ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಂಬಂಧ ವಿಚಾರಣೆ ನಡೆಸಿದ ನ್ಯಾ.ಜಿ.ಬಸವರಾಜು ಏಕಸದಸ್ಯ ಪೀಠ, ಬಸವರಾಜ್ ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ವಿಚಾರಣೆಯನ್ನ ಜ.6ಕ್ಕೆ ಮುಂದೂಡಿದೆ.

ಸಿಐಡಿ ಪರ ವಾದ ಮಂಡಿಸಿದ ಸರ್ಕಾರಿ ಪರ ವಕೀಲರು, ಪ್ರಕರಣ ಸಂಬಂಧ ಎಸ್ ಪಿಪಿ ನೇಮಕವಾಗಿದ್ದು, ಕಾಲಾವಕಾಶ ಕೋರಿದರು. ಆದರೆ
ಬೈರತಿ ಬಸವರಾಜ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ ಚೌಟ, ರಾಜಕೀಯ ಕಾರಣಕ್ಕೆ ಶಾಸಕರನ್ನ ಕೇಸ್ ನಲ್ಲಿ ಸಿಲುಕಿಸಲು ಯತ್ನಿಸಲಾಗಿದೆ. ಬಿಕ್ಲು ಶಿವ ಕೊಲೆಯಲ್ಲಿ ಬೈರತಿ ಬಸವರಾಜ್ ಪ್ರಕರಣ ಸಿಐಡಿಗೆ ವರ್ಗಾವಣೆಯಾದ ಬಳಿಕ ಬಂಧಿಸಲು ಯತ್ನಿಸಲಾಗುತ್ತಿದೆ. ಹೀಗಾಗಿ ಕೊಲೆಯಲ್ಲಿ ಯಾವುದೇ ಪಾತ್ರವಿಲ್ಲವೆಂದು ಪ್ರಮಾಣಪತ್ರ ಸಲ್ಲಿಸುತ್ತೇವೆ ಎಂದು ತಿಳಿಸದರು. ಹಾಗೆ ನೋಟಿಸ್ ನೀಡಿದಾಗ ಬೈರತಿ ಬಸವರಾಜು ತನಿಖೆಗೆ ಹಾಜರಾಗಿದ್ದಾರೆ.

ವಾದ ಪ್ರತಿವಾದ ಬಳಿಕ ಬೈರತಿ ಬಸವರಾಜು ವಿರುದ್ಧ ಇನ್ನೂ ಆರೋಪಪಟ್ಟಿ ಸಲ್ಲಿಸಿಲ್ಲ. ಆರೋಪಪಟ್ಟಿ ಸಲ್ಲಿಸದಿರುವುದಕ್ಕೆ ತನಿಖಾಧಿಕಾರಿ ಸರಿಯಾದ ಕಾಎಣ ನೀಡಿಲ್ಲ ಎಂದ ಅಭಿಪ್ರಾಯ ಪಟ್ಟ ನ್ಯಾಯಾಧೀಶರು
ಬೈರತಿ ಬಸವರಾಜು ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಆದೇಶ ಮಾಡಿದರು..












