ಮೇಷ ರಾಶಿಯ ಇಂದಿನ ಭವಿಷ್ಯ

ಮೇಷ ರಾಶಿಯವರ ಈ ದಿನ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುತ್ತೆ ಹಾಗೂ ಮಾನಸಿಕ ನೆಮ್ಮದಿ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಸ್ವಂತ ಉದ್ಯೋಗಸ್ಥರಿಗೆ ಹೆಚ್ಚಿನ ಮಟ್ಟಿಗೆ ಲಾಭ ಪ್ರಾಪ್ತಿಯಾಗುತ್ತದೆ. ಆರೋಗ್ಯದ ಬಗ್ಗೆ ಗಮನ ಇರಲಿ.
ವೃಷಭ ರಾಶಿಯ ಇಂದಿನ ಭವಿಷ್ಯ

ವೃಷಭ ರಾಶಿಯವರಿಗೆ ಇಂದು ನಿಮಗೆ ಅಗತ್ಯಕ್ಕಿಂತ ಹೆಚ್ಚು ಖರ್ಚುಗಳು ಉಂಟಾಗುತ್ತದೆ. ಸಣ್ಣ ವಿಚಾರದ ಕೆಲಸ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಫಲಿತಾಂಶ ಸಿಗಲಿದೆ.
ಮಿಥುನ ರಾಶಿಯ ಇಂದಿನ ಭವಿಷ್ಯ

ಮಿಥುನ ರಾಶಿಯವರಿಗೆ ನಿಮಗೆ ಹಣಕಾಸಿನ ವಿಚಾರದಲ್ಲಿ ಹಠಾತ್ ಬದಲಾವಣೆಗಳು ಸಂಭವಿಸಬಹುದು.ಮನೆಯಲ್ಲಿ ಬೇಡವಾದ ವಾದ ವಿವಾದಗಳು ಉಂಟಾಗುತ್ತವೆ. ಅದರ ಜೊತೆ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತದೆ. ಹೀಗಾಗಿ ಮಾತಿನಲ್ಲಿ ನಡೆ ನುಡಿಯಲ್ಲಿ ಎಚ್ಚರಿಕೆ ಇರಲಿ.
ಕರ್ಕಾಟಕ ರಾಶಿಯ ಇಂದಿನ ಭವಿಷ್ಯ

ಕರ್ಕಾಟಕ ರಾಶಿಯವರು ಆಸ್ತಿಯನ್ನು ಮಾರಾಟ ಮಾಡಲು ಇಂದು ಉತ್ತಮವಾದ ದಿನ. ವ್ಯಾಪಾರ ವ್ಯವಹಾರದಲ್ಲಿ ಹಣದ ಹರಿವು ಉತ್ತಮವಾಗಿರುತ್ತದೆ ಹಾಗೂ ಈ ದಿನ ಲಾಭದ ದಿನವಾಗಿದೆ. ದೂರ ಪ್ರಯಾಣವನ್ನು ಇಂದು ಆದಷ್ಟು ಕಡಿಮೆಮಾಡಿಕೊಳ್ಳಿ.
ಸಿಂಹ ರಾಶಿಯ ಇಂದಿನ ಭವಿಷ್ಯ

ಸಿಂಹ ರಾಶಿಯವರಿಗೆ ಈ ದಿನ ನಿಮ್ಮೆಲ್ಲಾ ಕೆಲಸಗಳು ಯಶಸ್ವಿಯಾಗಿ ನಡೆಯುತ್ತದೆ. ಶತ್ರುಗಳ ಭಯ ಕಾಡುತ್ತದೆ. ಮಕ್ಕಳ ವಿಚಾರದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ. ವ್ಯರ್ಥ ಖರ್ಚಿ ನೂರು ದಾರಿ ಕಾಣಬಹುದು. ಹಣವನ್ನು ಎಚ್ಚರಿಕೆಯಿಂದ ಬಳಸಿ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಕನ್ಯಾ ರಾಶಿಯವರ ಹೊಸ ಆಲೋಚನೆ ಹಾಗೂ ಯೋಜನೆಗಳಿಗೆ ಹಣದ ಅಭಾವ ಉಂಟಾಗುತ್ತದೆ ಹಾಗೂ ಕೆಲ ಸಮಸ್ಯೆಗಳು ಎದುರಾಗುತ್ತವೆ. ಕೆಲಸ ಕಾರ್ಯಗಳಲ್ಲಿ ವಿಳಂಬ ಉಂಟಾಗುತ್ತದೆ. ಬಹು ದಿನಗಳಿಂದ ಬಾಕಿ ಉಳಿದಿದ್ದ ಕೆಲಸವೊಂದು ನೆರವೇರುವ ಸಾಧ್ಯತೆ ಇದೆ.
ತುಲಾ ರಾಶಿಯ ಇಂದಿನ ಭವಿಷ್ಯ

