೋಣ.. ಬೆವರ ಹನಿಗಳನ್ನು ಸುರಿಸಿ, ಕ್ರೀಡಾ ಸ್ಪೂರ್ತಿಯಿಂದ ಸೆಣಸಾಡೋಣ…ಗೆಲುವಿನ ಹಠದೊಂದಿಗೆ ಅಂಗಣದಲ್ಲಿ ದಿಟವಾಗಿ ಹೋರಾಡೋಣ.. ಪ್ರತಿ ಹೊಡೆತ, ಪ್ರತಿ ಪಂದ್ಯದಲ್ಲಿ ಪ್ರತಿಭೆ-ಸಾಮಥ್ರ್ಯವನ್ನು ಪ್ರದರ್ಶಿಸೋಣ..ಕಠಿಣ ಅಭ್ಯಾಸ ಮಾಡೋಣ.. ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಮೆರೆಯೋಣ..!

ADVERTISEMENT
Parliament on Rahul Gandhi :  ರಾಹುಲ್‌ ಗಾಂಧಿ ಗಲಿಬಲಿಗೊಂಡು ತೆರಳಿದ ಕೇಂದ್ರ ಸಚಿವರು..! #pralhadjoshi

ಜಿದ್ದಾಜಿದ್ದಿನಿಂದ ಸಾಗುವ ರೋಚಕ ಆಟದ ಸೊಬಗನ್ನು ಸವಿಯೋಣ..ಪವರ್‍ಫುಲ್ ಆಟಗಾರರ ನಡುವಿನ ಕೆಚ್ಚೆದೆಯ ಹೋರಾಟವನ್ನು ನೋಡೋಣ.. ಕನ್ನಡಿಗರ ಬ್ಯಾಡ್ಮಿಂಟನ್ ಹಬ್ಬದ ವೈಭವ, ಸಂಭ್ರಮವನ್ನು ಕಣ್ತುಂಬಿಕೊಳ್ಳೊಣ.. ಈ ಮೂಲಕ ಕರ್ನಾಟಕದ ಐತಿಹಾಸಿಕ ಬ್ಯಾಡ್ಮಿಂಟನ್ ಲೀಗ್ ಟೂರ್ನಿಗೆ ಸಾಕ್ಷಿಯಾಗೋಣ…ವಿನೂತನ ಮಾದರಿಯ ಟೂರ್ನಿಯಲ್ಲಿ ಆಡುವ ಮೂಲಕ ಕರುನಾಡಿನಲ್ಲಿ ಇತಿಹಾಸ ಸೃಷ್ಟಿಸೋಣ..!

ಹೌದು..ಪ್ರತಿಷ್ಠಿತ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಗೆ(CM Cup Badminton Tournament) ಕೌಂಟ್‍ಡೌನ್ ಶುರುವಾಗಿದೆ. 9 ಡ್ರೀಮ್ಸ್ ಸಂಸ್ಥೆಯ ವಿನೂತನ ಪರಿಕಲ್ಪನೆಯ ಟೂರ್ನಿಯಾಗಿದೆ.

ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಒಳಾಂಗಣದಲ್ಲಿ ಫೆಬ್ರವರಿ 21 ಮತ್ತು 22ರಂದು ಈ ಪಂದ್ಯಾವಳಿ ನಡೆಯಲಿದೆ.

ಎಂಟು ಫ್ರಾಂಚೈಸಿಗಳ ನಡುವೆ ನಡೆಯಲಿರುವ ಜಿದ್ದಾಜಿದ್ದಿನ ಹೋರಾಟಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ. ಈಗಾಗಲೇ ಎಂಟು ತಂಡಗಳ ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

 

View this post on Instagram

 

A post shared by Inspire Challengers (@inspire_challengers2026)

ಸಚಿವರು, ಶಾಸಕರು, ಐಎಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ವೈದ್ಯರು, ಸ್ಯಾಂಡಲ್‍ವುಡ್ ತಾರೆಯರು ಮತ್ತು ಪತ್ರಕರ್ತರು ಹೀಗೆ ಎಂಟು ಕೆಟಗರಿಯ ಆಟಗಾರರು ಈ ಟೂರ್ನಿಯಲ್ಲಿ ಆಡಲಿದ್ದಾರೆ.

Rahul Gandhi On epstein files : ರಾಹುಲ್‌ ಗಾಂಧಿ ಮಾತಿಗೆ ಥಂಡಾ ಹೊಡೆದ ಬಿಜೆಪಿ ನಾಯಕರು.. #pratidhvani

ಎಂಟು ಫ್ರಾಂಚೈಸಿಗಳಲ್ಲಿ ಪ್ರತಿ ಕೆಟಗರಿಯಿಂದ ಇಬ್ಬರು ಆಟಗಾರರಿರುತ್ತಾರೆ. ಪವರ್ ಗೇಮ್, ಪುರಷರ ಹಾಗೂ ಮಹಿಳೆಯ ವಿಭಾಗದಲ್ಲಿ ಸಿಂಗಲ್ಸ್, ಡಬಲ್ಸ್, ಮಿಕ್ಸೆಡ್ ಡಬಲ್ಸ್ ಪಂದ್ಯಗಳು ನಡೆಯಲಿವೆ. ಹಾಗೇ ಪಂದ್ಯದ ದಿಕ್ಕು ಬದಲಾಯಿಸುವ ಒಬ್ಬೊಬ್ಬ ಗೇಮ್ ಚೆಂಜರ್ ಪ್ಲೇಯರ್ ಕೂಡ ಪ್ರತಿ ತಂಡದಲ್ಲಿರುತ್ತಾರೆ.

