ಬೆಂಗಳೂರು: ರ್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾಗಿದ್ದಾನೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯಿಂದ ಮಾನ್ಯತಾ ಟೆಕ್ ಪಾರ್ಕ್ ಕಚೇರಿಗೆ ತೆರಳಲು ಮಹಿಳಾ ಟೆಕ್ಕಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಬಳಿಕ ಟೆಕ್ಕಿ ಬೈಕ್ ನಲ್ಲಿ ಕುಳಿತು ಮಧ್ಯದಲ್ಲಿ ಬ್ಯಾಗ್ ಇಟ್ಟಿದ್ದರು. ಈ ವೇಳೆ ಬೈಕ್ ಚಾಲಕ ಹಿಂದೆ ಹಿಂದೆ ಸರಿದು ಬರ್ತಿದ್ದ.ಯಾಕೆ ಹಿಂದೆ ಬರ್ತಿಯಾ ಎಂದು ಪ್ರಶ್ನೆ ಮಾಡಿದಾಗ ಯುವತಿಯ ತೊಡೆಯ ಭಾಗದಲ್ಲಿ ಕೈ ಹಾಕಿ ಅಸಭ್ಯವಾಗಿ ಸ್ಪರ್ಶಿಸಿದ್ದ. ಇದರಿಂದ ಬೈಕ್ ನಿಲ್ಲಿಸುವಂತೆ ಯುವತಿ ಕಿರುಚಾಡಿದ್ದರು. ಆದರು ಯುವತಿಯ ಎದೆ ಭಾಗಕ್ಕೆ ಕೈ ಹಾಕಿದ ಆರೋಪಿ ವಿಚಿತ್ರವಾಗಿ ವರ್ತಿಸಿದ್ದ.
ಯುವತಿ ಕಿರುಚಾಟದಿಂದ ಬೈಕ್ ನಿಲ್ಲಿಸಿದಾಗ ಹಣ ಪೇ ಮಾಡು ಎಂದು ಹಿಂಸೆ ಕೊಟ್ಟಿದ್ದ. ಬಳಿಕ 112ಗೆ ಯುವತಿ ಕರೆ ಮಾಡಿದಳು. ಆದರೆ ಯುವತಿಯನ್ನ ಬೈಕ್ ನಿಂದ ಕೆಳಗಿಳಿಸಿ ಬೈಕ್ ಚಾಲಕ ಎಸ್ಕೇಪ್ ಆಗಿದ್ದ.
ಘಟನೆ ಬಳಿಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಯುವತಿದೂರು ಕೊಟ್ಟಿದ್ದಳು. ದೂರಿನ ಅನ್ವಯ ಕೇಸ್ ದಾಖಲು ಮಾಡಿದ್ದ ಪೊಲೀಸರು
ವಿವೇಕ್ ಎಂಬಾತನನ್ನ ಬಂಧಿಸಿದ್ದಾರೆ.