ತುಲಾ ರಾಶಿಯವರು ಇಂದು ಆಸ್ತಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಉತ್ತಮ ಅಭಿವೃದ್ಧಿ ಹಾಗೂ ಲಾಭ ಉಂಟಾಗುತ್ತದೆ. ಕೌಟುಂಬಿಕ ಕಿರಿ ಕಿರಿ ಕಮ್ಮಿಯಾಗಲಿದೆ. ನಿರೀಕ್ಷಿಸದ ಹಣವೊಂದು ಇಂದು ನಿಮ್ಮ ಕೈ ಸೇರುವ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಸುಧಾರಿಸಲಿದೆ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಇಂದು ಹಣಕಾಸಿನ ವ್ಯವಹಾರದಲ್ಲಿ ಒಂದಷ್ಟು ಖರ್ಚುಗಳು ಹೆಚ್ಚಾಗುತ್ತವೆ. ಸಂಘ ಸಂಸ್ಥೆ ಕ್ಷೇತ್ರದಲ್ಲಿ ಇರುವಂಥವರಿಗೆ ಸಾಮಾಜಿಕ ಮನ್ನಣೆ ಸಿಗಲಿದೆ. ವಿದೇಶ ಪ್ರವಾಸದ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಕುಟುಂಬಸ್ಥರೊಂದಿಗೆ ಸಂಯಮದಿಂದ ನಡೆದುಕೊಳ್ಳಿ.
ಧನು ರಾಶಿಯ ಇಂದಿನ ಭವಿಷ್ಯ

ಧನುಸ್ಸು ರಾಶಿಯವರು ಇಂದು ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಸುತ್ತ ಇರುವ ಹಿತ ಶತ್ರುಗಳ ಸುಳಿವು ಸಿಗಲಿದೆ. ಬಹು ದಿನಗಳಿಂದ ನಿರೀಕ್ಷಿಸಿದ್ದ ಸಿಹಿ ಸುದ್ದಿಯೊಂದು ಮನೆಯ ಸಂತೋಷ ಹೆಚ್ಚಿಸಲಿದೆ. ಇಂದು ಯಾರೊಂದಿಗೂ ಸಾಲದ ವ್ಯವಹಾರ ಬೇಡ.
ಮಕರ ರಾಶಿಯ ಇಂದಿನ ಭವಿಷ್ಯ

ಮಕರ ರಾಶಿಯವರಿಗೆ ಇಂದು ಅದೃಷ್ಟ ನಿಮ್ಮ ಕೈ ಹಿಡಿಯಲಿದ್ದು ಹೆಜ್ಜೆ-ಹೆಜ್ಜೆಗೂ ಅನುಕೂಲಕರ ಪರಿಸ್ಥಿತಿ ಇರಲಿದೆ. ಹಳೆಯ ಸ್ನೇಹಿತರ ಭೇಟಿಯಾಗುವ ಸಾಧ್ಯತೆ ಇದೆ. ಖರ್ಚುಗಳು ಸುಮ್ಮನೇ ಹೆಚ್ಚಾಗುತ್ತವೆ.
ಕುಂಭ ರಾಶಿಯ ಇಂದಿನ ಭವಿಷ್ಯ

ಕುಂಭ ರಾಶಿಯವರು ಈ ದಿನ ನೀವು ಮಾಡಿದ ಕಾರ್ಯಗಳು ಯಶಸ್ವಿಯಾಗುತ್ತವೆ. ಹೂಡಿಕೆಯಿಂದ ಲಾಭ ಗಳಿಸುವ ಸಾಧ್ಯತೆಗಳು ಹೆಚ್ಚು. ಪ್ರೇಮ ಸಂಬಂಧಗಳಲ್ಲಿ ಬಾಂಧವ್ಯ ಹೆಚ್ಚಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಆಹಾರದ ಮೇಲೆ ನಿಗಾ ಇರಲಿ.
ಮೀನ ರಾಶಿಯ ಇಂದಿನ ಭವಿಷ್ಯ

ಮೀನ ರಾಶಿಯವರಿಗೆ ಇಂದು ಬೇಡವಾದ ಚಿಂತೆಗಳು ಹೆಚ್ಚು ಕಾಡುತ್ತದೆ. ಮನೆಯಲ್ಲಿ ಅನಾವಶ್ಯಕ ವಾದಗಳನ್ನು ತಪ್ಪಿಸಿ. ವಾಹನವನ್ನು ಅಜಾಗರೂಕತೆಯಿಂದ ಓಡಿಸಬೇಡಿ. ಇಂದು ಮಾತಿನಲ್ಲಿ ನಿಯಂತ್ರಣ ಇರುವಷ್ಟೂ ಒಳ್ಳೆಯದು. ಮನೆ ದೇವರ ದರ್ಶನ ಪಡೆಯಿರಿ.