ಲೀಗ್ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಎರಡು ಗುಂಪುಗಳಿದ್ದು, ಟಾಪ್ -2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಒಟ್ಟು 270 ಪಂದ್ಯಗಳು ಈ ಟೂರ್ನಿಯಲ್ಲಿ ನಡೆಯಲಿದೆ.

 

View this post on Instagram

 

A post shared by Inspire Challengers (@inspire_challengers2026)

ಟೂರ್ನಿಯಲ್ಲಿ ಸಚಿವರಾದ ಡಾ.ಸುಧಾಕರ್, ಶಾಸಕರಾದ ಮಂಥರ್ ಗೌಡ, ಶರತ್ ಬಚ್ಚೇಗೌಡ, ಪೊನ್ನಣ್ಣ, ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ, ಐಎಎಸ್ ಅಧಿಕಾರಿ ಸೆಲ್ವಕುಮಾರ್, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ರಮೇಶ್ ಬಾನೋಟ್ ಸೇರಿದಂತೆ ಹಲವು ಅಧಿಕಾರಿಗಳು, ಸೆಲೆಬ್ರಿಟಿಗಳು ಹಾಗೂ ವೈದ್ಯರು ಆಡಲಿದ್ದಾರೆ. ಅಂದ ಹಾಗೇ ಬಹತೇಕ ಆಟಗಾರರು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಡಿ ಪ್ರಶಸ್ತಿ ಗೆದ್ದಂತಹವರು. ಹಾಗಾಗಿ ಈ ಟೂರ್ನಿಯಲ್ಲಿ ತೀವ್ರ ಪೈಪೋಟಿಯನ್ನು ಎದರು ನೋಡಬಹುದು.

ಟೂರ್ನಿಯಲ್ಲಿ ಭಾಗಿಯಾಗೋ ಎಂಟು ಫ್ರಾಂಚೈಸಿಗಳು

* ಪ್ರಕಾಶ್ ಪಳನಿ ಮಾಲೀಕತ್ವದ ಟೀಮ್ ಕೆಫೆ ದಿವ್ಯಮ್,

*ಪ್ರಸನ್ನ ಎಡಕೇರಿ ಒಡೆತನದ ದಿ ಎಲೈಟ್ ಬ್ಯಾಡ್ಮಿಂಟನ್ ಕ್ಲಬ್,

*ನವೀನ್ ಸಾರಥ್ಯದ ಕೆಜಿಎಫ್ ಸ್ಮಾಷರ್ಸ್,

*ನರಸಿಂಹ ಮೂರ್ತಿ ಮಾಲೀಕತ್ವದ ಟೆಲಿಕಾಮ್ ಸ್ಕೈ ಸ್ಟ್ರೈಕರ್ಸ್,

*ಲಿಂಗರಾಜು ಒಡೆತನದ ಇನ್‍ಸ್ಪೈರ್ ಚಾಲೆಂಜರ್ಸ್,

*ನರಸಿಂಹ ಮೂರ್ತಿ ಒಡೆತನದ ಎಟಿಕೆ ಆಟಕರ್ಸ್,

*ಆನಂದ್ ಕುಮಾರ್ ಮಾಲೀಕತ್ವದ ಪ್ರೋ ವಿನ್ ಪ್ಯಾಂಥರ್ಸ್,

*ರೂಪ ಒಡೆತನದ ಆಸ್ತೆಟಿಕ್ ಆಟಕರ್ಸ್.

 

ವಿಶೇಷ ವರದಿ-ಸನತ್‌ ರೈ

Tags: BadmintonBadminton Starbengalurucm cup badminton tournamentIndianBadmintonKannadakannada newsKarnataK sportsKarnataka PoliticsPoliticsSports
Previous Post

Bangladesh: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹ**

Next Post

Rahul Gandhi: ಮೋದಿ ಸರ್ಕಾರ ಭಾರತ ಮಾತೆಯನ್ನು ಮಾರಾಟ ಮಾಡಿದೆ- ರಾಹುಲ್‌ ಗಾಂಧಿ ಕಿಡಿ

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

February 13, 2026
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
Next Post
Rahul Gandhi: ಮೋದಿ ಸರ್ಕಾರ ಭಾರತ ಮಾತೆಯನ್ನು ಮಾರಾಟ ಮಾಡಿದೆ- ರಾಹುಲ್‌ ಗಾಂಧಿ ಕಿಡಿ

Rahul Gandhi: ಮೋದಿ ಸರ್ಕಾರ ಭಾರತ ಮಾತೆಯನ್ನು ಮಾರಾಟ ಮಾಡಿದೆ- ರಾಹುಲ್‌ ಗಾಂಧಿ ಕಿಡಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada