• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

ಪ್ರತಿಧ್ವನಿ by ಪ್ರತಿಧ್ವನಿ
February 6, 2026
in Top Story, ಅಂಕಣ, ಇದೀಗ, ಕ್ರೀಡೆ, ದೇಶ, ವಾಣಿಜ್ಯ, ವಿದೇಶ, ವಿಶೇಷ
0
U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..
Share on WhatsAppShare on FacebookShare on Telegram

ವೈಭವ್ ಸೂರ್ಯವಂಶಿ (Vaibhav Suryavanshi) 14 ವರ್ಷದ ವೈಭವ್ ಸೂರ್ಯವಂಶಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175ರನ್‌ಗಳ ಸಿಡಿಲಬ್ಬರದ ಶತಕ ಸಿಡಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ಅಂಡರ್-19 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಪ್ರತಿಭೆ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ.

ADVERTISEMENT

ವೈಭವ್ ಸೂರ್ಯವಂಶಿಯ ಪ್ರತಿಭೆ ಸಾಗರದಷ್ಟು ಆಳವಾಗಿದೆ ಎಂಬುದನ್ನು ಸಾಭೀತುಪಡಿಸಿದ್ದಾರೆ. ಕಳೆದ ಐಪಿಎಲ್​ನಲ್ಲಿ ಘಟಾನುಘಟಿ ಬೌಲರ್​ಗಳನ್ನೇ ಬೆಂಡೆತ್ತಿ ಸ್ಫೋಟಕ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ವೈಭವ್ ಸೂರ್ಯವಂಶಿ ಈಗ ಅಂಡರ್ 19 ವಿಶ್ವಕಪ್​ನಲ್ಲಿ ಅಬ್ಬರದ ಶತಕ ಸಿಡಿಸಿ ದಾಖಲೆ ಸೃಷ್ಟಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 55 ಎಸೆತಗಳಲ್ಲಿ ಈ ಟೂರ್ನಿಯ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.

ಈ ಮೂಲಕ ಅಂಡರ್ 19 ವಿಶ್ವಕಪ್​ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಕಳೆದ ಪಂದ್ಯದಲ್ಲಿ ಗೆಲುವಿನ ಶತಕ ಬಾರಿಸಿದ್ದ ಆರಂಭಿಕ ಆರನ್ ಜಾರ್ಜ್ ಈ ಪಂದ್ಯದಲ್ಲಿ ಕೇವಲ 9 ರನ್‌ಗಳಿಗೆ ಔಟಾದ ಬಳಿಕ ಜೊತೆಯಾದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು.

ಎಂದಿನಂತೆ ಬೌಂಡರಿ ಸಿಕ್ಸರ್​ಗಳ ಮೂಲಕ ಸೂರ್ಯವಂಶಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕ ಮತ್ತಷ್ಟು ಕೆರಳಿದ ವೈಭವ್ ಮುಂದಿನ 23 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಕೇವಲ 55 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಶತಕದ ಇನ್ನಿಂಗ್ಸ್​ನಲ್ಲಿ ವೈಭವ್ ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ 80 ರನ್ ಕಲೆಹಾಕಿದರು. ಶತಕದ ಬಳಿಕವೂ ಸ್ಫೋಟಕ ಆಟ ಮುಂದುವರೆಸಿದ ಸೂರ್ಯವಂಶಿ 80 ಎಸೆತಗಳಲ್ಲಿ 175 ರನ್​ಗಳನ್ನು ಕಲೆಹಾಕಿ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ ವೈಭವ್ 15 ಬೌಂಡರಿ ಹಾಗೂ 15 ಸಿಕ್ಸರ್ ಕೂಡ ಬಾರಿಸಿದ್ದರು.

Tags: englandICCIndiaRahul GandhiUnder19 world cupVaibhav SuryavanshiWorld CupWorld Cup Under-19
Previous Post

Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

Next Post

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

Related Posts

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಇದೀಗ

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
February 6, 2026
0

ಬೆಂಗಳೂರು: ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನಮ್ಮ ಮೆಟ್ರೊ ದರ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ‌ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.‌ ಈ ಕುರಿತು ಹೇಳಿಕೆ ಬಿಡುಗಡೆ...

Read moreDetails
Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

Supreme Court: ಮಗುವಿನ ಹಕ್ಕಿಗಿಂತ ತಾಯಿ ಹಕ್ಕು ಮುಖ್ಯ: 30ನೇ ವಾರದಲ್ಲೂ ಗರ್ಭಪಾ**ಕ್ಕೆ ಸುಪ್ರೀಂ ಅನುಮತಿ

February 6, 2026
ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

February 6, 2026
Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

February 6, 2026
BREAKING: ನಟ ನಂದಕಿಶೋರ್‌ಗೆ ಸಾಲ ನೀಡಿದ ವ್ಯಕ್ತಿಯ ಕಿಡ್ನಾಪ್‌: ಮಾಜಿ ರೌಡಿಶೀಟರ್ ಯಶಸ್ವಿನಿ ಅರೆಸ್ಟ್‌

BREAKING: ನಟ ನಂದಕಿಶೋರ್‌ಗೆ ಸಾಲ ನೀಡಿದ ವ್ಯಕ್ತಿಯ ಕಿಡ್ನಾಪ್‌: ಮಾಜಿ ರೌಡಿಶೀಟರ್ ಯಶಸ್ವಿನಿ ಅರೆಸ್ಟ್‌

February 6, 2026
Next Post
ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!