• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿಎಂ ತವರು ಜಿಲ್ಲೆಯಲ್ಲೇ ಫ್ಲೆಕ್ಸ್ ಗಲಾಟೆ: ಕುಮಾರಸ್ವಾಮಿ ಬ್ಯಾನರ್ ಕಿತ್ತೆಸೆದು ವ್ಯಕ್ತಿ ಆಕ್ರೋಶ

ಪ್ರತಿಧ್ವನಿ by ಪ್ರತಿಧ್ವನಿ
January 17, 2026
in Top Story, ಕರ್ನಾಟಕ, ರಾಜಕೀಯ
0
ಸಿಎಂ ತವರು ಜಿಲ್ಲೆಯಲ್ಲೇ  ಫ್ಲೆಕ್ಸ್ ಗಲಾಟೆ: ಕುಮಾರಸ್ವಾಮಿ ಬ್ಯಾನರ್ ಕಿತ್ತೆಸೆದು ವ್ಯಕ್ತಿ ಆಕ್ರೋಶ
Share on WhatsAppShare on FacebookShare on Telegram

ಮೈಸೂರು: ಬಳ್ಳಾರಿ,(Ballari) ಶಿಡ್ಲಘಟ್ಟ ಬ್ಯಾನರ್‌ ವಿವಾದದ ಬಳಿಕ ಇದೀಗ ಸಿಎಂ ಸಿದ್ದರಾಮಯ್ಯ(CM Siddaramaiah) ತವರು ಜಿಲ್ಲೆ ಮೈಸೂರಲ್ಲೇ ಫ್ಲೆಕ್ಸ್ ಗಲಾಟೆ ಆರಂಭವಾಗಿದೆ. ಮೈಸೂರು(Mysuru) ಜಿಲ್ಲೆಯ ಕೆ.ಆರ್ ನಗರ ತಾಲೂಕಿನಲ್ಲಿ ಫ್ಲೆಕ್ಸ್ ವಿಚಾರವಾಗಿ ಭಾರೀ ವಿವಾದ ಉಂಟಾಗಿದೆ. ಚುಂಚನಕಟ್ಟೆ ರಥೋತ್ಸವದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ರಾಜಕೀಯ ನಾಯಕರ ಭಾವಚಿತ್ರಗಳಿದ್ದ ಫ್ಲೆಕ್ಸ್‌ನ್ನು ವ್ಯಕ್ತಿಯೊಬ್ಬ ಹರಿದು, ಕಾಲಿನಿಂದ ಒದ್ದು ಕೆಡವಿರುವ ಘಟನೆ ಬೆಳಕಿಗೆ ಬಂದಿದೆ.

ADVERTISEMENT
ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಭೀಮಣ್ಣ ಖಂಡ್ರೆ 102 ವಯೋಸಹಜ ಕಾಯಿಲೆಯಿಂದ ಬೀದರ್‌ನಲ್ಲಿ ನಿಧನ…

ಕೆ.ಆರ್ ನಗರ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್, ಹಾಗೂ ಮಾಜಿ ಸಚಿವ ಸಾ.ರಾ ಮಹೇಶ್ ಅವರ ಭಾವಚಿತ್ರಗಳು ಒಳಗೊಂಡಿದ್ದ ಫ್ಲೆಕ್ಸ್‌ನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Bheemanna Khandre: ಶತಾಯುಷಿ ಭೀಮಣ್ಣ ಖಂಡ್ರೆ‌ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

Krishna Byregowda: ಬಡವ್ರ ಜಮೀನು ತಿನ್ಕೊಳ್ಳಿ ಅಂದ ರೈತ.. ಗರಂ ಆದ ಸಚಿವ ಕೃಷ್ಣ ಭೈರೇಗೌಡ  #pratidhvani

ಈ ಕೃತ್ಯವನ್ನು ಶಾಸಕ ಡಿ.ರವಿಶಂಕರ್ ಅವರ ಅಭಿಮಾನಿಗಳು ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಾಸಕ ಡಿ.ರವಿಶಂಕರ್ ಅವರ ಸ್ವಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಬೇರೆ ಯಾರೂ ಫ್ಲೆಕ್ಸ್ ಕಟ್ಟಬಾರದು ಎಂದು ಕೆಲವರು ತಾಕೀತು ಮಾಡಿದ್ದಾರೆ ಎನ್ನುವ ಆರೋಪ ಸಹ ಕೇಳಿಬಂದಿದೆ.

Siddaramaiah : ಕರ್ನಾಟಕದಲ್ಲಿ ಕನ್ನಡನೇ ಮಾತಾಡ್ಬೇಕು #pratidhvani #siddaramaiah #vidhanasoudha #bengaluru

ಫ್ಲೆಕ್ಸ್‌ನ್ನು ಹರಿದು, ಕಾಲಿನಿಂದ ಒದೆಯುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ವಿಡಿಯೋ ದೃಶ್ಯಗಳನ್ನು ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ.

Tags: bannerBanner CaseBJPCM SiddaramaiahcongressHD KumaraswamyJDSKarnataka PoliticsPolitics
Previous Post

ಬಾಲಿವುಡ್ & ಕೋಮುವಾದ: ಎ.ಆರ್ ರೆಹಮಾನ್ ಸ್ಫೋಟಕ ಹೇಳಿಕೆ

Next Post

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

Related Posts

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!
Top Story

AIADMKಗೆ ಬಿಗ್‌ ಶಾಕ್‌ : ಮೂವರು ಶಾಸಕರ ರಾಜೀನಾಮೆ : ಸಂಚಲನ ಮೂಡಿಸಿದ ರಾಜಕೀಯ..!

by ಪ್ರತಿಧ್ವನಿ
May 25, 2026
0

ಚೆನೈ : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಬಳಿಕ ನೂತನವಾಗಿ ಅಧಿಕಾರಕ್ಕೆ...

Read moreDetails
BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

May 25, 2026
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
Next Post
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!