ಬೆಂಗಳೂರು: ವಿವೇಕನಗರ ಪೊಲೀಸರ ವಿರುದ್ಧ ಕೇಳಿಬಂದಿದ್ದ ಲಾಕ್ ಅಪ್ ಡೆತ್ ಆರೋಪಕ್ಕೆ ಸಿಐಡಿ ತನಿಖೆ ತಿರುವು ನೀಡಿದೆ. ದರ್ಶನ್ ಎಂಬ ಯುವಕನ ಕೊಲೆ ಪ್ರಕರಣ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ರಿಹ್ಯಾಬ್ ಸೆಂಟರ್ ನ 8 ಕೆಲಸಗಾರರನ್ನ ಬಂಧಿಸಿದ್ದಾರೆ.
2025ರ ನವೆಂಬರ್ ನಲ್ಲಿ ವಿವೇಕನಗರ ಪೊಲೀಸರು ದರ್ಶನ್ ಎಂಬ ಯುವಕ ಏರಿಯಾದಲ್ಲಿ ಕುಡಿದು ಗಲಾಟೆ ಮಾಡುತ್ತಾನೆ ಎಂಬ ಆರೋಪದಲ್ಲಿ ಠಾಣೆಗೆ ಕರೆತಂದು ಮೂರು ದಿನ ಅಕ್ರಮವಾಗಿ ಇಟ್ಟುಕೊಂಡಿದ್ರು. ಮೂರು ದಿನದ ನಂತರ ದರ್ಶನ್ ನನ್ನ ಅಡಕಮಾರನಹಳ್ಳಿಯ ಯುನಿಟಿ ಫೌಂಡೇಶನ್ ಎಂಬ ರಿಹ್ಯಾಬ್ ಸೆಂಟರ್ ಗೆ ಪೊಲೀಸರೇ ಸೇರಿಸಿದ್ದರು. ಆದರೆ ರಿಹ್ಯಾಬ್ ಸೆಂಟರ್ ಸೇರಿದ ಮೂರೇ ದಿನಕ್ಕೆ ದರ್ಶನ್ ಬಿಪಿ ಕಡಿಮೆಯಾಗಿ ಮೃತಪಟ್ಟಿದ್ದ.

ಮಗನ ಸಾವಿಗೆ ಪೊಲೀಸರ ಹಲ್ಲೆಯೇ ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ರು. ಇದರಿಂದ ವಿವೇಕ ನಗರ ಪೊಲೀಸರ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು. ಕಸ್ಟೋಡಿಯಲ್ ಡೆತ್ ಪ್ರಕರಣವಾಗಿದ್ದರಿಂದ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದು, ತನಿಖೆ ವೇಳೆ ದರ್ಶನ್ ಸಾವಿಗೆ ರಿಯಾಬ್ ಸೆಂಟರ್ ಹುಡುಗರು ಕಾರಣ ಎನ್ನುವುದು ಗೊತ್ತಾಗಿದೆ.
ರಿಹ್ಯಾಬ್ ನಲ್ಲಿದ್ದ ದರ್ಶನ್ ನನ್ನ ಕಂಟ್ರೋಲ್ ಮಾಡುವುದಕ್ಕೆ ಫೈಬರ್ ಲಾಠಿ, ಪ್ಲಾಸ್ಟಿಕ್ ಪೈಪ್ ಬ್ಯಾಟ್, ಮರದ ಪೀಸ್ ನಿಂದ ಹಲ್ಲೆ ನಡೆಸಿದ್ದರಿಂದ ಆತ ಮೃತಪಟ್ಟಿದ್ದಾನಂತೆ. ಈ ಸಂಬಂಧ ಸಿಐಡಿ ಪೊಲೀಸರು ರಿಹ್ಯಾಬ್ ಸೆಂಟರ್ ಕೆಲಸಗಾರರಾದ ನವೀನ್, ಅಖಿಲ್, ನಾರಾಯಣ @ನಾಣಿ, ಹಿತೇಶ್ ಕುಮಾರ್, ಮಂಜು, ಸಾಹಿಲ್ ಅಹಮದ್, ನವೀನ್ ಕುಮಾರ್, ರವಿ ಎಂಬುವರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.







