• Home
  • About Us
  • ಕರ್ನಾಟಕ
Thursday, January 8, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

HD Kumarswamy: ಮದ್ಯದ ಅಂಗಡಿಗಳಿಗೆ ಪರವಾನಗಿ ನೆಪದಲ್ಲಿ ಕೋಟಿ ಕೋಟಿ ಸುಲಿಗೆ! ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ನೇರ ಆರೋಪ, ಅಭಿವೃದ್ಧಿಗೆ ಹಣವಿಲ್ಲ, ಖಜಾನೆ ಖಾಲಿ ಆಗಿದೆ ಎಂದ ಕೇಂದ್ರ ಸಚಿವರು

ಪ್ರತಿಧ್ವನಿ by ಪ್ರತಿಧ್ವನಿ
December 25, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ದಾವಣಗೆರೆಯಲ್ಲಿ ಶ್ರೀ ಶಾಮನೂರು ಶಿವಶಂಕರಪ್ಪ ಅವರ ಸಮಾಧಿ ಸ್ಥಳಕ್ಕೆ ಭೇಟಿ, ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಕೇಂದ್ರ ಸಚಿವರು.
ರಾಜ್ಯ ಸರ್ಕಾರವು ಗ್ಯಾರಂಟಿಗಳಿಗೆ ಹಣ ಹೊಂದಿಸಿಕೊಳ್ಳಲು, ಖಾಲಿ ಆಗಿರುವ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ನೆಪದಲ್ಲಿ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪಿಸಿದರು. ದಾವಣಗೆರೆಯಲ್ಲಿ ಗುರುವಾರ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಸ್ಮೃತಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ADVERTISEMENT

ಮದ್ಯದಂಗಡಿ ಪರವಾನಗಿ ಒಂದಕ್ಕೆ ₹ 1.95 ಕೋಟಿ ದರವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ. ಇದು ಲೂಟಿನಲ್ಲೇ ಮತ್ತೇನು? ಜನರಿಗೆ ಇನ್ನು ದೊಡ್ಡ ಪ್ರಮಾಣದಲ್ಲಿ ಕುಡಿತದ ಚಟ ಹತ್ತಿಸಲು ಸರ್ಕಾರವೇ ಉತ್ತೇಜನ ನೀಡುತ್ತಿದೆ. ಇದೇ ರೀತಿ ಪ್ರತಿಯೊಂದು ಇಲಾಖೆಯನ್ನು ಲೂಟಿ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್‌ಪಿ) ಸೇರಿದಂತೆ ವಿವಿಧ ಯೋಜನೆಗಳ ಹಣ, ಅನುದಾನವನ್ನು ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ರಾಜ್ಯದ ಖಾಜಾನೆಯನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಮದ್ಯದಂಗಡಿ ಹರಾಜು ಮೂಲಕ ಸುಳಿಗೆಬಿಡೆಯುವುದು ರಾಜ್ಯ ಸರ್ಕಾರವು ಜನತೆಗೆ ನೀಡುತ್ತಿರುವ ಹೊಸ ವರ್ಷದ ಕೊಡುಗೆ’ ಎಂದು ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

