• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಡಾ.ರಾಜ್‌ ಸ್ಪೂರ್ತಿಯಿಂದ ಬಸ್ ತಂಗುದಾಣ ನಿರ್ಮಾಣ: ಸಚಿವ ಜಾರ್ಜ್

ಪ್ರತಿಧ್ವನಿ by ಪ್ರತಿಧ್ವನಿ
January 30, 2026
in ಕರ್ನಾಟಕ, ರಾಜಕೀಯ
0
ಡಾ.ರಾಜ್‌ ಸ್ಪೂರ್ತಿಯಿಂದ ಬಸ್ ತಂಗುದಾಣ ನಿರ್ಮಾಣ: ಸಚಿವ ಜಾರ್ಜ್
Share on WhatsAppShare on FacebookShare on Telegram

ಡಾ.ರಾಜ್‌ ಸ್ಪೂರ್ತಿಯಿಂದ ಬಸ್ ತಂಗುದಾಣ ನಿರ್ಮಾಣ: ಸಚಿವ ಜಾರ್ಜ್

ADVERTISEMENT

ಬೆಂಗಳೂರು, ಜನವರಿ 30, 2026: ‘ಕನ್ನಡ ನಮ್ಮ ಉಸಿರು, ನಮ್ಮ ಜೀವ’ ಕರ್ನಾಟಕದ ಜನತೆಯ ಅಭಿವೃದ್ದಿಯೇ ನಮ್ಮ ಮುಖ್ಯ ಗುರಿ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರದ ಮಾರುತಿ ಸೇವಾ ನಗರದ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಶುಕ್ರವಾರ ನೂತನ ಬಸ್ ತಂಗುದಾಣವನ್ನು ಉದ್ಘಾಟಿಸಿ ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರದ ಶಾಸಕರೂ ಆಗಿರುವ ಇಂಧನ ಸಚಿವ ಹಾಗೂ ಕೆ.ಜೆ.ಜಾರ್ಜ್‌ ಮಾತನಾಡಿದರು.

“ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಬಸ್ ತಂಗುದಾಣ ನಿರ್ಮಾಣವಾಗಿದೆ. ನಾನು ಡಾ.ರಾಜ್‌ಕುಮಾರ್‌ ಅಭಿಮಾನಿ, ಅವರ ಹೆಸರಿನ ಬಸ್‌ನಿಲ್ದಾಣವನ್ನು ಉದ್ಘಾಟಿಸುತ್ತಿರುವುದು ನನ್ನ ಸೌಭಾಗ್ಯ. ನಮ್ಮ ಕನ್ನಡದ ಧ್ವಜ ಜಾಗತಿಕ ಮಟ್ಟದಲ್ಲಿ ಹಾರಾತ್ತಿದೆ. ಕನ್ನಡವೇ ನನ್ನ ಉಸಿರು, ರಾಜ್ಯದ ಜನರ ಅಭಿವೃದ್ದಿಯೇ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಮುಖ್ಯ ಗುರಿ” ಎಂದರು.

Dinesh Amin Mattu on Governors : ರಾಜಭವನವನ್ನು ಆಸ್ಪತ್ರೆ ಅಥವಾ ಪಾರ್ಕ್ ಮಾಡಿಬಿಡಿ..! | karnataka Governor

“ಸಂಘದವರು ಪ್ರಯಾಣಿಕರಿಗೆ ನೆರಳು, ಮಳೆಯಿಂದ ರಕ್ಷಣೆ ಮತ್ತು ಕುಡಿಯುವ ನೀರಿನ ಸೌಕರ್ಯ ಒದಗಿಸಿಕೊಟ್ಟಿದ್ದಾರೆ. ಇದು ಎಲ್ಲರೂ ಹೆಮ್ಮೆ ಪಡುವ ಕಾರ್ಯಕ್ರಮವಾಗಿದೆ. ಜನ ನೆನಯುವುದು ಒಳ್ಳೆಯ ಕೆಲಸಗಳಿಂದ ಮಾತ್ರ. ಸರ್ವಜ್ಞ ನಗರದ ಪ್ರತಿನಿಧಿಯಾಗಿರುವುದು ನನ್ನ ಭಾಗ್ಯ. ನಮ್ಮ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ,” ಎಂದು ಕೆ.ಜೆ.ಜಾರ್ಜ್ ತಿಳಿಸಿದರು.

“ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಾಗರಿಕರಿಗೆ ಸೌಕರ್ಯ ಒದಗಿಸಲು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನೊಂದು ವರ್ಷದಲ್ಲಿ ನಮ್ಮ ಕ್ಷೇತ್ರದಲ್ಲಿ ಎಲ್ಲರೂ ನೆನಪಿಟ್ಟುಕೊಳ್ಳುವಂಥ ಯೋಜನೆಗಳು ಅನುಷ್ಠಾನಗೊಳ್ಳಲಿದೆ. ಕಾಚರಕನಹಳ್ಳಿಯಲ್ಲಿ ಕೆರೆಯನ್ನು ಅಭಿವೃದ್ದಿಪಡಿಸುತ್ತಿದ್ದೇವೆ. ಕ್ರೀಡಾಂಗಣ, ಆಸ್ಪತ್ರೆ ಮಾಡುತ್ತಿದ್ದೇವೆ. ಜತೆಗೆ ಬೃಹತ್ ಸರ್ವಜ್ಞ ಪ್ರತಿಮೆಯನ್ನು ನಿರ್ಮಿಸಲಿದ್ದೇವೆ. ಅಭಿವೃದ್ದಿ ವಿಚಾರದಲ್ಲಿ ನಾವು ಎಂದಿಗೂ ರಾಜಕೀಯ ಮಾಡಿಲ್ಲ, ಅದು ಚುನಾವಣೆಗಷ್ಟೇ ಸೀಮಿತ,” ಎಂದರು.

ಸಾರಾ ಗೋವಿಂದ್ ನನ್ನ ಆತ್ಮೀಯರು
ನಾನು ಕೊಡಗಿನಲ್ಲಿ ಇದ್ದ ಸಮಯದಿಂದಲೂ ಸಾರಾ ಗೋವಿಂದು ಅವರ ಪರಿಚಯವಿದೆ. ನಟ ಅಂಬರೀಶ್ ಅವರನ್ನು ನನಗೆ ಪರಿಚಯಿಸಿಕೊಟ್ಟಿದ್ದರು. ನಾನು ರಾಜಕಾರಣಕ್ಕೆ ಬಂದ ಮೇಲೂ ಬಹಳ ಆತ್ಮೀಯವಾಗಿಯೇ ಇದ್ದಾರೆ. ಡಾ.ರಾಜ್ ಹಾಗೂ ಪುನೀತ್ ಅವರ ಅಭಿಮಾನಿಗಳ ಸಂಘವನ್ನು ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಜಾರ್ಜ್‌ .ಮೆಚ್ಚಿಗೆ ವ್ಯಕ್ತಪಡಿಸಿದರು.

ಡಾ.ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ಸಾರಾ ಗೋವಿಂದು ಮಾತನಾಡಿ, “ಸರ್ವಜ್ಞ ನಗರ ಕ್ಷೇತ್ರದಲ್ಲಿ ಕೆ.ಜೆ.ಜಾರ್ಜ್ ಅವರು ಸಾಕಷ್ಟು ಅಭಿವೃದ್ದಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಮಹನೀಯರ ನೆನಪನ್ನು ಶಾಶ್ವತಗೊಳಿಸುವ ಕೆಲಸವೂ ಅವರಿಂದ ನಡೆದಿದೆ,” ಎಂದು ಶ್ಲಾಘಿಸಿದರು.

ಅಭಿಮಾನಿ ಸಂಘದ ಡಿ.ಕೆ.ರಾಜು, ವೆಂಕಟೇಶ್, ಅಮರ್, ಮುರಳಿ ಹಾಗೂ ಕಾಂಗ್ರೆಸ್ ಮುಖಂಡರಾದ ರಘುದೇವರಾಜ್ ಉಪಸ್ಥಿತರಿದ್ದರು.

Tags: bjp on kj georgeEnergy Minister KJ GeorgeKJ Georgekj george all propertieskj george angerkj george assetskj george cabinet rowkj george case explainedkj george clarificationkj george controversykj george dks meetingkj george latest newskj george latest updatekj george meeting with cmkj george newskj george not resignedkj george reactionkj george resignationkj george resignation newskj george speechkj george today newskj george wifesiddaramaiah kj george
Previous Post

ಗುಂಡು ಹಾರಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಆತ್ಮಹತ್ಯೆ

Next Post

Daily Horoscope January 31: ಇಂದು ಅದೃಷ್ಟ ಕೈ ಹಿಡಿಯುವ ರಾಶಿಗಳಿವು..!

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
Next Post
Daily Horoscope January 31: ಇಂದು ಅದೃಷ್ಟ ಕೈ ಹಿಡಿಯುವ ರಾಶಿಗಳಿವು..!

Daily Horoscope January 31: ಇಂದು ಅದೃಷ್ಟ ಕೈ ಹಿಡಿಯುವ ರಾಶಿಗಳಿವು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada