ನಮಗೆ ಉಗುರು(ನೇಲ್) ಕಟ್ಟರ್‌ಗಳು ತೀರಾ ಅಗತ್ಯವಿದ್ದರೂ ನಾವು ಅವುಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಉಗುರು ಕತ್ತರಿಸುತ್ತೇವೆ ಆಮೇಲೆ ಅದನ್ನು ತೆಗೆದಿಡುತ್ತೇವೆ ಆದರೆ ನೇಲ್ ಕಟ್ಟರ್‌ನ ಕೆಳಭಾಗದಲ್ಲಿರುವ ಸಣ್ಣ ತೂತು(ಹೋಲ್) ಏತಕ್ಕೆ ಇರುತ್ತದೆ ಎಂದು ಅದರ ಬಗ್ಗೆ ಹೀಗೆ ಎಂದಾದರೂ ಯೋಚಿಸಿದ್ದೇವಾ ? ಈ ತೂತು(ಹೋಲ್) ನಿಜವಾಗಿಯೂ ಯಾವುದಕ್ಕಾಗಿ?

ಮೊದಲು ನೆಲ್ ಕಟರ್ ಬಗ್ಗೆ ಇರುವ ಇತಿಹಾಸ ತಿಳಿಯೋಣ. ಭಾರತ ಮತ್ತು ಚೀನಾದಂತಹ ಪ್ರಾಚೀನ ನಾಗರಿಕತೆಗಳಲ್ಲಿ ಮಾನವರು ಸಾವಿರಾರು ವರ್ಷಗಳಿಂದ ಚೂಪಾದ ಕಲ್ಲುಗಳು, ಚಿಪ್ಪುಗಳು, ಚಾಕುಗಳು ಮತ್ತು ನಂತರ ಕಂಚು ಅಥವಾ ಕಬ್ಬಿಣದಿಂದ ಮಾಡಿದ ಸಣ್ಣ ಬ್ಲೇಡ್‌ಗಳನ್ನು ಬಳಸಿ ಉಗುರುಗಳನ್ನು ಕತ್ತರಿಸುತ್ತಿದ್ದರು.19 ನೇ ಶತಮಾನದಲ್ಲಿ ನೆಲ್ ಕಟರ್ ಬಂದಿತು. 1875 ರಲ್ಲಿ, ವ್ಯಾಲೆಂಟೈನ್ ಫೋಗೆರ್ಟಿ ಎಂಬ ಅಮೇರಿಕನ್ ಮೊದಲ ಪ್ರಾಯೋಗಿಕ ಉಗುರು ಕತ್ತರಿಸುವ ವಿನ್ಯಾಸಕ್ಕೆ ಪೇಟೆಂಟ್ ಪಡೆದರು.

ನೆಲ್ ಕಟರ್ ನಲ್ಲಿ ಆ ಸಣ್ಣ ಹೋಲ್ ಮುಖ್ಯವಾಗಿ ಅಲ್ಲಿ ಇರುವುದರಿಂದ ನೀವು ಕೀಚೈನ್, ಹುಕ್, ಸಣ್ಣ ಸರಪಳಿ ಯಾವುದಕ್ಕಾದರೂ ನೆಲ್ ಕಟ್ಟರ್ ಅನ್ನು ಸಿಕ್ಕಿಸಿಕೊಳ್ಳಬಹುದು. ಇದು ಪ್ರಯಾಣಿಕರಿಗೆ ( ಪ್ರಯಾಣದ ಸಂದರ್ಭದಲ್ಲಿ), ಸೈನಿಕರು, ನಾವಿಕರಿಗೆ ಸಹಾಯವಾಗುತ್ತದೆ.ಕೆಲವು ಜನರು ತಮ್ಮ ಕೀಲಿಗಳ ಜೊತೆ ಕೀ ಚೈನ್ ನಲ್ಲಿ ನೇಲ್ ಕಟ್ಟರ್ ಅನ್ನು ಸಿಕ್ಕಿಸಿಕೊಳ್ಳುತ್ತಾರೆ.