ಗೃಹಲಕ್ಷ್ಮೀ ಯೋಜನೆಯಲ್ಲಿ ಮಹಿಳೆಯರ ಖಾತೆಗೆ ಜಮಾ ಆಗಬೇಕಾದ ₹5000 ಕೋಟಿ ಎಲ್ಲಿ ಹೋಯಿತು ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೂ ಜನತೆಗೆ ಮಾಹಿತಿ ಕೊಟ್ಟಿಲ್ಲ. ನನಗೆ ಈ ವಿಷಯವೇ ಗೊತ್ತಿಲ್ಲ ಎಂದು ಸಿಎಂ ಅವರೇ ಹೇಳುತ್ತಾರೆ. ದಾಖಲೆಯ ಬಜೆಟ್ ಗಳನ್ನು ಮಂಡಿಸಿರುವ ಆವರೆಗೆ ತಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ? ಹಣ ಏನಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದಾಗಿ ಹೇಳಿಕೊಳ್ಳುವ ಇವರಂತಹ ಆರ್ಥಿಕ ತಜ್ಞರವನ್ನು ಪ್ರಪಂಚದಲ್ಲಿಯೇ ಕಾಣಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಅಭಿವೃದ್ಧಿ ಪಾತಾಳಕ್ಕೆ ಬಿದ್ದಿದೆ. ಕೇವಲ ಗ್ಯಾರಂಟಿ ಅಂತ ಹೇಳಿಕೊಂಡು ಎರಡೂವರೆ ವರ್ಷ ಆಡಳಿತ ನಡೆಸಿದ್ದಾರೆ. ರಾಜ್ಯದ ರಸ್ತೆಗಳನ್ನು ನೋಡಿದರೆ ಇವರ ಆಡಳಿತದ ಹಣೆಬರಹ ಗೊತ್ತಾಗುತ್ತದೆ. ಅಧಿಕಾರ ಹಂಚಿಕೆ ಕಿತ್ತಾಟದಲ್ಲಿಯೇ ಸಿಎಂ, ಡಿಸಿಎಂ ಇಷ್ಟು ದಿನ ಕಾಲಹರಣ ಮಾಡಿದ್ದಾರೆ. ಇವರನ್ನು ಜನರು ಕ್ಷಮಿಸುವುದಿಲ್ಲ ಎಂದು ಕೇಂದ್ರ ಸಚಿವರು ಟೀಕಾ ಪ್ರಹಾರ ನಡೆಸಿದರು.

ಶಾಮನೂರು ಶಿವಶಂಕರಪ್ಪ ಅವರಿಗೆ ನಮನ:
ಇದಕ್ಕೂ ಮುನ್ನ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇತ್ತೀಚಿಗೆ ಅಗಲಿದ ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದರು. ಬಳಿಕ ಶಾಮನೂರು ಅವರ ನಿವಾಸಕ್ಕೆ ತೆರಳಿ ಅವರ ಪುತ್ರ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರೆಲ್ಲರೂ ಹಾಜರಿದ್ದರು.

ತದನಂತರ ಕೇಂದ್ರ ಸಚಿವರು ಮಾಜಿ ಶಾಸಕ ಶಿವಶಂಕರ್ ಅವರ ನಿವಾಸಕ್ಕೆ ಭೇಟಿ ನೀಡಿದರು.
ಮಾಜಿ ಮಂತ್ರಿ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡರು, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ. ರಮೇಶ್ ಗೌಡ ಮುಂತಾದವರು ಕೇಂದ್ರ ಸಚಿವರ ಜತೆಯಲ್ಲಿದ್ದರು.

Tags: b y vijayendra met h d kumaraswamyb y vijayendra visits h d kumaraswamy houseby vijayendra hd kumaraswamyDavanageredk shivakumar vs hd kumaraswamyH D Kumaraswamyhd kumaraswam nose bleedHD Kumaraswamyhd kumaraswamy bhavani revannahd kumaraswamy healthhd kumaraswamy livehd kumaraswamy newshd kumaraswamy on bhagavad gitahd kumaraswamy press meet livehd kumaraswamy videohd kumaswamyKarnatakakumaraswamykumaraswamy birthdaykumarswamyNikhil KumaraswamyNikhil Kumarswamynikhil kumarswamy revathishamanur shivashankarappaSS Mallikarjun
Previous Post

ಇಳಿವಯಸ್ಸಿನಲ್ಲೂ ನಾನು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಿದೆ-ಹೆಚ್‌.ಡಿ ದೇವೇಗೌಡ

Next Post

ಕಾರ್ಯಕರ್ತನಾಗಿ ಕಸ ಗುಡಿಸಿದ್ದೇನೆ, ಪಕ್ಷದ ಬಾವುಟ ಕಟ್ಟಿದ್ದೇನೆ-ಡಿ.ಕೆ ಶಿವಕುಮಾರ್

Related Posts

BBK 12: ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಅಬ್ಬರಕ್ಕೆ ಬಿಗ್‌ ಬಾಸ್‌ ಮನೆ ಮಂದಿ ಫುಲ್‌ ಶಾಕ್‌..!
Top Story

