ಕಾಲಿವುಡ್‌ನ ಸೂಪರ್ ಸ್ಟಾರ್ ಹಿಟ್ ಡೈರೆಕ್ಟರ್ (Director Lokesh Kanagaraj) ‘ಕೂಲಿ’ ಬಳಿಕ ಮತ್ತೊಂದು ಮೆಗಾ ಬಿಗ್ ಬಜೆಟ್ ಸಿನಿಮಾಕ್ಕೆ ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಸೌತ್‌ನ ಸೂಪರ್ ಸ್ಟಾರ್ ನಟ ಅಲ್ಲುಅರ್ಜುನ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ವರ್ಷ ಲೋಕೇಶ್ ಕನಕರಾಜ್ ರಜಿನಿಕಾಂತ್ ಅವರ ಜತೆ ‘ಕೂಲಿ’ ಸಿನಿಮಾವನ್ನು ಮಾಡಿದ್ದರು. ಮಲ್ಟಿ ಸ್ಟಾರ್ಸ್ ‘ಕೂಲಿ’ ದೊಡ್ಡಮಟ್ಟದ ಸಕ್ಸಸ್ ಕಾಣದಿದ್ರೂ, ಬಾಕ್ಸಾಫೀಸ್‌ನಲ್ಲಿ ಒಂದೊಳ್ಳೆ ಗಳಿಕೆ ಕಂಡಿತು.

‘ಕೂಲಿ’ ಬಳಿಕ ಲೋಕೇಶ್ ಕನಕರಾಜ್ ಅಲ್ಲು ಅರ್ಜುನ್ (Allu Arjun) ಅವರ ಜತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಕಳೆದ ಕೆಲ ಸಮಯದ ಹಿಂದಷ್ಟೇ ಲೋಕೇಶ್ – ಅಲ್ಲು ಅರ್ಜುನ್ ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿತ್ತು. ಇದೀಗ ಸಿನಿಮಾದ ಸ್ಕ್ರಿಪ್ಟ್ ಅಂತಿಮವಾಗಿದ್ದು, ಚಿತ್ರ ಸೆಟ್ಟೇರೋದು ಪಕ್ಕಾ ಎಂದಿದ್ದಾರೆ.

‘ಪುಷ್ಪ’ ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಪ್ರಾಜೆಕ್ಟ್‌ಗೆ ಬಂಡವಾಳ ಹಾಕಲಿದೆ ಎನ್ನಲಾಗಿದೆ. ಇದೊಂದು ಬಿಗ್ ಬಜೆಟ್ ಸಿನಿಮಾವಾಗಿರಲಿದೆ. ಲೋಕೇಶ್ ಕನಕರಾಜ್ ಅವರಿಗೆ ನಿರ್ಮಾಣ ಸಂಸ್ಥೆ ದೊಡ್ಡ ಮೊತ್ತವನ್ನು ‘ಕೂಲಿ’ ಬಳಿಕ ಲೋಕೇಶ್ ಕನಕರಾಜ್ ಅಲ್ಲು ಅರ್ಜುನ್ (Allu Arjun) ಅವರ ಜತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.













