ಬೆಂಗಳೂರು: ಬಟ್ಟೆ ವಿಚಾರಕ್ಕೆ ಬುದ್ಧಿ ಹೇಳಿದ ಹೋಮ್ ಗಾರ್ಡ್ ಗೆ ಯುವತಿಯೊಬ್ಬಳು ಜುಟ್ಟು ಹಿಡಿದು ಥಳಿಸಿರುವ ಘಟನೆ ಕೆ.ಆರ್.ಪುರಂ ರೈಲ್ವೆ ನಿಲ್ದಾಣ ಸರ್ಕಲ್ ನಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಹೋಂ ಗಾರ್ಡ್ ಲಕ್ಷ್ಮಿ ನರಸಮ್ಮ ಡ್ಯೂಟಿಯಲ್ಲಿದ್ದಾಗ ಯುವತಿ ಮೋಹಿನಿ ಶಾರ್ಟ್ ಬಟ್ಟೆ ಹಾಕಿ ಬೀದಿಗೆ ಬಂದು ಸುತ್ತಾಡ್ತಿದ್ದಳಿ. ಇದನ್ನ ಕಂಡ ಸ್ಥಳೀಯ ಯುವಕರು ಚುಡಾಯಿಸಲು ಶುರು ಮಾಡಿದ್ದರು. ಈ ವೇಳೆ ಯುವತಿ ಮೋಹಿನಿ ಬಳಿ ಬಂದು ಬಟ್ಟೆ ವಿಚಾರಕ್ಕೆ ನರಸಮ್ಮ ಬುದ್ದಿ ಹೇಳಿದರು.
ಇದಕ್ಕೆ ಕೋಪಗೊಂಡ ಮೋಹಿನಿ ಹೋಂ ಗಾರ್ಡ್ ನರಸಮ್ಮಗೆ ಜುಟ್ಟು ಹಿಡಿದು ನಡು ರಸ್ತೆಯಲ್ಲಿ ಥಳಿಸಿದ್ದಳು. ಈ ಬಗ್ಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು.. ಸದ್ಯ ಪೊಲೀಸರು ಮೋಹಿನಿ ಎಂಬ ಯುವತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.