BBK 12: ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಅಬ್ಬರಕ್ಕೆ ಬಿಗ್‌ ಬಾಸ್‌ ಮನೆ ಮಂದಿ ಫುಲ್‌ ಶಾಕ್‌..!

by ಪ್ರತಿಧ್ವನಿ
January 8, 2026
0

ಬಿಗ್‌ ಬಾಸ್‌ ಕನ್ನಡ(Bigg Boss Kannada) ಸೀಸನ್‌ 12 ಅಂತಿಮ ಹಂತಕ್ಕೆ ತಲುಪುತ್ತಿದ್ದು, ಈ ವಾರ ಟಾಪ್‌ 6 ಸ್ಪರ್ಧಿಯ ಸ್ಥಾನಕ್ಕಾಗಿ ಮನೆ ಮಂದಿ ಹೋರಾಟಕ್ಕಿಳಿದಿದ್ದಾರೆ. ಈ...

Read moreDetails
ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಅವಮಾನ ಆರೋಪ: ರಾಜಕೀಯ ಬೇಡ ಎಂದ ಗೃಹ ಸಚಿವರು

ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಅವಮಾನ ಆರೋಪ: ರಾಜಕೀಯ ಬೇಡ ಎಂದ ಗೃಹ ಸಚಿವರು

January 8, 2026
‘ವರ್ಡ್ ಪವರ್ ಈಸ್ ವರ್ಲ್ಡ್ ಪವರ್’, ಕೊಟ್ಟ ಮಾತಿನಂತೆ ನಡೆಯಬೇಕು. ಡಿ.ಕೆ. ಶಿವಕುಮಾರ್

‘ವರ್ಡ್ ಪವರ್ ಈಸ್ ವರ್ಲ್ಡ್ ಪವರ್’, ಕೊಟ್ಟ ಮಾತಿನಂತೆ ನಡೆಯಬೇಕು. ಡಿ.ಕೆ. ಶಿವಕುಮಾರ್

January 8, 2026
ರಾಜಕೀಯ ಟೀಕೆ ಧರ್ಮದ ದ್ವೇಷವೇ? ಒಂದು ಅಪಾಯಕಾರಿ ಮಿಥ್ಯೆ..!

ರಾಜಕೀಯ ಟೀಕೆ ಧರ್ಮದ ದ್ವೇಷವೇ? ಒಂದು ಅಪಾಯಕಾರಿ ಮಿಥ್ಯೆ..!

January 8, 2026
ವಿದ್ಯಾರ್ಥಿಗಳಿಗೆ ನಮ್ಮ ಮೆಟ್ರೋದಲ್ಲಿ ರಿಯಾಯಿತಿ ಪಾಸ್‌ ನೀಡಲು ಸಹಿ ಸಂಗ್ರಹಿಸಿದ ಎಎಪಿ ಯುವ ಘಟಕ..

ವಿದ್ಯಾರ್ಥಿಗಳಿಗೆ ನಮ್ಮ ಮೆಟ್ರೋದಲ್ಲಿ ರಿಯಾಯಿತಿ ಪಾಸ್‌ ನೀಡಲು ಸಹಿ ಸಂಗ್ರಹಿಸಿದ ಎಎಪಿ ಯುವ ಘಟಕ..

January 8, 2026
Next Post
ಕಾರ್ಯಕರ್ತನಾಗಿ ಕಸ ಗುಡಿಸಿದ್ದೇನೆ, ಪಕ್ಷದ ಬಾವುಟ ಕಟ್ಟಿದ್ದೇನೆ-ಡಿ.ಕೆ ಶಿವಕುಮಾರ್

ಕಾರ್ಯಕರ್ತನಾಗಿ ಕಸ ಗುಡಿಸಿದ್ದೇನೆ, ಪಕ್ಷದ ಬಾವುಟ ಕಟ್ಟಿದ್ದೇನೆ-ಡಿ.ಕೆ ಶಿವಕುಮಾರ್

Recent News

BBK 12: ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಅಬ್ಬರಕ್ಕೆ ಬಿಗ್‌ ಬಾಸ್‌ ಮನೆ ಮಂದಿ ಫುಲ್‌ ಶಾಕ್‌..!
Top Story

BBK 12: ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಅಬ್ಬರಕ್ಕೆ ಬಿಗ್‌ ಬಾಸ್‌ ಮನೆ ಮಂದಿ ಫುಲ್‌ ಶಾಕ್‌..!

by ಪ್ರತಿಧ್ವನಿ
January 8, 2026
ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಅವಮಾನ ಆರೋಪ: ರಾಜಕೀಯ ಬೇಡ ಎಂದ ಗೃಹ ಸಚಿವರು
Top Story

ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಅವಮಾನ ಆರೋಪ: ರಾಜಕೀಯ ಬೇಡ ಎಂದ ಗೃಹ ಸಚಿವರು

by ಪ್ರತಿಧ್ವನಿ
January 8, 2026
‘ವರ್ಡ್ ಪವರ್ ಈಸ್ ವರ್ಲ್ಡ್ ಪವರ್’, ಕೊಟ್ಟ ಮಾತಿನಂತೆ ನಡೆಯಬೇಕು. ಡಿ.ಕೆ. ಶಿವಕುಮಾರ್
Top Story

‘ವರ್ಡ್ ಪವರ್ ಈಸ್ ವರ್ಲ್ಡ್ ಪವರ್’, ಕೊಟ್ಟ ಮಾತಿನಂತೆ ನಡೆಯಬೇಕು. ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
January 8, 2026
ರಾಜಕೀಯ ಟೀಕೆ ಧರ್ಮದ ದ್ವೇಷವೇ? ಒಂದು ಅಪಾಯಕಾರಿ ಮಿಥ್ಯೆ..!
Top Story

ರಾಜಕೀಯ ಟೀಕೆ ಧರ್ಮದ ದ್ವೇಷವೇ? ಒಂದು ಅಪಾಯಕಾರಿ ಮಿಥ್ಯೆ..!

by ಪ್ರತಿಧ್ವನಿ
January 8, 2026
ವಿದ್ಯಾರ್ಥಿಗಳಿಗೆ ನಮ್ಮ ಮೆಟ್ರೋದಲ್ಲಿ ರಿಯಾಯಿತಿ ಪಾಸ್‌ ನೀಡಲು ಸಹಿ ಸಂಗ್ರಹಿಸಿದ ಎಎಪಿ ಯುವ ಘಟಕ..
Top Story

ವಿದ್ಯಾರ್ಥಿಗಳಿಗೆ ನಮ್ಮ ಮೆಟ್ರೋದಲ್ಲಿ ರಿಯಾಯಿತಿ ಪಾಸ್‌ ನೀಡಲು ಸಹಿ ಸಂಗ್ರಹಿಸಿದ ಎಎಪಿ ಯುವ ಘಟಕ..

by ಪ್ರತಿಧ್ವನಿ
January 8, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಅಬ್ಬರಕ್ಕೆ ಬಿಗ್‌ ಬಾಸ್‌ ಮನೆ ಮಂದಿ ಫುಲ್‌ ಶಾಕ್‌..!

BBK 12: ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಅಬ್ಬರಕ್ಕೆ ಬಿಗ್‌ ಬಾಸ್‌ ಮನೆ ಮಂದಿ ಫುಲ್‌ ಶಾಕ್‌..!

January 8, 2026
ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಅವಮಾನ ಆರೋಪ: ರಾಜಕೀಯ ಬೇಡ ಎಂದ ಗೃಹ ಸಚಿವರು

ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಅವಮಾನ ಆರೋಪ: ರಾಜಕೀಯ ಬೇಡ ಎಂದ ಗೃಹ ಸಚಿವರು

January 8, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!